ಐಹೊಳೆಯತ್ತ ಪ್ರವಾಸಿಗರ ದಂಡು
ಅಮೀನಗಡ: ಪ್ರವಾಹ ಭೀತಿಯಿಂದಾಗಿ ಪ್ರವಾಸ ಮೊಟಕುಗೊಳಿಸಿದ್ದ ಪ್ರವಾಸಿಗರು ಪ್ರವಾಸಿ ತಾಣ ಐಹೊಳೆ ಕಡೆಗೆ ಮುಖ ಮಾಡಿದ್ದಾರೆ.
ರವಿವಾರ ಸೇರಿದಂತೆ ಮಹಾನವಮಿ, ವಿಜಯದಶಮಿ ನಿಮಿತ್ತ ಸರ್ಕಾರಿ ಕಚೇರಿಗಳಿಗೆ ಸಾಲು ಸಾಲು ರಜೆ ಹಾಗೂ ಮಕ್ಕಳಿಗೆ ದಸರಾ ನಿಮಿತ್ತ ಶಾಲೆಗಳ ರಜೆ ಹಿನ್ನೆಲೆಯಲ್ಲಿ ಐಹೊಳೆಯಲ್ಲಿರುವ ಐತಿಹಾಸಿಕ ಪ್ರಸಿದ್ಧ ದೇವಾಲಯಗಳನ್ನು ವೀಕ್ಷಣೆ ಮಾಡಲು ಆಗಮಿಸುವ ಪ್ರವಾಸಿಗರ ಸಂಖ್ಯೆ ದುಪ್ಪಟ್ಟಾಗಿದೆ. ವಿಶೇಷವಾಗಿ ಐಹೊಳೆ ಮತ್ತು ಪಟ್ಟದಕಲ್ಲಿಗೆ ಎರಡು ಮೂರು ದಿನಗಳಲ್ಲಿ ರಾಜ್ಯದ ಮತ್ತು ಹೊರರಾಜ್ಯದ ವಿವಿಧ ಭಾಗಗಳಿಂದ ತಂಡೋಪತಂಡವಾಗಿ ಸಾವಿರಾರು ಜನ ಪ್ರವಾಸಿಗರು ಆಗಮಿಸಿದ್ದು, ಪ್ರವಾಸಿ ಸ್ಥಳಗಳಲ್ಲಿ ಜನಸಾಗರ ಕಂಡು ಬರುತ್ತಿದೆ.
ಪ್ರವಾಸಿಗರಿಂದ ಸ್ಮಾರಕ ವೀಕ್ಷಣೆ: ಐಹೊಳೆಗೆ ಬಂದ ಪ್ರವಾಸಿಗರು ಇತಿಹಾಸ ಪ್ರಸಿದ್ದ ಪಾರಂಪರಿಕ ಸ್ಮಾರಕಗಳಾದ ದುರ್ಗಾ ದೇವಾಲಯ, ಲಾಡಖಾನ, ಗೌಡರ ದೇವಾಲಯ, ಹುಚ್ಚಮಲ್ಲಿ ದೇವಾಲಯ, ರಾವಳಪಡಿ ಗುಹಾಂತರ, ಗಳಗನಾಥ ದೇವಾಲಯ,ಸೂರ್ಯನಾರಯಣನ ಗುಡಿ, ಕೊಂತಿ ಗುಡಿಗಳ ಗುಂಪು ಸೇರಿದಂತೆ 125 ಕ್ಕೂ ಹೆಚ್ಚು ದೇಗುಲಗಳನ್ನು ಐಹೊಳೆ ಪರಿಸರದಲ್ಲಿ ನೋಡಬಹುದಾಗಿದೆ ಮತ್ತು ವಿಶಾಲವಾದ ಸ್ಥಳಗಳನ್ನು ಒಳಗೊಂಡಂತೆ ದುರ್ಗದ ಗೋಡೆಗಳಿದ್ದು, ಈಗ ಅವುಗಳ ಕುರುಹುಗಳ ಮಾತ್ರ ಉಳಿದಿವೆ....
ಫೋಟೋ - http://v.duta.us/BXoQLQAA
ಹೆಚ್ಚು ಓದಲು ಇಲ್ಲಿ ಕ್ಲಿಕ್ ಮಾಡಿ - http://v.duta.us/Iz-Q6gAA