ಇಂದಿರಾ ಗಾಜಿನಮನೆ ಆವರಣದಲ್ಲಿ ನೆರೆ ಛಾಯೆ

  |   Dharwadnews

ಹುಬ್ಬಳ್ಳಿ: ಒಂದು ಉತ್ತಮ ಛಾಯಾಚಿತ್ರಕ್ಕೆ ಸಮರ್ಪಕವಾದ ಸಂದೇಶ ನೀಡುವ ತಲೆಬರಹ ಕೊಟ್ಟರೆ ಸಾಕು, ಅದು ನಾಲ್ಕೈದು ಪುಟಗಳಷ್ಟು ವಿವರ ಹೇಳುತ್ತದೆ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಹೇಳಿದರು.

ಹುಬ್ಬಳ್ಳಿಯ ಪತ್ರಿಕಾ ಛಾಯಾಗ್ರಾಹಕರು ಇಲ್ಲಿನ ಮಹಾತ್ಮಾ ಗಾಂಧಿ ಉದ್ಯಾನವನದ ಇಂದಿರಾ ಗಾಜಿನಮನೆ ಆವರಣದಲ್ಲಿ ಎರಡು ದಿನಗಳ ಕಾಲ ಆಯೋಜಿಸಿರುವ 9 ಜಿಲ್ಲೆಗಳ ಪತ್ರಿಕಾ ಛಾಯಾಗ್ರಾಹಕರ "ನೆರೆ ಛಾಯೆ' ಛಾಯಾಚಿತ್ರ ಪ್ರದರ್ಶನವನ್ನು ಶನಿವಾರ ಉದ್ಘಾಟಿಸಿ ಅವರು ಮಾತನಾಡಿದರು. ಛಾಯಾಚಿತ್ರ ಜೊತೆ ಅದಕ್ಕೆ ಸೂಕ್ತ ಸಂದೇಶ ಮುಖ್ಯ. ಅಂತಹ ಉತ್ತಮ ಸಂದೇಶ ನೀಡುವ ಕಲೆಯನ್ನು ವರದಿಗಾರರು ರೂಢಿಸಿಕೊಳ್ಳಬೇಕು. ಛಾಯಾಗ್ರಾಹಕರು ಪ್ರದರ್ಶಿಸಿದ ಚಿತ್ರಗಳು ಪ್ರವಾಹದ ಭೀಕರತೆ ತೋರಿಸುತ್ತವೆ. ಇಂದಿನ ಸ್ಪರ್ಧಾತ್ಮಕ ದಿನಗಳಲ್ಲಿ ಛಾಯಾಗ್ರಾಹಕರು ತಮ್ಮ ಜೀವದ ಹಂಗು ತೊರೆದು, ಶ್ರಮಪಟ್ಟು ಚಿತ್ರಗಳನ್ನು ಸೆರೆ ಹಿಡಿದಿರುತ್ತಾರೆ. ಪ್ರಾಮಾಣಿಕ ಸೇವೆ ಮಾಡುತ್ತಿದ್ದಾರೆ. ಅವರು ಕಷ್ಟಕ್ಕೊಳಗಾದವರ ಭಾವನೆಗೆ ಸ್ಪಂದಿಸಿ ಚಿತ್ರ ತೆಗೆದಿರುತ್ತಾರೆ. ಸಂಘದವರು ಉತ್ತಮ ಛಾಯಾಚಿತ್ರಗಳನ್ನು ಸಂಗ್ರಹಿಸಿ ಪ್ರತಿವರ್ಷ ಅವುಗಳ ಪ್ರದರ್ಶನ ಮಾಡಬೇಕು. ಆ ಮೂಲಕ ಹೊಸ ಛಾಯಾಗ್ರಾಹಕರಿಗೆ ಪ್ರೋತ್ಸಾಹ, ಬೆಂಬಲ ನೀಡಬೇಕು. ಛಾಯಾಗ್ರಹಣ ಕಲೆಯು ಸಹ ಗೌರವಾನ್ವಿತವಾದದ್ದು ಎಂಬುದನ್ನು ಬಿಂಬಿಸಬೇಕು ಎಂದರು....

ಫೋಟೋ - http://v.duta.us/w4gWkgAA

ಹೆಚ್ಚು ಓದಲು ಇಲ್ಲಿ ಕ್ಲಿಕ್ ಮಾಡಿ - http://v.duta.us/8vJ3UQAA

📲 Get Dharwad News on Whatsapp 💬