ಕುಡಿವ ನೀರಿನ ಸಮಸ್ಯೆ ನಿವಾರಣೆಗೆ ಸಹಕರಿಸಿ

  |   Chikkaballapuranews

ಶಿಡ್ಲಘಟ್ಟ: ತಾಲೂಕು ಸಹಿತ ಜಿಲ್ಲೆಯಲ್ಲಿ ಕುಡಿಯುವ ನೀರಿಗಾಗಿ ಹಾಹಾಕಾರ ಉಂಟಾಗಿದ್ದು, ಇದನ್ನು ಮನದಟ್ಟು ಮಾಡಿಕೊಂಡಿರುವ ಖಾಸಗಿ ಕೊಳವೆಬಾವಿಗಳನ್ನು ಹೊಂದಿರುವ ಮಾಲೀಕರು ಹಾಗೂ ದಾನಿಗಳು ಕುಡಿಯುವ ನೀರು ಪೂರೈಕೆ ಮಾಡಲು ಸಹಕರಿಸಲು ಮುಂದಾಗಿರುವುದು ಶ್ಲಾಘನೀಯ ಮತ್ತು ಸಂತೋಷದ ಸಂಗತಿ ಎಂದು ಶಾಸಕ ವಿ.ಮುನಿಯಪ್ಪ ಸಂತಸ ವ್ಯಕ್ತಪಡಿಸಿದರು.

ನಗರದ ವಾಸವಿ ರಸ್ತೆಯಲ್ಲಿ ಶ್ರೀ ಲಕ್ಷ್ಮೀ ನೀರು ಶುದ್ಧೀಕರಣ ಘಟಕ ಉದ್ಘಾಟಿಸಿ ಮಾತನಾಡಿದ ಅವರು, ಈಗಾಗಲೇ ನಗರಸಭೆಯ ಎರಡು ವಾರ್ಡ್‌ಗಳಿಗೆ 10 ವರ್ಷಗಳಿಂದ ಉಚಿತವಾಗಿ ಕುಡಿಯುವ ನೀರು ಸರಬರಾಜು ಮಾಡುತ್ತಿರುವ ಲಕ್ಷ್ಮೀ ಮೆಡಿಕಲ್‌ ಬಾಬು ಅವರ ಸಮಾಜ ಸೇವೆ ಶ್ಲಾ ಸಿದ ಶಾಸಕರು, ದಾನಿಗಳು ತಮ್ಮ ಖಾಸಗಿ ಕೊಳವೆಬಾವಿಗಳಿಂದ ಕುಡಿಯುವ ನೀರು ಸರಬರಾಜು ಮಾಡಬೇಕೆಂದು ಮನವಿ ಮಾಡಿದರು.

140 ಕೊಳವೆಬಾವಿಗಳು ವಿಫ‌ಲ: ನಗರದ 3ನೇ ವಾರ್ಡ್‌ನಲ್ಲಿ ಆರಂಭಿಸಿರುವ ಶುದ್ಧ ನೀರು ಘಟಕ ಸದುಪಯೋಗ ಮಾಡಿಕೊಳ್ಳಬೇಕೆಂದರು. ಶಿಡ್ಲಘಟ್ಟ ನಗರ ಮತ್ತು ಗ್ರಾಮಾಂತರ ಪ್ರದೇಶದಲ್ಲಿ ಕುಡಿಯುವ ನೀರಿಗಾಗಿ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಈಗಾಗಲೇ 350 ಕೊಳವೆಬಾವಿಗಳನ್ನು ಕೊರೆಯಲಾಗಿದೆ. ಅದರಲ್ಲಿ 140 ಕೊಳವೆಬಾವಿಗಳು ವಿಫ‌ಲಗೊಂಡಿದೆ. ಇದರಿಂದ ಕುಡಿಯುವ ನೀರು ಪೂರೈಕೆ ಮಾಡುವುದು ಕಷ್ಟದ ಕೆಲಸವಾಗಿದೆ ಎಂದರು. ಸರ್ಕಾರ ಕೂಡಲೇ ಕುಡಿಯುವ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ಒದಗಿಸುವ ನಿಟ್ಟಿನಲ್ಲಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು....

ಫೋಟೋ - http://v.duta.us/wvrBJQAA

ಹೆಚ್ಚು ಓದಲು ಇಲ್ಲಿ ಕ್ಲಿಕ್ ಮಾಡಿ - http://v.duta.us/3MxyVQAA

📲 Get Chikkaballapura News on Whatsapp 💬