ದಸರೆಯಲ್ಲಿ ಗಮನಸೆಳೆದ ಸ್ತಬ್ಧಚಿತ್ರಗಳು

  |   Chamarajanagarnews

ಕೊಳ್ಳೇಗಾಲ: ತಾಲೂಕು ಆಡಳಿತದಿಂದ ಏರ್ಪಡಿಸಿದ್ದ ಗ್ರಾಮೀಣ ದಸರಾದಲ್ಲಿ ವಿವಿಧ ಇಲಾಖೆಯ ಸ್ತಬ್ಧ ಚಿತ್ರಗಳ ಮೆರವಣಿಗೆಗೆ ಶಾಸಕ ಎನ್‌.ಮಹೇಶ್‌ ಚಾಲನೆ ನೀಡಿದರು. ಪಟ್ಟಣದ ಎಂಜಿಎಸ್‌ವಿ ಜೂನಿಯರ್‌ ಕಾಲೇಜು ಮೈದಾನದಲ್ಲಿ ವಿವಿಧ ಇಲಾಖೆಯ ಸುಮಾರು 15 ಸ್ತಬ್ಧ ಚಿತ್ರಗಳು ಮತ್ತು 17 ವಿವಿಧ ಕಲಾತಂಡಗಳಿಗೆ ಚಾಲನೆ ನೀಡಿದ ಶಾಸಕರು, ಮೊದಲು ನಂದಿಕಂಬಕ್ಕೆ ಪೂಜೆ ಸಲ್ಲಿಸುವ ಮೂಲಕ ಮೆರವಣಿಗೆಗೆ ಅಧಿಕೃತ ಚಾಲನೆ ನೀಡಿದರು.

ಉತ್ತಮ ನಿರ್ವಹಣೆ: ಬಳಿಕ ಮಾತನಾಡಿದ ಅವರು, ತಾಲೂಕು ಆಡಳಿತದ ವತಿಯಿಂದ ಆಯೋಜಿಸಿರುವ ಗ್ರಾಮೀಣ ದಸರಾ ಕಾರ್ಯಕ್ರಮದಲ್ಲಿ ವಿವಿಧ ಇಲಾಖೆ ವತಿಯಿಂದ ಭಾಗವಹಿಸಿರುವ ಸ್ತಬ್ಧ ಚಿತ್ರಗಳು ಮತ್ತು ಕಲಾತಂಡಗಳ ಮೆರವಣಿಗೆ ಮತ್ತು ಕುಂಭಮೇಳ ಆಯೋಜನೆ ಅಭೂತವಾಗಿದೆ ಎಂದರು. ತಾಲೂಕಿನ ಉಪ ವಿಭಾಗದ ಎಲ್ಲಾ ಇಲಾಖೆಯ ಅಧಿಕಾರಿಗಳ ಪರಿಶ್ರಮದಿಂದ ಉತ್ತಮ ಸ್ತಬ್ಧ ಚಿತ್ರಗಳು ನಿರ್ಮಾಣ ವಾಗಿದ್ದು, ಎಲ್ಲಾ ಅಧಿಕಾರಿಗಳ ಶ್ರಮಕ್ಕೆ ಅಭಿನಂದನೆ ಸಲ್ಲಿಸಿದರು.

ಸ್ಥಳೀಯ ಕಲಾ ತಂಡಕ್ಕೆ ಆದ್ಯತೆ: ಕಳೆದ ಮೂರು ವರ್ಷಗಳಿಂದ ಗ್ರಾಮೀಣ ದಸರಾ ಆಯೋಜನೆ ಸ್ಥಗಿತಗೊಂಡಿತ್ತು. ಈ ಬಾರಿ ಸರ್ಕಾರ ತಾಲೂಕು ಆಡಳಿತದ ವತಿಯಿಂದ ಗ್ರಾಮೀಣ ದಸರಾ ಆಚರಣೆಗೆ ಅನುಮತಿ ನೀಡಿದ ಹಿನ್ನೆಲೆಯಲ್ಲಿ ಅತ್ತುತ್ಯುಮ ಸ್ಥಳೀಯ ಕಲಾ ತಂಡಗಳಿಗೆ ಆದ್ಯತೆ ನೀಡಲಾಗಿದ್ದು, ಗ್ರಾಮೀಣ ದಸರಾಕ್ಕೆ ಕಳೆಬಂದಿದೆ ಎಂದರು....

ಫೋಟೋ - http://v.duta.us/8TfQ9AAA

ಹೆಚ್ಚು ಓದಲು ಇಲ್ಲಿ ಕ್ಲಿಕ್ ಮಾಡಿ - http://v.duta.us/Vgp-sAAA

📲 Get Chamarajanagar News on Whatsapp 💬