"ಕರ್ತವ್ಯದಲ್ಲಿ ಬೇಜವಾಬ್ದಾರಿ; ಅಧಿಕಾರಿಗಳಿಗೆ ನೋಟಿಸ್‌ ನೀಡಿ'

  |   Udupinews

ಬೈಂದೂರು: ಕೊಡೇರಿ ಕಿರು ಬಂದರು ಕಾಮಗಾರಿಗೆ 27 ಕೋಟಿ ರೂ. ಅನುದಾನ 2016ರಲ್ಲಿ ಮಂಜೂರಾಗಿದೆ. 2019 ಜನವರಿ ಒಳಗೆ ಕಾಮಗಾರಿ ಮುಗಿಯಬೇಕಿತ್ತು. ಆದರೆ ಇದುವರೆಗೆ ಕಾಮಗಾರಿ ಪ್ರಗತಿ ಕಂಡಿಲ್ಲ. ಈ ಕುರಿತು ಎರಡೆರಡು ಬಾರಿ ಜನಸಂಪರ್ಕ ಸಭೆಯಲ್ಲಿ ಅಧಿಕಾರಿಗಳಲ್ಲಿ ಕಾರಣ ಕೇಳಲಾಗಿದೆ. ಆದರೆ ಇದುವರೆಗೆ ಕೇವಲ ಸಬೂಬು ನೀಡುತ್ತಿದ್ದಾರೆ ಬಿಟ್ಟರೆ ಕಾಮಗಾರಿ ಆರಂಭಿಸಿಲ್ಲ. ಜನರ ಸೇವೆ ಮಾಡಲು ಇಷ್ಟವಿದ್ದರೆ ಕೆಲಸ ಮಾಡಿ, ಇಲ್ಲವಾದರೆ ರಾಜೀನಾಮೆ ಕೊಟ್ಟು ಮನೆಗೆ ತೆರಳಿ ಎಂದು ಸಂಸದ ಬಿ.ವೈ. ರಾಘವೇಂದ್ರ ಬಂದರು ಮತ್ತು ಮೀನುಗಾರಿಕಾ ಅಧಿಕಾರಿಗಳಿಗೆ ಚಳಿ ಬಿಡಿಸಿದ್ದಾರೆ.

ಕಮಲಶಿಲೆಯಲ್ಲಿ ಅಧಿಕಾರಿಗಳ ಸಭೆ ನಡೆಸಿ ಮಾತನಾಡಿ, ಮರವಂತೆಯಲ್ಲಿ ಹೊಸ ಕಾಮಗಾರಿ ಟೆಂಡರ್‌ ಆಗಿದೆ. ಹಳೆಯ ಕಾಮಗಾರಿ ಮುಗಿದು 3 ವರ್ಷದಲ್ಲಿ ಶಿಥಿಲಗೊಂಡಿದೆ. ಇಂತಹ ಗುತ್ತಿಗೆದಾರರನ್ನು ಬ್ಲಾಕ್‌ ಲಿಸ್ಟ್‌ಗೆ ಸೇರಿಸ ಬೇಕು ಹಾಗೂ ಬೇಜವಾಬ್ದಾರಿಯಾಗಿ ಕರ್ತವ್ಯ ನಿರ್ವಹಿಸುವ ಅಧಿಕಾರಿ ಗಳಿಗೆ ನೋಟಿಸ್‌ ನೀಡಬೇಕು ಎಂದು ಮುಖ್ಯ ಮಂತ್ರಿಗಳ ಆಪ್ತ ಕಾರ್ಯದರ್ಶಿಗಳಿಗೆ ತಿಳಿಸಿದರು.

ಬೈಂದೂರು ತಾ| ಆಸ್ಪತ್ರೆ ಸಂಕೀರ್ಣ ನೀಲನಕಾಶೆ ವೀಕ್ಷಿಸಿ ವಿವಿಧ ಕಚೇರಿ ಗಳನ್ನು ಒಂದೇ ವಲಯದಲ್ಲಿ ಪ್ರಾರಂಭಿಸ ಬೇಕಾಗಿರುವುದರಿಂದ ಭವಿಷ್ಯದ ಯೋಚನೆ ಮನಗಂಡು ಯೋಜನೆ ರೂಪಿಸಲು ಜಿಲ್ಲಾಧಿಕಾರಿಗಳಿಗೆ ತಿಳಿಸಿದರು....

ಫೋಟೋ - http://v.duta.us/EcEsbwAA

ಹೆಚ್ಚು ಓದಲು ಇಲ್ಲಿ ಕ್ಲಿಕ್ ಮಾಡಿ - http://v.duta.us/aqupiQEA

📲 Get Udupi News on Whatsapp 💬