ವಿದ್ಯಾರ್ಥಿಗಳಿಗೆ "ಆತ್ಮಹತ್ಯೆ ತಡೆ' ತರಬೇತಿ

  |   Bangalore-Citynews

ಬೆಂಗಳೂರು: ಕಾಲೇಜುಗಳ ಚುರುಕಾಗಿರುವ ವಿದ್ಯಾರ್ಥಿಗಳಿಗೆ "ಆತ್ಮಹತ್ಯೆ ತಡೆ' ಕುರಿತು ತರಬೇತಿ ನೀಡುವ ಮೂಲಕ ಹದಿಹರೆಯದ ವಯಸ್ಸಿನವರಲ್ಲಿ ಹೆಚ್ಚುತ್ತಿರುವ ಆತ್ಮಹತ್ಯೆ ಪ್ರಮಾಣವನ್ನು ತಗ್ಗಿಸಲು ನಿಮ್ಹಾನ್ಸ್‌ನ ಮಾನಸಿಕ ಶಿಕ್ಷಣ ವಿಭಾಗವು ಮುಂದಾಗಿದೆ.

ಪ್ರತಿ ಕಾಲೇಜುನಲ್ಲಿ 18ರಿಂದ 20 ವಿದ್ಯಾರ್ಥಿಗಳಿಗೆ "ಪೀರ್‌ ಲೀಡರ್ "ಎಂದು ಆಯ್ಕೆ ಮಾಡಿ ಮೂರು ದಿನಗಳ ಕಾಲ ತಡಬೇತಿ ನೀಡಿ ಅವರುಗಳ ಮೂಲಕ ಕಾಲೇಜು ವ್ಯಾಪ್ತಿಯಲ್ಲಿ ಹಾಗೂ ಸ್ನೇಹಿತ ಬಳಗದ ಯುವಕ ಯುವತಿಯರಲ್ಲಿ ಕಂಡು ಬರುವ ಆತ್ಮಹತ್ಯೆ ಆಲೋಚನೆ/ಆತ್ಮಹತ್ಯೆ ಮನಸ್ಥಿತಿಯನ್ನೇ ಮಟ್ಟಹಾಕಲು ಚಿಂತನೆ ನಡೆಸಿದೆ.

ಈ ಕಾರ್ಯಕ್ರಮದ ಸಾಧಕ-ಬಾಧಕ ತಿಳಿಯುವ ನಿಟ್ಟಿನಲ್ಲಿ ನಿಮ್ಹಾನ್ಸ್‌ ಪ್ರಾಯೋಗಿಕವಾಗಿ ನಗರದ ಎರಡು ಕಾಲೇಜುಗಳ ವಿದ್ಯಾರ್ಥಿಗಳಿಗೆ ಮುಂದಿನ ವಾರ "ಆತ್ಮಹತ್ಯೆ ತಡೆ' ತರಬೇತಿ ನೀಡುತ್ತಿದೆ. ಇಲ್ಲಿ ಬರುವ ಅಭಿಪ್ರಾಯಗಳು, ತರಬೇತಿ ಪಡೆದ ಕಾಲೇಜು ವಿದ್ಯಾರ್ಥಿಗಳ ಚಟುವಟಿಕೆ ಹಾಗೂ ಪಾಲ್ಗೊಳ್ಳುವಿಕೆ ಆಧರಿಸಿ ಮುಂದಿನ ವರ್ಷದಿಂದ ಆರೋಗ್ಯ ಇಲಾಖೆ ಸಹಕಾರದೊಂದಿಗೆ ನಗರದ ಎಲ್ಲಾ ಕಾಲೇಜುಗಳಲ್ಲಿಯೂ ಈ ಕಾರ್ಯಕ್ರಮ ಜಾರಿಗೊಳಿಸಲಿದೆ.

ನಗರ ಮುಂಚೂಣಿಯಲ್ಲಿ: ಬೆಂಗಳೂರು ನಗರ ಆತ್ಮಹತ್ಯೆಯಲ್ಲಿ ಮುಂಚೂಣಿಯಲ್ಲಿದ್ದು, ನಗರ ವ್ಯಾಪ್ತಿಯಲ್ಲಿ 2017 ರಿಂದ 2019 ಆಗಸ್ಟ್‌ವರೆಗೂ ಒಟ್ಟು 5,232 ಮಂದಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇತ್ತೀಚಿನ ದಿನಗಳಲ್ಲಿ 16ರಿಂದ 21 ವರ್ಷದೊಳಗಿನವರಲ್ಲಿಯೇ ಆತ್ಮಹತ್ಯೆ ಪ್ರಮಾಣ ಹೆಚ್ಚಳವಾಗಿದೆ. ಪ್ರಮುಖವಾಗಿ ಹದಿಹರೆಯದ ವಯಸ್ಸಿನವರು ಹೆಚ್ಚಾಗಿ ಸ್ನೇಹಿತರೊಟ್ಟಿಗೆ ಬೆರೆಯುತ್ತಾರೆ....

ಫೋಟೋ - http://v.duta.us/UWRo2gAA

ಹೆಚ್ಚು ಓದಲು ಇಲ್ಲಿ ಕ್ಲಿಕ್ ಮಾಡಿ - http://v.duta.us/XFh_9AAA

📲 Get Bangalore City News on Whatsapp 💬