ಎಲ್ಲ ಸಮುದಾಯ ಅಭಿವೃದ್ಧಿಗೆ ಪ್ರಯತ್ನ

  |   Belgaumnews

ಗೋಕಾಕ: ಕ್ಷೇತ್ರದ ಎಲ್ಲ ಸಮುದಾಯಗಳ ಅಭಿವೃದ್ಧಿಗೆ ತಮ್ಮ ಅಧಿಕಾರಾವಧಿಯಲ್ಲಿ ಶ್ರಮಿಸುತ್ತಿರುವುದಾಗಿ ಅನರ್ಹ ಶಾಸಕ ರಮೇಶ ಜಾರಕಿಹೊಳಿ ಹೇಳಿದರು.

ನಗರದ ತಮ್ಮ ಕಾರ್ಯಾಲಯದಲ್ಲಿ ಮಂಗಳವಾರ ತಾಲೂಕಿನ ಎಸ್‌ಸಿ-ಎಸ್‌ಟಿ ಜನರ ಕುಂದು ಕೊರತೆ ಹಾಗೂ ಹಿತರಕ್ಷಣೆಯ ಸಭೆಯಲ್ಲಿ ಮಾತನಾಡಿದ ಅವರು, ಕ್ಷೇತ್ರದಲ್ಲಿ ಎಲ್ಲ ಸಮುದಾಯಗಳಿಗೆ ಅಧಿ ಕಾರ ನೀಡಿ ಸಮುದಾಯಗಳ ಪ್ರಗತಿಗಾಗಿ ಶ್ರಮಿಸಲಾಗುತ್ತಿದೆ ಎಂದು ತಿಳಿಸಿದರು.

ಎಸ್‌ಸಿ/ಎಸ್‌ಟಿ ಜನಾಂಗದ ಮುಖಂಡರು ಎಲ್ಲ ಸಮುದಾಯಗಳ ಮುಖಂಡರೊಂದಿಗೆ ಸಹಕಾರ ಮನೋಭಾವದಿಂದ ನಡೆದು ತಮ್ಮ ಸಮುದಾಯದ ಅಭಿವೃದ್ಧಿಗೂ ಮಹತ್ವ ನೀಡಿ ಕಾರ್ಯಪ್ರವೃತ್ತರಾಗಬೇಕು. ಇಲ್ಲಿಯ ಜನರ ಮನದಾಳವನ್ನು ಅರಿತು ಅವರ ಸಮಸ್ಯೆಗೆ ಸ್ಪಂದಿಸಿದ್ದೇನೆ. ಅನ್ಯಾಯ ಮಾಡಿದವರಿಗೆ ಜನರೇ ತಕ್ಕ ಪಾಠ ಕಲಿಸುತ್ತಾರೆ. ಕ್ಷೇತ್ರದ ಜನತೆ ಸಂಘಟಿತರಾಗಿ ಯಾವುದೇ ಉಹಾ-ಪೋಹಗಳಿಗೆ ಕಿವಿಕೊಡದೇ ಮುಂಬರುವ ಉಪಚುನಾವಣೆಯಲ್ಲಿ ತಮ್ಮನ್ನು ಬೆಂಬಲಿಸುವಂತೆ ವಿನಂತಿಸಿದರು.

ಇದೇ ಸಂದರ್ಭದಲ್ಲಿ ಗೋಕಾಕ ಮತಕ್ಷೇತ್ರದ ಜಿ.ಪಂ ವ್ಯಾಪ್ತಿಯ ಎಸ್‌ಸಿ/ಎಸ್‌ಟಿ ಜನಾಂಗದ ಹಿತರಕ್ಷಣಾ ಸಮಿತಿ ಸದಸ್ಯರ ಆಯ್ಕೆ ಪ್ರಕ್ರಿಯೆ ಜರುಗಿ, ಮಮದಾಪೂರ ಜಿ.ಪಂನಿಂದ ವೀರಭದ್ರ ಮೈಲನ್ನವರ, ಖನಗಾಂವದಿಂದ ರಾಮಪ್ಪ ಮರೆಪ್ಪಗೋಳ, ಅಕ್ಕತಂಗೇರಹಾಳದಿಂದ ಅಜೀತ ಹರಿಜನ, ಶಿಂದಿಕುರಬೇಟದಿಂದ ಓಂಕಾರ ಬಂಡಿವಡ್ಡರ ಹಾಗೂ ಗೋಕಾಕ ಶಹರದಿಂದ ಗೋವಿಂದ ಕಳ್ಳಿಮನಿ ಅವರನ್ನು ಆಯ್ಕೆ ಮಾಡಲಾಯಿತು. ಈ ಸಂದರ್ಭದಲ್ಲಿ ಮಡ್ಡೆಪ್ಪ ತೋಳಿನವರ, ಸುರೇಶ ಸನದಿ ಸೇರಿದಂತೆ ಅನೇಕರು ಇದ್ದರು.

ಫೋಟೋ - http://v.duta.us/2GDTBgAA

ಹೆಚ್ಚು ಓದಲು ಇಲ್ಲಿ ಕ್ಲಿಕ್ ಮಾಡಿ - http://v.duta.us/A1RyeQAA

📲 Get Belgaum News on Whatsapp 💬