ಕ್ಲಾಸಲ್ಲೇ ನಿದ್ದೆ ಬರ್ತಿದ್ಯಾ? ವೇಕ್‌ ಅಪ್‌ ಗ್ಲಾಸ್‌ ಇದೆಯಲ್ಲ!

  |   Dharwadnews

ಹುಬ್ಬಳ್ಳಿ: ರಾತ್ರಿಯೆಲ್ಲ ದಣಿವರಿದು ಸುಸ್ತಾಗಿದ್ದರಿಂದ ಕ್ಲಾಸಿನಲ್ಲಿ ಹಗಲು ಹೊತ್ತಿನಲ್ಲೇ ನಿದ್ರೆಗೆ ಜಾರಿ ಪಾಠ ಕೇಳಲು ಆಗುತ್ತಿಲ್ಲವೆ? ಕಚೇರಿಯಲ್ಲಿ ನಿದ್ರೆಗೆ ಜಾರಿದ್ದರಿಂದ ಕೆಲಸ ಮಾಡಲು ಆಗುತ್ತಿಲ್ಲವೆ? ಇದಕ್ಕೊಂದು ಪರಿಹಾರವನ್ನು ಬಿವಿಬಿ ಎಂಜಿನಿಯರಿಂಗ್‌ ವಿದ್ಯಾರ್ಥಿಗಳು ಕಂಡುಕೊಂಡಿದ್ದಾರೆ.

ಕ್ಲಾಸ್‌ ಹಾಗೂ ಕಚೇರಿಯಲ್ಲಿ ಹಗಲು ಹೊತ್ತಿನಲ್ಲೇ ನಿದ್ರೆಗೆ ಜಾರುವವರನ್ನು ತಕ್ಷಣ ಎಚ್ಚರಗೊಳಿಸಿ, ಅವರು ಪಾಠ ಕೇಳುವುದರಲ್ಲಿ ಹಾಗೂ ಕೆಲಸದಲ್ಲಿ ಕಾರ್ಯೋನ್ಮುಖರಾಗುವಂತಹ ಸಾಧನ ಕಂಡು ಹಿಡಿದಿದ್ದಾರೆ. ಅದುವೇ "ವೇಕ್‌ ಅಪ್‌ ಗ್ಲಾಸ್‌'. ಜೀವಶಾಸ್ತ್ರದ ಪ್ರಕಾರ ನಿದ್ರೆ ಬರಲು ಮೆಲಟೋನಿನ್‌ ಫ್ರೆಗ್ಮೆಂಟ್ ಕಾರಣ. ಅದು ಎಷ್ಟು ಕಡಿಮೆ ಆಗುತ್ತದೋ ನಿದ್ರೆಯು ಅಷ್ಟು ಕಡಿಮೆ ಆಗುತ್ತದೆ ಎಂದು ಸಾರಾಂಶ ಹೇಳುತ್ತದೆ. ಇದನ್ನೇ ಆಧಾರವಾಗಿಟ್ಟುಕೊಂಡು ಬಿವಿಬಿಯ 1ನೇ ಸೆಮಿಸ್ಟರ್‌ ವಿದ್ಯಾರ್ಥಿಗಳಾದ ಶಶಾಂಕ ಎಸ್‌. ಕಿಂದಾಲ್‌ ಮತ್ತು ಬೋಧಿ ಎಸ್‌. ಮಿಶ್ರಾ ಅವರು ಮೆಲಟೋನಿನ್‌ ಫ್ರೆಗ್ಮೆಂಟ್ ಕಡಿಮೆ ಮಾಡಲು ನೀಲಿ ಬಣ್ಣದ ಎಲ್‌ಇಡಿ ಬಲ್ಬ್ ಬಳಕೆ ಮಾಡಿಕೊಂಡಿದ್ದಾರೆ.

ಹೇಗೆ ಕೆಲಸ ಮಾಡುತ್ತೆ?: ಸ್ಪೆಸಿಫಿಕ್‌ ವೇವ್‌ಲೆಂಥ್ಸ್ ಬ್ಲ್ಯೂ ಕಲರ್‌ ಲೈಟ್‌ ನಲ್ಲಿರುತ್ತದೆ. ಅದರ ಕಿರಣಗಳು ನಮ್ಮ ನೇತ್ರದ ಮೇಲೆ ಬಿದ್ದಾಗ ನಿದ್ರೆ ಕಡಿಮೆಯಾಗುತ್ತದೆ. ಆಗ ನಮ್ಮಲ್ಲಿನ ಉತ್ಪತ್ತಿ ವೃದ್ಧಿಸುತ್ತದೆ. ಮನೋಲ್ಲಾಸ ನೀಡುತ್ತದೆ. ಇದು ಬೆಳಗ್ಗೆ ಹೆಚ್ಚಿನ ಕಾರ್ಯ ನಿರ್ವಹಿಸುತ್ತದೆ. ರಾತ್ರಿ ಇದರ ಬಳಕೆ ಅಷ್ಟು ಸೂಕ್ತವಲ್ಲ. ವಿದ್ಯಾರ್ಥಿಗಳು ರಾತ್ರಿ ಅಭ್ಯಾಸ ಮಾಡಿ ಬೆಳಗ್ಗೆ ಕ್ಲಾಸ್‌ಗೆ ಹಾಜರಾಗಬೇಕೆಂದರೆ ನಿದ್ರೆಯ ಸಮಸ್ಯೆಯಿಂದ ಬಳಲುತ್ತಾರೆ. ಕ್ಲಾಸ್‌ನಲ್ಲಿ ಕುಳಿತಾಗ ನಿದ್ರೆಗೆ ಜಾರಿ ಪಾಠ ಕಳೆದುಕೊಳ್ಳುತ್ತಾರೆ....

ಫೋಟೋ - http://v.duta.us/M5ZwywAA

ಹೆಚ್ಚು ಓದಲು ಇಲ್ಲಿ ಕ್ಲಿಕ್ ಮಾಡಿ - http://v.duta.us/-9qORgAA

📲 Get Dharwad News on Whatsapp 💬