ನಾಡಿನ ಕಲೆ-ಸಂಸ್ಕೃತಿ ಪ್ರತಿಬಿಂಬಿಸಿದ ಮೆರವಣಿಗೆ

  |   Mysorenews

ಮೈಸೂರು: ಮೈಸೂರು ದಸರಾ ಮಹೋತ್ಸವದ ಪ್ರಮುಖ ಆಕರ್ಷಣೆಯಾಗಿರುವ ಜಂಬೂಸವಾರಿ ಮೆರವಣಿಗೆಯಲ್ಲಿ ಆಕರ್ಷಣೆಯ ಕೇಂದ್ರಬಿಂದು ಆಗಿರುವ ದಸರಾ ಗಜಪಡೆಯ ಕ್ಯಾಪ್ಟನ್‌ ಅರ್ಜುನ 750 ಕೇಜಿ ತೂಕದ ಚಿನ್ನದ ಅಂಬಾರಿಯಲ್ಲಿ ಹೊತ್ತು ತರುವ ಚಾಮುಂಡೇಶ್ವರಿ ದೇವಿಯ ಉತ್ಸವ ಮೂರ್ತಿ ಜತೆಗೆ ಜವಾಬ್ದಾರಿ ನಿಭಾಯಿಸಿದರೆ ಇನ್ನುಳಿದ ಒಂಭತ್ತು ಆನೆಗಳು ಬೇರೆ ಬೇರೆ ಜವಾಬ್ದಾರಿ ನಿರ್ವಹಿಸಿದವು.

ಅರಮನೆಯ ಬಲರಾಮ ದ್ವಾರದಲ್ಲಿ ಮೈಸೂರಿನ ಬಿ.ಬಿ.ಮೊಹಲ್ಲದ ಶ್ರೀಗುರುಮಲ್ಲೇಶ್ವರ ನಂದಿಧ್ವಜ ಸಂಘ ಹಾಗೂ ಶ್ರೀಗೌರಿಶಂಕರ ನಂದಿಧ್ವಜ ಸಂಘದವರ ನಂದಿಧ್ವಜಕ್ಕೆ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಪೂಜೆ ಸಲ್ಲಿಸಿದರು. ಅದರೊಂದಿಗೆ ಜಂಬೂಸವಾರಿ ಮೆರವಣಿಗೆ ಆರಂಭವಾಯಿತು. ಮೊದಲಿಗೆ ಬಲರಾಮ ಆನೆ ನಿಶಾನೆ ಆನೆಯಾಗಿ ಸಾಗಿದರೆ, ಅದರ ಹಿಂದೆ ಅಭಿಮನ್ಯು, ಗೋಪಾಲಸ್ವಾಮಿ, ಧನಂಜಯ, ವಿಕ್ರಮ ಆನೆಗಳು ಸಾಗಿದವು.

ಕೊಂಬು ಕಹಳೆ: ಅದರ ಹಿಂದೆ ಪೊಲೀಸ್‌ ವಾದ್ಯವೃಂದ, ಶ್ರೀರಂಗಪಟ್ಟಣ ತಾಲೂಕು ಚಿನ್ನೇನಹಳ್ಳಿಯ ಎಚ್‌.ಕೆ.ಜಲಕೇಶ್‌, ಚಿತ್ರದುರ್ಗ ಜಿಲ್ಲೆ ಚೀಳಂಗಿ ಗ್ರಾಮದ ಸಿ.ಎಚ್‌.ಶಿವಕುಮಾರ್‌ ಹಾಗೂ ಮಂಡ್ಯಜಿಲ್ಲೆ ಕೋರೇಗಾಲದ ನಳಿನಾ ಎಚ್‌.ಕೆ.ಅವರ ತಂಡದಿಂದ ಕೊಂಬು ಕಹಳೆ ಸಾಗಿತು.

ಒಡೆಯರ್‌ ಸ್ತಬ್ಧಚಿತ್ರ: ಅದರ ಹಿಂದೆ ಸ್ತಬ್ಧಚಿತ್ರ ಉಪ ಸಮಿತಿಯಿಂದ ನಿರ್ಮಿಸಿದ್ದ ಶ್ರೀ ಜಯಚಾಮರಾಜ ಒಡೆಯರ್‌ ಜನ್ಮ ಶತಮಾನೋತ್ಸವ ಆಚರಣೆಯ ಸ್ತಬ್ಧಚಿತ್ರ, ಮೈಸೂರಿನ ರೇವಣ್ಣ, ಸಿದ್ದರಾಜು, ಎನ್‌.ಮಹೇಶ್‌ ಅವರ ಬೀಸು ಕಂಸಾಳೆ ತಂಡ, ಚಿಕ್ಕಮಗಳೂರು ಜಿಲ್ಲೆಯ ಶಿಶಿಲ ಬೆಟ್ಟ (ಎತ್ತಿನ ಭುಜ) ಸ್ತಬ್ಧಚಿತ್ರ, ಪಾಂಡವಪುರ ತಾಲೂಕಿನ ಎಲ್‌.ಸಿ.ದಿವ್ಯಶ್ರೀ, ಮಂಡ್ಯ ಜಿಲ್ಲೆ ಹೆಗ್ಗಡಹಳ್ಳಿಯ ಕೃಷ್ಣೇಗೌಡಮ ಅರಸೀಕೆರೆ ತಾಲೂಕು ಬೋರನಕೊಪ್ಪಲಿನ ಬೋರೇಗೌಡ ಅವರ ತಂಡದಿಂದ ಪಟ ಕುಣಿತ, ಬಳ್ಳಾರಿ ಜಿಲ್ಲೆಯ ಹಂಪಿ ವಾಸ್ತುಶಿಲ್ಪ ಕಲಾ ವೈಭವ ಸ್ತಬ್ಧಚಿತ್ರ....

ಫೋಟೋ - http://v.duta.us/k3npjAAA

ಹೆಚ್ಚು ಓದಲು ಇಲ್ಲಿ ಕ್ಲಿಕ್ ಮಾಡಿ - http://v.duta.us/HbgV6gAA

📲 Get Mysore News on Whatsapp 💬