ಜಿಲ್ಲಾದ್ಯಂತ ಕಳೆಗಟ್ಟಿದ ವಿಜಯದಶಮಿ ಸಂಭ್ರಮ

  |   Chikkaballapuranews

ಜಿಲ್ಲಾದ್ಯಂತ ವಿಜಯದಶಮಿ ಹಾಗೂ ಆಯುಧ ಪೂಜೆ ಶ್ರದ್ಧಾಭಕ್ತಿಯಿಂದ ಆಚರಿಸಲಾಯಿತು. ಮತ್ತೂಂದೆಡೆ 9 ದಿನಗಳಿಂದ ದುರ್ಗಾ ಮಾತೆಯನ್ನು ವಿವಿಧ ಅಲಂಕಾರಗಳೊಂದಿಗೆ ವೈಭವವಾಗಿ ಆಚರಿಸಿಕೊಂಡ ಬಂದ ಶರನ್ನವರಾತ್ರಿ ಸಂಭ್ರಮಕ್ಕೆ ತೆರೆ ಬಿತ್ತು. ಉತ್ತಮ ಮಳೆಯಾಗಿದ್ದರಿಂದ ಜಿಲ್ಲಾದ್ಯಂತ ಈ ಬಾರಿ ಮಹಾನವಮಿ ಸಂಭ್ರಮ ಜೋರಾಗಿಯೇ ಇತ್ತು. ನವರಾತ್ರಿ ಹಿನ್ನೆಲೆಯಲ್ಲಿ ಜಿಲ್ಲೆಯ ಪ್ರಮುಖ ದೇವಾಲಯಗಳು ವಿದ್ಯುತ್‌ ದೀಪಾಲಂಕಾರದೊಂದಿಗೆ ಜಗಮಗಿಸಿದವು.

ಚಿಕ್ಕಬಳ್ಳಾಪುರ: ನಾಡಿನ ಸಾಂಸ್ಕೃತಿಕ ಪರಂಪರೆ ಸಾರುವ ದಸರಾ ಹಬ್ಬದ ಪ್ರಯುಕ್ತ ಜಿಲ್ಲಾದ್ಯಂತ ಆಯುಧ ಪೂಜಾ ಹಾಗೂ ವಿಜಯ ದಶಮಿ ಹಬ್ಬವನ್ನು ಜನತೆ ಭಕ್ತಿಭಾವದಿಂದ ಆಚರಿಸುವ ಮೂಲಕ ಕಳೆದ 9 ದಿನಗಳಿಂದ ವೈವಿಧ್ಯಮಯವಾಗಿ ಆಚರಿಸಿಕೊಂಡು ಬಂದ ನವರಾತ್ರಿ ಉತ್ಸವಕ್ಕೆ ಜಿಲ್ಲೆಯಲ್ಲಿ ಮಂಗಳವಾರ ವೈಭವದ ತೆರೆ ಬಿದ್ದಿದೆ. ಜಿಲ್ಲಾದ್ಯಂತ ಎರಡು ದಿನಗಳಿಂದ ಹಬ್ಬದ ಸಂಭ್ರಮ ಕಳೆಗಟ್ಟಿತ್ತು. ನಾಗರಿಕರು ದಿನ ಬಳಕೆಯ ಆಯುಧ ಹಾಗೂ ವಾಹನಗಳಿಗೆ ಪೂಜೆ ವಿಶೇಷ ಪೂಜೆ ಸಲ್ಲಿಸಿದರು.

ನವರಾತ್ರಿ ವೈಭವಕ್ಕೆ ಅಂತಿಮ ತೆರೆ: ನಾಡಹಬ್ಬ ದಸರಾ ಹಬ್ಬದ ಪ್ರತೀಕವಾಗಿ ಜಿಲ್ಲಾದ್ಯಂತ ವೈಶಿಷ್ಟವಾಗಿ ಆಚರಿಸಲಾದ ನವರಾತ್ರಿ ಉತ್ಸವಕ್ಕೆ ವೈಭವದ ನಡುವೆ ಅಂತಿಮ ತೆರೆ ಬಿದ್ದಿದೆ. ತಾಲೂಕಿನ ಮುದ್ದೇನಹಳ್ಳಿಯ ಸತ್ಯಸಾಯಿ ಗ್ರಾಮದಲ್ಲಿ ಆಚರಿಸಲಾದ ದುರ್ಗಾಮಾತೆ ಆರಾಧನಾ ಉತ್ಸವ ಕೊನೆಗೊಂಡಿತು....

ಫೋಟೋ - http://v.duta.us/FGZ-SgAA

ಹೆಚ್ಚು ಓದಲು ಇಲ್ಲಿ ಕ್ಲಿಕ್ ಮಾಡಿ - http://v.duta.us/CZt8gwEA

📲 Get Chikkaballapura News on Whatsapp 💬