ಉತ್ತಮ ಮಳೆಗೆ ರಾಗಿ ಬೆಳೆ ಚೇತರಿಕೆ

  |   Bangalore-Ruralnews

ಹೊಸಕೋಟೆ: ತಾಲೂಕಿನಲ್ಲಿ ಉತ್ತಮ ಮಳೆಯಾಗುತ್ತಿರುವುದರಿಂದ ರಾಗಿ ಬೆಳೆ ಪುನರ್ಜನ್ಮ ಪಡೆದಿದ್ದು, ರೈತರ ಮೊಗದಲ್ಲಿ ಸಂತಸ ಮೂಡಿದೆ. ತಾಲೂಕಿನಲ್ಲಿ ಜನೇವರಿಯಿಂದ ಡಿಸೆಂಬರ್‌ವರೆಗೂ 782 ಮಿ.ಮೀ. ವಾಡಿಕೆ ಮಳೆಯಾಗಬೇಕಾಗಿದ್ದು, ಸೆಪ್ಟೆಂಬರ್‌ ಅಂತ್ಯಕ್ಕೆ 551 ಮಿ.ಮೀ. ನಿರೀಕ್ಷಿಸಿದ್ದು, 460 ಮಿ.ಮೀ. ನಷ್ಟು ಮಳೆ ದಾಖಲಾಗಿದೆ. ಶೇ.18ರಷ್ಟು ಕೊರತೆಯಾಗಿದೆ.

ಆಗಸ್ಟ್‌ 15ರವರೆಗೆ ರೈತರು ರಾಗಿ ಭಿತ್ತನೆ ಮಾಡಿದ್ದು, ಮಧ್ಯದಲ್ಲಿ ಮಳೆಯ ತೀವ್ರ ಅಭಾವ ತಲೆದೋರಿದ್ದ ಕಾರಣ ಬೆಳೆ ಬಾಡುವ ಹಂತ ತಲುಪಿತ್ತು. ಇದೀಗ ಬೀಳುತ್ತಿರುವ ಮಳೆಯಿಂದಾಗಿ ರಾಗಿ ಬೆಳೆ ಗಣನೀಯ ಚೇತರಿಕೆ ಪಡೆದುಕೊಂಡು ಕೆಲವೆಡೆ ತೆನೆಗಳು ಕಂಡುಬರುತ್ತಿವೆ.

ರಾಗಿ ಬಿತ್ತನೆಗಾಗಿ ಸಜ್ಜುಗೊಳಿಸಿದ್ದ ಜಮೀನಿನಲ್ಲಿ ಕೆಲವು ರೈತರು ಪರ್ಯಾಯವಾಗಿ ಹುರುಳಿ ಭಿತ್ತನೆ ಮಾಡಿದ್ದು, ತಾಲೂಕಿನಾದ್ಯಂತ ಸುಮಾರು 14 ಸಾವಿರ ಎಕರೆ ಪ್ರದೇಶದಲ್ಲಿ ರಾಗಿ ಬೆಳೆಯಲಾಗುತ್ತಿದ್ದು, ತಡವಾಗಿ ಮಳೆ ಪ್ರಾರಂಭಗೊಂಡ ಕಾರಣದಿಂದ ಶೇ.80ರಷ್ಟು ಮಾತ್ರ ಬಿತ್ತನೆ ಮಾಡಲಾಗಿದೆ.

2018ರಲ್ಲೂ ಸಹ ತಾಲೂಕನ್ನು ಬರ ಪೀಡತ ಪ್ರದೇಶವೆಂದು ಘೋಷಿಸಿದ್ದು, ವೀಕ್ಷಣೆಗಾಗಿ ಕೇಂದ್ರ ತಂಡ ಬರುವ ಒಂದೆರಡು ದಿನಗಳ ಹಿಂದೆ ಮಳೆಯಾಗಿ ಸುಧಾರಣೆ ಕಂಡುಬಂದು ಅಧಿಕಾರಿಗಳು ಪೇಚಿಗೆ ಒಳಗಾಗಬೇಕಾದ ಪರಿಸ್ಥಿತಿ ನಿರ್ಮಾಣಗೊಂಡಿತ್ತು. 2019ರಲ್ಲೂ ಸಹ ತಾಲೂಕನ್ನು ಬರಪೀಡಿತ ಎಂದು ಘೋಷಿಸಲಾಗಿದ್ದು, ಹಾನಿಗೊಂಡ ಬೆಳೆಗೆ ಅನುಗುಣವಾಗಿ ರೈತರು ಪರಿಹಾರ ಪಡೆಯಲು ಸಾಧ್ಯವಾಗಲಿದೆ....

ಫೋಟೋ - http://v.duta.us/yqPpKQEA

ಹೆಚ್ಚು ಓದಲು ಇಲ್ಲಿ ಕ್ಲಿಕ್ ಮಾಡಿ - http://v.duta.us/-HWZQwAA

📲 Get Bangalore Rural News on Whatsapp 💬