ಅಬ್ಬರದ ಮಳೆಗೆ ಜನ ಜೀವನ ಅಸ್ತವ್ಯಸ್ತ

  |   Bellarynews

ಹೊಸಪೇಟೆ: ಸೋಮವಾರ ನಸುಕಿನಲ್ಲಿ ದಿಢೀರ್‌ ಸುರಿದ ಅಬ್ಬರದ ಮಳೆ ನಗರದ ಕೆಲ ಪ್ರದೇಶದಲ್ಲಿ ಭಾರಿ ಅವಾಂತರ ಸೃಷ್ಟಿಯಾಗಿದ್ದು ದಸರಾ ಹಬ್ಬದ ಸಂಭ್ರಮಕ್ಕೆ ತಣ್ಣೀರು ಎರಚಿದಂತಾಗಿದೆ.

ಕಳೆದ 9 ದಿನ ಗಳ ನವರಾತ್ರಿ ವಿಶೇಷ ಪೂಜೆ ಸಲ್ಲಿಸಿ, ಹಬ್ಬದ ಖುಷಿಯಲ್ಲಿದ್ದ ನಗರದ ಜನತೆ ಭಾರಿ ಮಳೆಯಿಂದಾಗಿ ಪರದಾಡುವಂತಾಯಿತು. ತಾಲೂಕಿನಾದ್ಯಾಂತ ಸುರಿದ ಮಳೆಗೆ ಜನಜೀವನ ಸಂಪೂರ್ಣ ಅಸ್ತವ್ಯಸ್ತವಾಗಿದೆ.

ಮಳೆಯಿಂದಾಗಿ ಹೂ-ಹಣ್ಣ-ತರಕಾರಿ ವ್ಯಾಪಾರಿಗಳು ಸಂಕಷ್ಟಕ್ಕೀಡಾದರು. ನಗರದ ಹೊರವಲಯದ ಬುಡ್ಗಾ ಜಂಗಮ ಕಾಲೋನಿಯಲ್ಲಿ ಮನೆಗಳಿಗೆ ನೀರು ನುಗ್ಗಿದ ಪರಿಣಾಮ ಅಲೆಮಾರಿ ಕುಟುಂಬಗಳು ತೀವ್ರ ತೊಂದರೆ ಅನುಭವಿಸಿದರು.

ನಗರದ ಐಎಸ್‌ಆರ್‌ ಸಕ್ಕರೆ ಕಾರ್ಖಾನೆ ರಸ್ತೆ, ಹೂಡಾ ಕಚೇರಿ ಆವರಣ, ತಾಲ್ಲೂಕು ಕ್ರೀಡಾಂಗಣ, ಸಾಯಿ ಬಾಬಾ ಸರ್ಕಲ್‌ ನಿಂದ ಗುಜ್ಜಲ ಪೆಟ್ರೋಲ್‌ ಬಂಕ್‌, ಕಾಲೇಜ್‌ ರಸ್ತೆ, ಚಪ್ಪದರಳ್ಳಿ, ದೋಬಿ ಘಾಟ್‌, ಎಸ್‌.ಆರ್‌. ನಗರ, ಸಿದ್ದ ಲಿಂಗಪ್ಪ ಚೌಕಿ, ಚಿತ್ತ ವಾಡ್ಗಿ ಸಂತೆ ಬಯಲು, ಗೋವಿಂದ ನಗರ ಸೇರಿದಂತೆ ನಗರದ ತಗ್ಗು ಪ್ರದೇಶದಲ್ಲಿ ಕೆಲ ಮನೆಗಳಿಗೆ ನೀರು ನುಗ್ಗಿವೆ.

ನಗರದ ಜಂಬು ನಾಥ ಹಳ್ಳಿಯ ರಾಯರ ಕೆರೆಯಲ್ಲಿ ನೀರು ಜಲಾವೃತವಾದ ಹಿನ್ನಲೆಯಲ್ಲಿ ಭಾಗದ ನೂರಾರು ಎಕರೆ ಪ್ರದೇಶದಲ್ಲಿ ಬೆಳೆಯಲಾಗಿದ್ದ ಕಬ್ಬು, ಮೆಕ್ಕೆ ಜೋಳ, ತೊಗರಿ ಮುಂತಾದ ಬೆಳೆಗಳು ನೆಲ ಕಚ್ಚಿವೆ.

ಫೋಟೋ - http://v.duta.us/xp6KVQAA

ಹೆಚ್ಚು ಓದಲು ಇಲ್ಲಿ ಕ್ಲಿಕ್ ಮಾಡಿ - http://v.duta.us/lfb1RAAA

📲 Get Bellary News on Whatsapp 💬