ನಿಷ್ಕ್ರಿಯ ವಾಹನ-ಯಂತ್ರಕ್ಕೆ ನಿಂತಲ್ಲೇ ತುಕ್ಕು

  |   Bidarnews

„ವೀರಾರೆಡ್ಡಿ ಆರ್‌.ಎಸ್‌.

ಬಸವಕಲ್ಯಾಣ: ನಗರದ ಸೌಂದರ್ಯ ಹೆಚ್ಚಿಸಲು ಹಾಗೂ ಕಸ ವಿಲೇವಾರಿ ಮಾಡುವ ಉದ್ದೇಶದಿಂದ ಲಕ್ಷಾಂತರ ರೂ. ಖರ್ಚು ಮಾಡಿ ಖರೀದಿಸಿದ ನೂತನ ಯಂತ್ರ ಹಾಗೂ ವಾಹನ ಸ್ವಚ್ಛತೆಗೆ ಉಪಯೋಗವಾಗುವ ಬದಲು ಅಧಿಕಾರಿಗಳ ಹಾಗೂ ಸಿಬ್ಬಂದಿ ನಿರ್ಲಕ್ಷದಿಂದ ಗಿಡ ಗಂಟಿಗಳ ಮಧ್ಯೆ ನಿಂತು ತುಕ್ಕು ಹಿಡಿಯುತ್ತಿವೆ.

ನಗರದ ಚರಂಡಿಗಳನ್ನು ಸ್ವಚ್ಛಗೊಳಿಸುವುದಕ್ಕಾಗಿ ಲಕ್ಷಾಂತರ ರೂಪಾಯಿಗೆ ಖರೀದಿ ಮಾಡಿದ ನೂತನ ಯಂತ್ರ ಹಾಗೂ ಟ್ರ್ಯಾಕ್ಟರ್‌ ಕೆಲವು ದಿನಗಳಲ್ಲೇ ಕೆಲಸಕ್ಕೆ ಬಾರದಂತೆ ಮಾಡಿ ನಗರದ ಹೊರವಲಯದ ನೀರು ಶುದ್ಧೀಕರಣ ಘಟಕದ ಆವರಣದಲ್ಲಿ ಅನಾಥವಾಗಿ ನಿಲ್ಲಿಸಲಾಗಿದೆ.

ಸಾಮಗ್ರಿಗಳನ್ನು ಗಮನಸಿದರೆ ಕಂಪನಿಯಿಂದ ಇತ್ತಿಚಿಗೆ ಖರೀದಿ ಮಾಡಿರುವ ವಾಹನಗಳು ಎಂಬಂತಿವೆ. ಅದಕ್ಕೆ ಅಳವಡಿಸಲಾದ ಕಬ್ಬಿಣದ ಸಾಮಗ್ರಿಗಳು ಮತ್ತು ಟೈರ್‌ಗಳು ಒಂದು ಕಿ.ಮೀ. ಕೂಡ ಸಂಚರಿಸಿಲ್ಲ ಎಂಬುದಕ್ಕೆ ಟ್ರ್ಯಾಕ್ಟರ್‌ ಟೈರ್‌ಗಳೇ ನಿದರ್ಶನ.

ಹೀಗಾಗಿ ಇಷ್ಟೊಂದು ಚೆನ್ನಾಗಿರುವ ವಾಹನಗಳು ಮತ್ತು ಯಂತ್ರವನ್ನು ಸದ್ಬಳಕೆ ಮಾಡಿಕೊಳ್ಳದೆ ಕಸದಲ್ಲಿ ತಂದು ಬಿಸಾಡಲಾಗಿದೆ. ನಗರದ ಸ್ವಚ್ಛತೆಗಾಗಿ ಅವುಗಳನ್ನು ಬಳಕೆ ಮಾಡಿಕೊಳ್ಳದೆ ಕಸದಲ್ಲಿ ತುಕ್ಕು ಹಿಡಿಯುವಂತೆ ಮಾಡಿರುವುದು ಅಧಿಕಾರಿಗಳ ನಿರ್ಲಕ್ಷಕ್ಕೆ ಹಿಡಿದ ಕೈಗನ್ನಡಿಯಾಗಿದೆ ಎಂಬುದು ಸಾರ್ವಜನಿಕರು ಮತ್ತು ನಗರ ನಿವಾಸಿಗಳ ಆರೋಪವಾಗಿದೆ....

ಫೋಟೋ - http://v.duta.us/8rxVWAAA

ಹೆಚ್ಚು ಓದಲು ಇಲ್ಲಿ ಕ್ಲಿಕ್ ಮಾಡಿ - http://v.duta.us/q9QLBwAA

📲 Get Bidar News on Whatsapp 💬