ದಸರಾ, ನವರಾತ್ರಿ ಸಂಭ್ರಮಕ್ಕೆ ತೆರೆ

  |   Mysorenews

ಹುಣಸೂರು: ಹಳೇ ಮೈಸೂರು ಭಾಗದಲ್ಲಿ ದಸರಾ ಮಹೋತ್ಸವ ಹಾಗೂ ನವರಾತ್ರಿ ಉತ್ಸವ ಎಂದರೆ ಸಂಭ್ರಮಕ್ಕೆ ಪಾರವೇ ಇಲ್ಲ. ಪ್ರತಿ ಮನೆಗಳಲ್ಲೂ ಸಡಗರ, ಸಂಭ್ರಮ ಮನೆ ಮಾಡಿರುತ್ತದೆ. ನವರಾತ್ರಿ ಬಂತೆಂದರೆ ಮಕ್ಕಳಿಗೆ ಒಂದೆಡೆ ರಜೆ ಖುಷಿ, ಮತ್ತೊಂದೆಡೆ ದೇವಾಲಯಗಳಲ್ಲಿ ಶಕ್ತಿ ದೇವತೆಗಳ ಆರಾಧನೆ ಅಲಂಕಾರ, ಮನೆ ಮನೆಗಳಲ್ಲಿ ಬೊಂಬೆಗಳನ್ನು ಪ್ರತಿಷ್ಠಾಪಿಸುವುದು,

ಮನೆಗೆ ಬರುವವರಿಗೆ ಸಿಹಿತಿಂಡಿ ಹಂಚುವುದು ಇಲ್ಲಿನ ಸಾಂಪ್ರದಾಯವಾಗಿದೆ. ಕೊನೆ ದಿನ ಆಯುಧ ಪೂಜೆಯಂದು ವಿಶೇಷ ಪೂಜೆ ಸಲ್ಲಿಸಿದ ನಂತರ ಬೊಂಬೆಗಳನ್ನು ವಿಸರ್ಜಿಸಿ, ಸ್ವಸ್ಥಾನಕ್ಕೆ ಸೇರಿಸುತ್ತಾರೆ. ಜೊತೆಗೆ ದೇಗುಲಗಳಲ್ಲಿ ವಿಶೇಷ ಪೂಜೆ ಸಲ್ಲಿಸಲಾಗುತ್ತದೆ. ಈ ಮೂಲಕ ದಸರಾ ಮಹೋತ್ಸವ ಹಾಗೂ ನವರಾತ್ರಿ ಉತ್ಸವಕ್ಕೆ ತೆರೆ ಬೀಳುತ್ತದೆ.

ಅಲಂಕೃತ ಬೊಂಬೆಗಳು: ನಗರದ ಹಳೇ ಹೌಸಿಂಗ್‌ ಬೋರ್ಡ್‌ ನಿವಾಸಿ, ಶಿಕ್ಷಕಿ ನಾಗಜ್ಯೋತಿ ಮನೆಯಲ್ಲಿ ನವರಾತ್ರಿ ಅಂಗವಾಗಿ 100ಕ್ಕೂ ಹೆಚ್ಚು ಆಕರ್ಷಕ ಅಲಂಕೃತ ಬೊಂಬೆಗಳನ್ನಿಡಲಾಗಿತ್ತು. ನಿತ್ಯ ಬೊಂಬೆಯನ್ನು ವೀಕ್ಷಿಸಲು ಬರುವ ಮಹಿಳೆಯರು ಹಾಗೂ ಮಕ್ಕಳಿಗೆ ತಿಂಡಿಗಳನ್ನು ತಯಾರಿಸಿ, ವಿತರಿಸಿ ಧನ್ಯತಾ ಭಾವ ಮೆರೆಯುತ್ತಾರೆ.

ದೇಗುಲಗಳಲ್ಲಿ ವಿಶೇಷ ಪೂಜೆ: ನಗರದ ಶಕ್ತಿದೇವತೆ ಎಂದೇ ಪ್ರತೀತಿ ಇರುವ ಮುತ್ತುಮಾರಮ್ಮ ದೇವಾಲಯದಲ್ಲಿ ದೇವರನ್ನು ವಿವಿಧ ಹೂವುಗಳಿಂದ ಸಿಂಗರಿಸಿರುವುದಲ್ಲದೇ ದೇವಾಲಯಕ್ಕೆ ಜಗಮಗಿಸುವ ವಿದ್ಯುತ್‌ ದೀಪಾಲಂಕಾರ ಮಾಡಿರಲಾಗಿರುತ್ತದೆ. ದೇಗುಲದ ಆವರಣದಲ್ಲಿ ಕಲ್ಲು ಗುಡ್ಡದಂತೆ ನಿರ್ಮಿಸಿರುವ ಅಲಂಕೃತ ಮಂಟಪದಲ್ಲಿ ಉತ್ಸವಮೂರ್ತಿಯನ್ನು ಪ್ರತಿಷ್ಠಾಪಿಸಲಾಗಿದೆ. ಸುತ್ತೆಲ್ಲಾ ಬೊಂಬೆಗಳನ್ನಿಟ್ಟು ತ್ರಿಕಾಲ ಪೂಜೆ ಸಲ್ಲಿಸಲಾಯಿತು. ಇನ್ನು ನಗರದ ಹೊರ ವಲಯದ ಮಡಿಕೇರಿ ಹೆದ್ದಾರಿಯಲ್ಲಿರುವ ಮೂರೂರಮ್ಮ ದೇವಾಲಯದಲ್ಲಿ ನವಧಾನ್ಯಗಳನ್ನು ಮೊಳಕೆ ಬರಿಸಿ, ನಿತ್ಯ ಪೂಜೆ ಸಲ್ಲಿಸಿ, ದೇವಸ್ಥಾಕ್ಕೆ ಬರುವ ಭಕ್ತರಿಗೆ ಪ್ರಸಾದ ವಿನಿಯೋಗಿಸಲಾಗುತ್ತಿದೆ....

ಫೋಟೋ - http://v.duta.us/QvC8MAAA

ಹೆಚ್ಚು ಓದಲು ಇಲ್ಲಿ ಕ್ಲಿಕ್ ಮಾಡಿ - http://v.duta.us/ysujfwAA

📲 Get Mysore News on Whatsapp 💬