ಧರ್ಮದ ವಿಜಯವೇ ದಸರಾ

  |   Kalburaginews

ಕಲಬುರಗಿ: ಧರ್ಮದ ಮೇಲೆ ಅಧರ್ಮದ ವಿಜಯದ ಸಂಕೇತವೇ ವಿಜಯ ದಶಮಿ ಹಬ್ಬದ ಸಂಕೇತ ಎಂದು ಮಾಜಿ ಸಚಿವ ಡಾ| ಶರಣ ಪ್ರಕಾಶ ಪಾಟೀಲ ಹೇಳಿದರು.

ನಗರದ ರಾಮಮಂದಿರ ಬಳಿಯ ಸಾಯಿರಾಮ ನಗರದಲ್ಲಿ ಏರ್ಪಡಿಸಲಾಗಿದ್ದ ಮೂರು ದಿನಗಳ ದಾಂಡಿಯಾ ನೈಟ್‌, ನೃತ್ಯ ಸ್ಪರ್ಧೆಗಳ ಸಮಾರೋಪ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ಧರ್ಮ ರಕ್ಷಣೆಗೆ ನಡೆಸಿದ ಹೋರಾಟದ ನೆನಪಿಗಾಗಿ ಮಾಡುವ ಹಬ್ಬವೇ ದಸರಾ ಹಬ್ಬವಾಗಿದೆ ಎಂದರು.

ಮುಖ್ಯ ಅತಿಥಿಯಾಗಿದ್ದ ವಿಧಾನ ಪರಿಷತ್‌ ಮಾಜಿ ಸದಸ್ಯ ಅಲ್ಲಮ ಪ್ರಭು ಪಾಟೀಲ ನೆಲೋಗಿ ಮಾತನಾಡಿ, ಧರ್ಮಕ್ಕೆ ಜಯ ಎನ್ನುವುದನ್ನು ಪ್ರತಿಪಾದಿಸುವುದೇ ದಸರಾ ಹಬ್ಬದ ವಿಶೇಷವಾಗಿದೆ. ಎಲ್ಲರೂ ಧರ್ಮ ಮಾರ್ಗದಲ್ಲಿ ಸಾಗುವ ಮೂಲಕ ಧರ್ಮ, ಸಂಸ್ಕೃತಿ ರಕ್ಷಣೆಗೆ ಮುಂದಾಗಬೇಕಿದೆ

ಎಂದರು. ಪತ್ರಕರ್ತ ವೈಜನಾಥ ಹಿರೇಮಠ ಮಾತನಾಡಿ, ಹಬ್ಬ ಹರಿದಿನಗಳಲ್ಲಿ ಎಲ್ಲರೂ ಒಗ್ಗೂಡಲು ಇರುವ ವೇದಿಕೆಗಳಲ್ಲಿ ಪಾಲ್ಗೊಂಡು ಹೊಸ ಶಕ್ತಿ, ಹುಮ್ಮಸ್ಸು ಪಡೆದುಕೊಳ್ಳಬೇಕು ಎಂದು ಹೇಳಿದರು.

ಸಾಯಿರಾಮ ನಗರದ ವಾರ್ಡ್‌ ನಂ: 55ರ ಪಾಲಿಕೆ ಸದಸ್ಯ ಮಹೇಶ ಹೊಸೂರ್ಕರ್‌ ಅಧ್ಯಕ್ಷತೆ ವಹಿಸಿದ್ದರು. ಪವನ ಗುತ್ತೇದಾರ, ಸಂಜೋಗ ರಾಠಿ, ಮಹೇಶ ದೊಶೇಟ್ಟಿ, ಗುರುರಾಜ ಇಟಗಿ, ರಾಘವೇಂದ್ರ ದೇಸಾಯಿ ಇದ್ದರು. ನಂತರ ದಾಂಡಿಯಾ, ನೃತ್ಯ ಪ್ರದರ್ಶನಗಳು ನಡೆದವು....

ಫೋಟೋ - http://v.duta.us/6vYgYgAA

ಹೆಚ್ಚು ಓದಲು ಇಲ್ಲಿ ಕ್ಲಿಕ್ ಮಾಡಿ - http://v.duta.us/spDtGgAA

📲 Get Kalburagi News on Whatsapp 💬