ಇಂದಿರಾ ಕ್ಯಾಂಟೀನ್‌ ಹೊಸ ಮೆನು ಡೌಟು

  |   Bangalore-Citynews

ಬೆಂಗಳೂರು: ಇಂದಿರಾ ಕ್ಯಾಂಟೀನ್‌ಗಳಲ್ಲಿ ಚಪಾತಿ, ರಾಗಿ ಮುದ್ದೆ, ಮಂಗಳೂರು ಬನ್ಸ್‌ ಸೇರಿದಂತೆ ಹೊಸ ಮೆನು (ತಿಂಡಿ ಪಟ್ಟಿ) ಬದಲಾಯಿಸುವ ಯೋಜನೆ ಜಾರಿ ಸದ್ಯಕ್ಕೆ ಡೌಟ್‌. ಆಗಸ್ಟ್‌ ಎರಡನೇ ವಾರದಿಂದಲೇ ಇಂದಿರಾ ಕ್ಯಾಂಟೀನ್‌ ಗಳಲ್ಲಿ ಹೊಸ ಮೆನು ಪರಿಚಯಿಸಬೇಕಿತ್ತು. ಆದರೆ, ಬದಲಾದ ರಾಜಕೀಯ ಸನ್ನಿವೇಶ, ಹಣಕಾಸು ನೆರವಿನ ಗೊಂದಲಗಳಿಂದಾಗಿ ಮೆನು ಬದಲಾವಣೆ ನನೆಗುದಿಗೆ ಬಿದ್ದಿದ್ದು, ಯಥಾಸ್ಥಿತಿ ಮುಂದುವರಿದರೆ ಸಾಕಪ್ಪಾ ಎನ್ನುವಂತಾಗಿದೆ.

ಬೆಂಗಳೂರಿನ ಮಟ್ಟಿಗೆ ಇಂದಿರಾ ಕ್ಯಾಂಟೀನ್‌ ಸ್ಥಿತಿ ತುರ್ತು ಘಟಕದಲ್ಲಿರುವ ರೋಗಿಯಂತಾಗಿದ್ದು, ಈ ಸ್ಥಿತಿಯಿಂದ ಪಾರಾದರೆ ಸಾಕು ಎಂಬಂತಾಗಿದೆ. ರಾಜ್ಯ ಸರ್ಕಾರ ಹಣಕಾಸಿನ ನೆರವು ಕೊಡದಿದ್ದರೆ ಯೋಜನೆ ಮುಂದುವರಿಸುವ ಬಗ್ಗೆ ಬಿಬಿಎಂಪಿ ಗಂಭೀರ ಚಿಂತನೆ ಮಾಡುತ್ತಿದೆ. "ರಾಜ್ಯ ಸರ್ಕಾರ ಅನುದಾನ ನೀಡದಿದ್ದರೂ, ಬಿಬಿಎಂಪಿಯೇ ಇಂದಿರಾ ಕ್ಯಾಂಟೀನ್‌ ಯೋಜನೆಯನ್ನು ಮುಂದುವರಿಸಿ ಕೊಂಡು ಹೋಗಲಿದೆ' ಎಂದು ಮಾಜಿ ಮೇಯರ್‌ ಗಂಗಾಂಬಿಕೆ ಹೇಳಿದ್ದರು. ಆದರೆ, ಈಗ ಪಾಲಿಕೆಯಲ್ಲಿ ಬಿಜೆಪಿ ಆಡಳಿತದ ಚುಕ್ಕಾಣಿಯಲ್ಲಿದೆ. ಹೀಗಾಗಿ, ಇಂದಿರಾ ಕ್ಯಾಂಟೀನ್‌ ಅಸ್ತಿತ್ವದ ಪ್ರಶ್ನೆಯೂ ಉದ್ಭವಿಸಿದೆ. ನೂತನ ಮೇಯರ್‌ ಗೌತಮ್‌ ಕುಮಾರ್‌ ಅವರ ಅಧಿಕಾರ ವಹಿಸಿಕೊಂಡ ನಂತರ ಈ ಕುರಿತು ಕೇಳಿದಾಗ, ಸ್ಪಷ್ಟ ಉತ್ತರ ನೀಡಲಿಲ್ಲ....

ಫೋಟೋ - http://v.duta.us/45FOXwAA

ಹೆಚ್ಚು ಓದಲು ಇಲ್ಲಿ ಕ್ಲಿಕ್ ಮಾಡಿ - http://v.duta.us/vbmwuwAA

📲 Get Bangalore City News on Whatsapp 💬