ಸಿಎಂ ಬಿಎಸ್‌ವೈ ವಿರುದ್ಧ ತನಿಖೆಗಾಗಿ ಸುಪ್ರೀಂಗೆ ಅರ್ಜಿ: ಹಿರೇಮಠ

  |   Dharwadnews

ಹುಬ್ಬಳ್ಳಿ: ಬೆಂಗಳೂರು ನಗರ ಜಿಲ್ಲೆಯ ಬೆನ್ನಿಗಾನಹಳ್ಳಿಯ ಗೋಮಾಳ ಭೂಮಿಯನ್ನು ಕಾನೂನು ಬಾಹಿರವಾಗಿ ಡಿ.ಕೆ. ಶಿವಕುಮಾರ್‌ ಖರೀದಿಸಿದ ಪ್ರಕರಣದಲ್ಲಿ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರ ಕೈವಾಡ ಇರುವ ಕುರಿತು ಸಮರ್ಪಕ ತನಿಖೆ ನಡೆಸುವಂತೆ ಸುಪ್ರೀಂ ಕೋರ್ಟ್‌ಗೆ "ಸ್ಪೆಷಲ್‌ ಲೀವ್‌ ಪಿಟಿಷನ್‌' ದಾಖಲಿಸಲಾಗಿದೆ ಎಂದು ಸಮಾಜ ಪರಿವರ್ತನ ಸಮುದಾಯದ ಮುಖ್ಯಸ್ಥ ಎಸ್‌.ಆರ್‌. ಹಿರೇಮಠ ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, 2009ರಲ್ಲಿ ಬಿ.ಎಸ್‌. ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದಾಗ, ಬೆನ್ನಿಗಾನಹಳ್ಳಿಯ 4 ಎಕರೆ 20 ಗುಂಟೆ ಗೋಮಾಳ ಭೂಮಿಯನ್ನು ಕಾನೂನು ಉಲ್ಲಂಘನೆ ಮಾಡಿ ಡಿನೋಟಿಫಿಕೇಶನ್‌ ಮಾಡಿ, ಡಿ.ಕೆ.ಶಿವಕುಮಾರ್‌ಗೆ ಅನುಕೂಲ ಮಾಡಿಕೊಟ್ಟಿದ್ದರು. ಈ ಕುರಿತು ಸುಪ್ರೀಂ ಕೋರ್ಟ್‌ಗೆ 480 ಪುಟಗಳ ಪಿಟಿಷನ್‌ ಸಲ್ಲಿಸಲಾಗಿದೆ. ಸಮರ್ಪಕ ತನಿಖೆ ನಡೆಸಿ ತಪ್ಪಿತಸ್ಥರೆಲ್ಲರಿಗೆ ಶಿಕ್ಷೆ ಆಗಬೇಕು ಮತ್ತು ಸರಕಾರದ ಆಸ್ತಿಯನ್ನು ಮರಳಿ ಪಡೆಯಲು ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಿಕೊಳ್ಳಲಾಗಿದೆ ಎಂದರು.

ಮಾಜಿ ಡಿಸಿಎಂ ಡಾ|ಜಿ. ಪರಮೇಶ್ವರ್‌ ಮೇಲೆ ಆದಾಯ ತೆರಿಗೆ ಇಲಾಖೆ ದಾಳಿ ನಡೆಸಿರುವುದು ಸ್ವಾಗತಾರ್ಹವಾಗಿದೆ. ಬಳ್ಳಾರಿ ರಿಪಬ್ಲಿಕ್‌ ಧ್ವಂಸಗೊಂಡಂತೆ, ಕನಕಪುರ ರಿಪಬ್ಲಿಕ್‌ ಧ್ವಂಸವಾಗುತ್ತಿದೆ. ಅದೇ ರೀತಿ ತುಮಕೂರು ರಿಪಬ್ಲಿಕ್‌ ಕೂಡ ಧ್ವಂಸಗೊಳ್ಳಬೇಕಿದೆ. ಸಚಿವ ವಿ.ಸೋಮಣ್ಣ ಮೇಲೆ ಕೂಡ ಆರೋಪಗಳಿದ್ದು, ಸಮಗ್ರ ತನಿಖೆ ನಡೆಸುವ ಆವಶ್ಯಕತೆ ಇದೆ ಎಂದರು.

ಫೋಟೋ - http://v.duta.us/c1hHwAEA

ಹೆಚ್ಚು ಓದಲು ಇಲ್ಲಿ ಕ್ಲಿಕ್ ಮಾಡಿ - http://v.duta.us/HrJTiwAA

📲 Get Dharwad News on Whatsapp 💬