"ಗಾಂಧಿಗ್ರಾಮ' ಚಿತ್ರಕ್ಕೆ ಮುಹೂರ್ತ

  |   Chamarajanagarnews

ಚಾಮರಾಜನಗರ: ರಾಮಾರ್ಜುನ್‌ ನಿರ್ದೇಶನದ ಗಾಂಧಿಗ್ರಾಮ ಚಿತ್ರದ ಮುಹೂರ್ತ ನಗರದ ಚಾಮರಾಜೇಶ್ವರ ದೇವಾಲಯದಲ್ಲಿ ವಿಜಯ ದಶಮಿಯಂದು ನಡೆಯಿತು. ಚಿತ್ರದ ನಿರ್ದೇಶಕ ರಾಮಾರ್ಜುನ್‌ ಮತ್ತು ತಂಡ ಚಾಮರಾಜೇಶ್ವರ ದೇವಸ್ಥಾನದಲ್ಲಿ ವಿಶೇಷಪೂಜೆ ಸಲ್ಲಿಸಿದರು.

ಚಿತ್ರಕ್ಕೆ ರಣಧೀರ ಖ್ಯಾತಿಯ ನಟ ವೆಂಕಟೇಶ್‌ ಕ್ಲ್ಯಾಪ್‌ ಮಾಡಿ ಶುಭ ಕೋರಿದರು. ಈ ಸಂದರ್ಭದಲ್ಲಿ ಚಿತ್ರದ ನಿರ್ದೇಶಕ ರಾಮಾರ್ಜುನ್‌ ಮಾತನಾಡಿ, ಗಾಂಧಿಗ್ರಾಮ ಚಿತ್ರವು ಕಾಮಿಡಿ, ಪ್ರೇಮ, ಗ್ರಾಮೀಣ ಸೊಗಡು ಹೊಂದಿದ್ದು, ಮಹಾತ್ಮಗಾಂಧೀಜಿಯವರ ಹಲವಾರು ಕನಸುಗಳಲ್ಲಿ ಒಂದು ಕನಸನ್ನು ಚಿತ್ರ ಸಾಕಾರಗೊಳಿಸಲು ಹೊರಟಿದೆ.

ಈ ಚಿತ್ರದ ಮೂಲಕ ಗಾಂಧೀಜಿಯವರ ಸಂದೇಶವನ್ನು ಸಮಾಜಕ್ಕೆ ಸಾರುವ ಕೆಲಸ ಮಾಡಲಾಗುತ್ತಿದೆ. ನಮ್ಮಂತಹ ಹೊಸ ಪ್ರತಿಭೆಗಳನ್ನು ಪ್ರೇಕ್ಷಕರು ಪ್ರೋತ್ಸಾಹಿಸಿ ಬೆಳಸುವಂತೆ ಮನವಿ ಮಾಡಿದರು.

ಕಥೆ, ಚಿತ್ರಕಥೆ, ನಿರ್ದೇಶನದ ಹೊಣೆಯನ್ನು ತಾನು ವಹಿಸಿದ್ದು, ಛಾಯಾಗ್ರಹಣ ಸದಾಶಿವ ಹಿರೇಮಠ ಅವರದು. ಮಹದೇವಮೂರ್ತಿ, ವೆಂಕಟೇಶ್‌, ಮಂಜು ಭರ್ಜರಿ, ಮಂಜು, ಡಿಂಗ್ರಿನರೇಶ್‌, ವಿಜಯ್‌, ಮೌನಿ, ಜ್ಯೋತಿ ಮುರೂರು, ಖುಷಿ, ಸಂಗೀತಾ, ಶ್ರುತಿ ಮತ್ತಿತರರು ಪಾತ್ರವರ್ಗದಲ್ಲಿದ್ದಾರೆ ಎಂದರು.

ಸಿನಿ ಮಾತೃಶ್ರೀ ಕ್ರಿಯೇಷನ್‌ ಸಂಸ್ಥೆ, ಗೆಳೆಯರು ಚಿತ್ರ ನಿರ್ಮಿಸುತ್ತಿದ್ದು, ಚಿತ್ರದ ಚಿತ್ರೀಕರಣವು ಚಾಮರಾಜನಗರ ತಾಲೂಕಿನ ಕೆಲವು ಗ್ರಾಮಗಳು, ಮಂಡ್ಯ, ಪಾಂಡವಪುರ, ಮಡಿಕೇರಿಗಳಲ್ಲಿ 45 ದಿನಗಳ ಕಾಲ ನಡೆಯುತ್ತದೆ ಎಂದು ರಾಮಾರ್ಜುನ್‌ ತಿಳಿಸಿದರು.

ಫೋಟೋ - http://v.duta.us/0WohdwAA

ಹೆಚ್ಚು ಓದಲು ಇಲ್ಲಿ ಕ್ಲಿಕ್ ಮಾಡಿ - http://v.duta.us/s1MxxQAA

📲 Get Chamarajanagar News on Whatsapp 💬