ಸವಲತ್ತು ತಲುಪಿಸುವಲ್ಲಿ ಲೋಪ: ಕ್ರಮಕ್ಕೆ ಸೂಚನೆ

  |   Chamarajanagarnews

ಚಾಮರಾಜನಗರ: ಗಿರಿಜನರಿಗೆ ಸಮರ್ಪಕವಾಗಿ ಸವಲತ್ತು ವಿತರಣೆ ಮಾಡಲು ವಿಫ‌ಲವಾಗಿರುವ ಗಿರಿಜನ ಕಲ್ಯಾಣ ಇಲಾಖೆಯ ಅಧಿಕಾರಿ ಸೇರಿದಂತೆ ವಿವಿಧ ಇಲಾಖೆಗಳಲ್ಲಿ ರೈತರಿಗೆ ಸವಲತ್ತು ತಲುಪಿಸುವಲ್ಲಿ ಲೋಪ ಮಾಡಿರುವ ಅಧಿಕಾರಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಶಾಸಕ ಸಿ. ಪುಟ್ಟರಂಗಶೆಟ್ಟಿ ಸೂಚನೆ ನೀಡಿದರು. ನಗರದ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ನಡೆದ ಚಾಮರಾಜನಗರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ತ್ತೈಮಾಸಿಕ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಸರಿಯಾಗಿ ವಿತರಣೆ ಮಾಡಿಲ್ಲ: ಗಿರಿಜನರಿಗೆ ಹೊದಿಕೆ ಹಾಗೂ ಇನ್ನಿತರ ಸವಲತ್ತಗಳನ್ನು ಆ ಇಲಾಖೆಯ ಅಧಿಕಾರಿ ರಾಮಸ್ವಾಮಿ ಸರಿಯಾಗಿ ವಿತರಣೆ ಮಾಡಿಲ್ಲ ಎಂಬ ದೂರುಗಳಿವೆ. ಜನಪ್ರತಿನಿಧಿಗಳನ್ನು ಆಹ್ವಾನಿಸಿ ಸವಲತ್ತು ವಿತರಣೆ ಮಾಡಿಲ್ಲ. ಈ ಬಗ್ಗೆ ವಿವರಣೆ ನೀಡುವಂತೆ ಸೂಚನೆ ನೀಡಿದರು. ಇದಕ್ಕೆ ಅಧಿಕಾರಿ, ಅಸಮರ್ಪಕ ಉತ್ತರ ನೀಡಿದ್ದರಿಮದ ಸಿಡಿಮಿಡಿಗೊಂಡ ಶಾಸಕರು ತೀವ್ರ ತರಾಟೆಗೆ ತೆಗೆದುಕೊಂಡರು.

ರೈತರಿಗೆ ಅನ್ಯಾಯ: ತೋಟಗಾರಿಕೆ ಮತ್ತು ಕೃಷಿ ಇಲಾಖೆಯಿಂದ ನೀಡಿರುವ ಸಲವತ್ತುಗಳು ಸಹ ಸಮರ್ಪಕವಾಗಿ ವಿತರಣೆಯಾಗಿಲ್ಲ. ತೋಟಗಾರಿಕೆ ಇಲಾಖೆಯಿಂದ ತೆಂಗು ಬೆಳೆ ಹಾನಿ ಪರಿಹಾರ ವಿತರಣೆಯಲ್ಲಿ ಹರವೆ ಹಾಗೂ ಇತರೇ ಭಾಗದ ರೈತರಿಗೆ ಅನ್ಯಾಯವಾಗಿದೆ. ಈ ಬಗ್ಗೆ ತನಿಖೆ ಮಾಡುವಂತೆ ತಿಳಿಸಿದರು....

ಫೋಟೋ - http://v.duta.us/Ls-6PQAA

ಹೆಚ್ಚು ಓದಲು ಇಲ್ಲಿ ಕ್ಲಿಕ್ ಮಾಡಿ - http://v.duta.us/McuOPQAA

📲 Get Chamarajanagar News on Whatsapp 💬