ಸಿದ್ದಾಪುರ: ಮೇಲ್ದರ್ಜೆಗೆ ಏರದ ನಕ್ಸಲ್‌ ಪೀಡಿತ ಪ್ರಾ.ಆರೋಗ್ಯ ಕೇಂದ್ರ

  |   Udupinews

ಸಿದ್ದಾಪುರ: ನಕ್ಸಲ್‌ ಪೀಡಿತ ಪ್ರದೇಶದಲ್ಲಿರುವ ಸಿದ್ದಾಪುರ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಮೇಲ್ದರ್ಜೆಗೆ ಏರಿಸಬೇಕೆಂಬ ಗ್ರಾಮಸ್ಥರ ಆಗ್ರಹವು ಮರೀಚಿಕೆಯಾಗಿಯೇ ಇದೆ. ಇರುವ ಹುದ್ದೆಗಳೂ ಭರ್ತಿಯಾಗದೆ ಖಾಲಿ ಇವೆ.

ಸಿದ್ದಾಪುರ ಪ್ರಾಥಮಿಕ ಆರೋಗ್ಯ ಕೇಂದ್ರ ವ್ಯಾಪ್ತಿ ಯಲ್ಲಿ ಬರುವ ಪ್ರದೇಶಗಳು ಕೃಷಿ ಭೂಮಿ ಹಾಗೂ ಕಾಡು ಪ್ರದೇಶಗಳನ್ನು ಒಳಗೊಂಡವೇ ಆಗಿದ್ದು ಸುಸಜ್ಜಿತ ಅಸ್ಪತ್ರೆಯ ಆವಶ್ಯಕತೆ ಇದೆ.

ಈಗಾಗಲೇ ಪ್ರಾಥಮಿಕ ಆರೋಗ್ಯ ಕೇಂದ್ರ ವ್ಯಾಪ್ತಿಯಲ್ಲಿ ಡೆಂಗ್ಯೂ ಪ್ರಕರಣ ಬೆಳಕಿಗೆ ಬಂದಿದ್ದು, ಆಜ್ರಿ, ಕೊಡ್ಲಾಡಿ, ಉಳ್ಳೂರು-74ರಲ್ಲಿ ತಲಾ ಒಂದೊಂದು ಪ್ರಕರಣ ಪತ್ತೆಯಾಗಿದೆ. ಎಚ್‌1ಎನ್‌1 ಪ್ರಕರಣದಲ್ಲಿ ಈಗಾಗಲೇ ಜನ್ಸಾಲೆ ಬೇಬಿ ಶೆಟ್ಟಿ ಅವರು ಮೃತ ಪಟ್ಟಿದ್ದಾರೆ. ಇತಂಹ ಪರಿಸ್ಥಿತಿಯಲ್ಲಿ ಸಿದ್ದಾಪುರಕ್ಕೆ 24x7 ವೈದ್ಯಕೀಯ ಸೇವೆಯ ಆಸ್ಪತ್ರೆ ಅಗತ್ಯ ಇದೆ.

ಹುದ್ದೆಗಳು ಖಾಲಿ

ಆರೋಗ್ಯ ಕೇಂದ್ರದಲ್ಲಿ ಇರುವ 26 ಹುದ್ದೆಯಲ್ಲಿ 20 ಹುದ್ದೆ ಖಾಲಿ ಇವೆ. ಕೇವಲ 6 ಹುದ್ದೆಗಳಲ್ಲಿ ಮಾತ್ರ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಆರೋಗ್ಯ ಕೇಂದ್ರಕ್ಕೆ ಅಗತ್ಯವಾಗಿ ಬೇಕಾಗಿರುವ ಸ್ಟಾಫ್‌ ನರ್ಸ್‌ ಹುದ್ದೆಯೇ ಇಲ್ಲಿಯ ತನಕ ಸೃಷ್ಠಿಯಾಗಿಲ್ಲದಿದ್ದರೂ ಎನ್‌ಆರ್‌ಎಚ್‌ಎಂನಲ್ಲಿ ಒಂದು ಹುದ್ದೆ ನೀಡಲಾಗಿದೆ. ಆರೋಗ್ಯ ಕೇಂದ್ರಕ್ಕೆ ಖಾಯಂ ಆಡಳಿತ ವೈದ್ಯಾಧಿಕಾರಿಗಳು ಸೇರಿದಂತೆ 3ರಲ್ಲಿ 2 ವೈದ್ಯರ ಹುದ್ದೆಗಳು ಖಾಲಿ ಇವೆ....

ಫೋಟೋ - http://v.duta.us/6HS3ZAAA

ಹೆಚ್ಚು ಓದಲು ಇಲ್ಲಿ ಕ್ಲಿಕ್ ಮಾಡಿ - http://v.duta.us/iyi7swAA

📲 Get Udupi News on Whatsapp 💬