ಈ ಋತುವಿನ ಕಂಬಳ ವೇಳಾಪಟ್ಟಿ ನಿಗದಿ

  |   Dakshina-Kannadanews

ಮಂಗಳೂರು: ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಈ ಋತುವಿನ ಕಂಬಳ ಕ್ರೀಡೆಗೆ ತಯಾರಿ ಪ್ರಾರಂಭವಾಗಿದೆ. ಈ ಬಾರಿ ಕಾನೂನಿನ ತೊಡಕು ಎದುರಾಗದೆ ಸುಸೂತ್ರವಾಗಿ ಆಯೋಜನೆಯಾಗುವ ಸಾಧ್ಯತೆಯಿದ್ದು, ಇದು ಕಂಬಳ ಆಯೋಜಕರು ಮತ್ತು ಅಭಿಮಾನಿಗಳ ಉತ್ಸಾಹವನ್ನು ಇಮ್ಮಡಿಗೊಳಿಸಿದೆ.

ಅ.6ರಂದು ಮೂಡುಬಿದಿರೆಯಲ್ಲಿ ಜರಗಿದ್ದ ಜಿಲ್ಲಾ ಕಂಬಳ ಸಮಿತಿ ಸಭೆಯಲ್ಲಿ ಕಂಬಳದ ವೇಳಾಪಟ್ಟಿ ಸಿದ್ಧಗೊಂಡಿದ್ದು, ನ.23ಕ್ಕೆ ಈ ಋತುವಿನ ಮೊದಲ ಕಂಬಳ

ಆರಂಭವಾಗಲಿದೆ. ಒಟ್ಟು 20 ಕಂಬಳಗಳು ನಡೆಯಲಿವೆ. ಒಂದೆರಡರ ದಿನಾಂಕ ಬದಲಾವಣೆ ಆಗುವ ಸಾಧ್ಯತೆಯಿದ್ದು, ವೇಳಾಪಟ್ಟಿಯನ್ನು ಅಧಿಕೃತವಾಗಿ ಪ್ರಕಟಿಸಿಲ್ಲ ಎಂದು ಮೂಲಗಳು ತಿಳಿಸಿವೆ.

2014ರಿಂದಲೂ ಕಾನೂನು ಸಮರದಡಿಯಲ್ಲೇ ನಡೆಯುತ್ತಾ ಬಂದಿದ್ದ ಕಂಬಳವು 2016-17ನೇ ಸಾಲಿನಲ್ಲಿ ಸ್ಥಗಿತಗೊಂಡಿತ್ತು. ಇದರ ವಿರುದ್ಧ ವ್ಯಾಪಕ ಆಕ್ರೋಶ ವ್ಯಕ್ತವಾಗಿ ಬೃಹತ್‌ ಹೋರಾಟ ನಡೆದಿತ್ತು. ಬಳಿಕ ರಾಷ್ಟ್ರಪತಿಯವರ ಅಧ್ಯಾದೇಶ ಮತ್ತು ಮಸೂದೆ ತಿದ್ದುಪಡಿಯ ಮೂಲಕ 2017-18ನೇ ಸಾಲಿನಿಂದ ಕಂಬಳಗಳು ಅಡೆತಡೆ ಇಲ್ಲದೆ ಯಶಸ್ವಿಯಾಗಿ ನಡೆಯುತ್ತಾ ಬಂದಿವೆ.

ಮುಂದುವರಿದ ಕಾನೂನು ಸಮರ

ಪ್ರಾಣಿ ಹಿಂಸೆ ತಡೆ (ಕರ್ನಾಟಕ ತಿದ್ದುಪಡಿ) ಪರಿಷ್ಕೃತ ಮಸೂದೆಗೆ ರಾಷ್ಟ್ರಪತಿ ಅಂಕಿತ ಹಾಕಿ ಕಾನೂನು ಆಗಿ ಜಾರಿಗೊಂಡಿದ್ದರೂ ಕಂಬಳದ ವಿರುದ್ಧ ಕಾನೂನು ಸಮರ...

ಫೋಟೋ - http://v.duta.us/pNud9QAA

ಹೆಚ್ಚು ಓದಲು ಇಲ್ಲಿ ಕ್ಲಿಕ್ ಮಾಡಿ - http://v.duta.us/XzHj1gAA

📲 Get Dakshina Kannada News on Whatsapp 💬