ರೈತರಿಗೆ ಪರಿಹಾರ ನೀಡಲು ಲಂಚ: ಏಳು ಮಂದಿ ಬಂಧನ

  |   Bangalore-Citynews

ಬೆಂಗಳೂರು: ನೆಲಮಂಗಲ ಬಳಿಯ ಸೋಂಪುರ ಕೈಗಾರಿಕಾ ಪ್ರದೇಶ ಅಭಿವೃದ್ಧಿ ಉದ್ದೇಶಕ್ಕೆ ಭೂಮಿ ನೀಡಿದ ರೈತರಿಗೆ ಕೊಡುವ ಪರಿಹಾರ ಮೊತ್ತದಲ್ಲಿ ಶೇ.10ರಷ್ಟು ಹಣವನ್ನು ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ (ಕೆಐಎಡಿಬಿ) ಅಧಿಕಾರಿಗಳು ಲಂಚವಾಗಿ ಪಡೆಯುತ್ತಿದ್ದ ಅಕ್ರಮನ್ನು ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ಬಯಲಿಗೆ ಎಳೆದಿದೆ.

ರೇಸ್‌ಕೋರ್ಸ್‌ ರಸ್ತೆಯ ಖನಿಜ ಭವನದಲ್ಲಿರುವ ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ (ಕೆಐಎಡಿಬಿ) ಕಚೇರಿ ಮೇಲೆ ಎಸಿಬಿ ಅಧಿಕಾರಿಗಳು, ಮಂಗಳವಾರ ರಾತ್ರಿ ಇಡೀ ಶೋಧ ಕಾರ್ಯಾಚರಣೆ ನಡೆಸಿದ್ದು, ಅಕ್ರಮವಾಗಿ ಸಂಗ್ರಹಿಸಿಡಲಾಗಿದ್ದ 12.96 ಲಕ್ಷ ರೂ. ನಗದು ಜಪ್ತಿ ಮಾಡಿಕೊಂಡಿದ್ದಾರೆ. ಅಲ್ಲದೆ ರೈತರಿಂದ ಪಡೆದಿದ್ದ 13 ಬ್ಯಾಂಕ್‌ ಚೆಕ್‌ಗಳು, ಭೂ ದಾಖಲೆಗಳು ಸಿಕ್ಕಿವೆ. ಲಂಚದ ಹಣ ಸ್ವೀಕರಿಸಿ ಅಕ್ರಮ ಎಸಗುತ್ತಿದ್ದ ಒಬ್ಬ ಕೆಐಎಡಿಬಿ ಅಧಿಕಾರಿ, ಆರು ಮಧ್ಯವರ್ತಿಗಳನ್ನು ಬಂಧಿಸಿದ್ದಾರೆ.

ಕೆಐಎಡಿಬಿ ಹಿರಿಯ ಸಹಾಯಕ ಎಸ್‌.ಎಲ್‌.ಎ ಓ-2 ಆಗಿರುವ ಶ್ರೀನಿವಾಸ್‌, ಮಧ್ಯವರ್ತಿಗಳಾದ ದೇವರಾಜ್‌, ನಾರಾಯಣ ಸ್ವಾಮಿ, ಜಗದೀಶ್‌, ನವೀನ್‌ ಕುಮಾರ್‌, ಸಮೀರ್‌ ಪಾಷ ಹಾಗೂ ಕೇಶವ ಬಂಧಿತ ಆರೋಪಿಗಳು. ಇನ್ನೂ ಹಲವು ಮಂದಿ ಅಧಿಕಾರಿಗಳು ಹಾಗೂ ಮಧ್ಯವರ್ತಿಗಳು ಈ ಅಕ್ರಮದಲ್ಲಿ ಭಾಗಿಯಾಗಿರುವುದು ಕಂಡು ಬಂದಿದ್ದು, ತನಿಖೆ ಮುಂದುವರಿಸಲಾಗಿದೆ ಎಂದು ಎಸಿಬಿ ಅಧಿಕಾರಿಗಳು ತಿಳಿಸಿದ್ದಾರೆ....

ಫೋಟೋ - http://v.duta.us/26fSWgAA

ಹೆಚ್ಚು ಓದಲು ಇಲ್ಲಿ ಕ್ಲಿಕ್ ಮಾಡಿ - http://v.duta.us/gNiGagAA

📲 Get Bangalore City News on Whatsapp 💬