ಅಕ್ಕ ಲಕೋಟನಲ್ಲಿ ತ್ರಿಕೋನ ಸ್ಪರ್ಧೆ
„ಸೋಮಶೇಖರ ಜಮಶೆಟ್ಟಿ
ಸೊಲ್ಲಾಪುರ: ಮಹಾರಾಷ್ಟ್ರ ಮತ್ತು ಕರ್ನಾಟಕ ಗಡಿ ಭಾಗದ ಅಕ್ಕಲಕೋಟ ವಿಧಾನಸಭಾ ಮತಕ್ಷೇತ್ರದಿಂದ ಸುಮಾರು 11 ಅಭ್ಯರ್ಥಿಗಳು ಚುನಾವಣೆ ಕಣದಲ್ಲಿದ್ದರೂ, ಕಾಂಗ್ರೆಸ್-ಬಿಜೆಪಿ ಮತ್ತು ವಂಚಿತ ಬಹುಜನ ಪಕ್ಷದ ನಡುವೆ ಭಾರಿ ತ್ರಿಕೋನ ಸ್ಪರ್ಧೆ ಏರ್ಪಟ್ಟಿದೆ.
ಕಳೆದ 2009ರ ವಿಧಾನಸಭೆ ಚುನಾವಣೆಯಲ್ಲಿ ಅಕ್ಕಲಕೋಟ ತಾಲೂಕಿನ ಸೇಗಾಂವ ಗ್ರಾಮದಲ್ಲಿ ನಡೆದ ಶೂಟೌಟ್ ಪ್ರಕರಣ ಇಡೀ ರಾಜ್ಯದ ಗಮನ ಸೆಳೆದಿತ್ತು. ಆದ್ದರಿಂದ ಈ ಬಾರಿ ಕಟ್ಟೆಚ್ಚರ ವಹಿಸಲಾಗಿದೆ. ಜತೆಗೆ ಅತಿ ಸೂಕ್ಷ್ಮ ಮತಕ್ಷೇತ್ರವಾಗಿ ಪರಿವರ್ತನೆ ಆಗಿದೆ. ಹೀಗಾಗಿ ಚುನಾವಣೆ ಆಯೋಗ ಅಕ್ಕಲಕೋಟ ಮತಕ್ಷೇತ್ರದ 138 ಗ್ರಾಮಗಳ ಮೇಲೆ ತೀವ್ರ ನಿಗಾ ಇಟ್ಟಿದೆ.
ಪಕ್ಷದ ಅಭ್ಯರ್ಥಿಗಳು: ಸಚಿನ್ ಕಲ್ಯಾಣಶೆಟ್ಟಿ (ಬಿಜೆಪಿ), ಸಿದ್ಧರಾಮ ಮ್ಹೇತ್ರೆ (ಕಾಂಗ್ರೆಸ್), ನಾಗಮೂರ್ತಿ ಕುರಣೆ (ಬಿಎಸ್ಪಿ), ಮಧುಕರ ಜಾಧವ (ಮನಸೇ), ಧರ್ಮರಾಜ ರಾಠೊಡ (ವಂಚಿತ ಬಹುಜನ), ಸುರೇಖಾ ಕ್ಷೀರಸಾಗರ (ಅಖೀಲ ಭಾರತ ಹಿಂದು ಮಹಾಸಭಾ), ಅಮೋಲ ಹರಣಾಳಕರ (ಪಕ್ಷೇತರ), ದೀಪಕ ಮಹಾಸ್ವಾಮಿಜಿ (ಪಕ್ಷೇತರ), ಲಕ್ಷ್ಮಣ ಮೇತ್ರೆ (ಪಕ್ಷೇತರ) ಸುಜಾತಾ ಬಾಬಾನಗರೆ (ಪಕ್ಷೇತರ), ಸಂತೋಷ ಗಜದಾನೆ (ಬಹುಜನ್ ಮುಕ್ತಿ ಪಾರ್ಟಿ) ಪಕ್ಷದ ಅಭ್ಯರ್ಥಿಗಳಾಗಿದ್ದಾರೆ....
ಹೆಚ್ಚು ಓದಲು ಇಲ್ಲಿ ಕ್ಲಿಕ್ ಮಾಡಿ - http://v.duta.us/GIfR3AAA