ಹೊಸಪೇಟೆ- ಕೊಟ್ಟೂರು ನೂತನ ರೈಲು ಸಂಚಾರಕ್ಕೆ ಚಾಲನೆ

  |   Bellarynews

ಬಳ್ಳಾರಿ: ದಶಕಗಳಿಂದ ನೆನೆಗುದಿಗೆ ಬಿದ್ದಿದ್ದ ಹೊಸಪೇಟೆ- ಕೊಟ್ಟೂರು ರೈಲು ಸಂಚಾರದ ಬೇಡಿಕೆ ಕೊನೆಗೂ ಈಡೇರಿದ್ದು, ಹೊಸಪೇಟೆ ರೈಲು ನಿಲ್ದಾಣದಲ್ಲಿ ರೈಲ್ಚೆ ಸಚಿವ ಸುರೇಶ್ ಅಂಗಡಿ ನೂತನ ರೈಲು ಸಂಚಾರಕ್ಕೆ ಹಸಿರು ನಿಶಾನೆ ತೋರುವ ಮೂಲಕ ಗುರುವಾರ ಚಾಲನೆ ನೀಡಿದರು.

ಬಳಿಕ ನಡೆದ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದ ಸುರೇಶ್ ಅಂಗಡಿ, ಹೊಸಪೇಟೆ-ಕೊಟ್ಟೂರು ರೈಲಿಗಾಗಿ ನಡೆಸಿದ ದಶಕದ ಹೋರಾಟಕ್ಕೆ ಇಂದು ಜಯ ಸಿಕ್ಕಿದೆ. ಪ್ರಧಾನಿ ನರೇಂದ್ರ ಮೋದಿಯವರು ಯೋಗಾ ಮುಖಾಂತರ ಜಗತ್ತು ಒಂದು ಮಾಡಿದರು. ಜಮ್ಮು ಕಾಶ್ಮೀರಕ್ಕೆ ಇದ್ದ 370ನೇ ವಿಧಿಯನ್ನು ರದ್ದು ಮಾಡುವ ಮೂಲಕ ದೇಶವನ್ನು ಒಂದು ಮಾಡಿದರು ಎಂದು ತಿಳಿಸಿದರು.

370 ರದ್ದು ಮಾಡಲು ಅಮಿತ್ ಷಾ ಹುಟ್ಟಿ ಬರಬೇಕಾಯ್ತ. ಕಾಶ್ಮೀರದಿಂದ ಕನ್ಯಾಕುಮಾರಿವರೆಗೆ ಒಂದು ಮಾಡೋ ರೈಲ್ವೆ ‌ಇಲಾಖೆ ನಮ್ಮ ಹೆಮ್ಮೆ. ರೈಲ್ವೆ ಬಜೆಟ್ ಬೇರೆ ಇತ್ತು. ಒಂದೆರಡು ರೂಪಾಯಿ ಜಾಸ್ತಿ ಮಾಡಿದರೆ ಪ್ರತಿಭಟನೆ ಮಾಡಿ ರಾಜಕೀಯ ಮಾಡುತ್ತಿದ್ದರು. ಇದೆಲ್ಲಾ ಬಿಟ್ಟು ಒಂದೇ ಬಜೆಟ್ ಮಾಡಿದ್ದು ಮೋದಿ. ಹಳ್ಳಿ ಹಳ್ಳಿಗೂ ಕನೆಕ್ಟಿವಿಟಿ ಮಾಡಿದ ಹೆಗ್ಗಳಿಕೆ ಮೋದಿಗೆ ಸೇರುತ್ತದೆ. ರೈಲ್ವೆ ಸ್ಟೇಷನ್ ಗೆ ಮೂಗು ಮುಚ್ಚಿಕೊಂಡುವ ಹೋಗಬೇಕಾಗಿತ್ತು. ಈಗ ಸೆಲ್ಫಿ ತೆಗೆದುಕೊಳ್ಳವಷ್ಟು ಸ್ವಚ್ಛವಾಗಿದೆ. ಇದೆಲ್ಲದಕ್ಕೆ ಮೋದಿ ಕಾರಣ. ಮೋದಿ ಪೊರಕೆ ಹಿಡಿದ ಕೂಡಲೇ ಎಲ್ಲಾ ಬದಲಾಯ್ತು ಎಂದು ವಿಶ್ವಾಸ ವ್ಯಕ್ತಪಡಿಸಿದರು....

ಫೋಟೋ - http://v.duta.us/EtcjWgAA

ಹೆಚ್ಚು ಓದಲು ಇಲ್ಲಿ ಕ್ಲಿಕ್ ಮಾಡಿ - http://v.duta.us/rbq6oAAA

📲 Get Bellary News on Whatsapp 💬