ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯಿಂದ ಬದಲಾವಣೆ: ಅರುಣ್‌ ಶಹಾಪುರ

  |   Dakshina-Kannadanews

ಮಂಗಳೂರು: ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯಿಂದ ದೇಶದಲ್ಲಿ ಬದಲಾವಣೆ ಸಾಧ್ಯ ಎಂದು ಬೆಳಗಾವಿ ಶಿಕ್ಷಕರ ಕ್ಷೇತ್ರದ ವಿಧಾನ ಪರಿಷತ್‌ ಸದಸ್ಯ ಅರುಣ್‌ ಶಹಾಪುರ ಹೇಳಿದರು.

ಅವರು ಶಕ್ತಿನಗರದ ಶಕ್ತಿ ರೆಸಿಡೆನ್ಶಿ ಯಲ್‌ ಶಾಲೆ ಮತ್ತು ಶಕ್ತಿ ಪ.ಪೂ. ಕಾಲೇಜಿನ ಅಧ್ಯಾಪಕರಿಗೆ ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯ ಕುರಿತು ಏರ್ಪಡಿಸಿದ್ದ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದರು. ಶಿಕ್ಷಣದ ಗುಣ ಮಟ್ಟವನ್ನು ಹೆಚ್ಚಿ ಸುವ ದೃಷ್ಟಿಯಿಂದ ಕೇಂದ್ರ ಸರಕಾರವು ಇಸ್ರೋದ ಮಾಜಿ ಅಧ್ಯಕ್ಷ ಹಾಗೂ ವಿಜ್ಞಾನಿ ಕಸ್ತೂರಿ ರಂಗನ್‌ ನೇತೃತ್ವದಲ್ಲಿ ಸಮಿತಿಯನ್ನು ರಚಿಸಿ ಹೊಸ ರಾಷ್ಟ್ರೀಯ ಶಿಕ್ಷಣ ನೀತಿ-2019ರ ಕರಡನ್ನು ತಯಾರಿಸಿದ್ದು, ಸಮಿತಿಯು ಅದನ್ನು ಈಗಾಗಲೇ ಸರಕಾರಕ್ಕೆ ಸಲ್ಲಿಸಿದೆ ಎಂದರು.

ದೇಶದಲ್ಲಿ ಭಾರತೀಯತೆಯ ಶಿಕ್ಷಣ ಜಾರಿಗೆ ಬರಬೇಕು. ಆ ಶಿಕ್ಷಣದಲ್ಲಿ ಕೌಶಲ ಸೇರಿರಬೇಕೆಂಬುದು ಸಮಿ ತಿಯ ಸಲಹೆ. ಒಂದು ಮಗು ತನ್ನ ಮೂರನೇ ವರ್ಷದಲ್ಲಿ ಶಿಕ್ಷಣವನ್ನು ಪಡೆಯಲು ಶಾಲೆಗೆ ಹೋಗಬೇಕು. ಆ ಮಗು ಒಂದು ವಸ್ತುವನ್ನು ನೋಡುತ್ತಾ ಶಿಕ್ಷಣ ಪಡೆಯಬೇಕು. ಈ ಶಿಕ್ಷಣವನ್ನು ನೀಡ ಬೇಕಾದ ಶಿಕ್ಷಕರು ಬದಲಾಗ ಬೇಕು. ಅದಕ್ಕಾಗಿ ನಾಲ್ಕು ವರ್ಷದ ಬಿಎಡ್‌ ಶಿಕ್ಷಣವನ್ನು ಪರಿಚಯಿಸಲು ಕರಡು ಪ್ರತಿಯಲ್ಲಿ ಸೂಚಿಲಾಗಿದೆ. ಶಿಕ್ಷಕರು ಮಗುವಿಗೆ ಜೀವನ ನಡೆಸಲು ಬೇಕಾಗಿರುವ ಕೌಶಲವನ್ನು ಕಲಿಸಿ ಕೊಡುವ ರೀತಿಯಲ್ಲಿ ಹೊಸ ರಾಷ್ಟ್ರೀಯ ಶಿಕ್ಷಣ ನೀತಿ ಇದೆ ಎಂದು ವಿವರಿಸಿದರು....

ಫೋಟೋ - http://v.duta.us/ZrxYrwAA

ಹೆಚ್ಚು ಓದಲು ಇಲ್ಲಿ ಕ್ಲಿಕ್ ಮಾಡಿ - http://v.duta.us/F6PFaAAA

📲 Get Dakshina Kannada News on Whatsapp 💬