ಪಶು ಚಿಕಿತ್ಸಾಲಯ ಸಮಸ್ಯೆಗಳ ಕೊಂಪೆ
ಮದ್ದೂರು: ತಾಲೂಕಿನ ವಳಗೆರೆಹಳ್ಳಿ ಗ್ರಾಮದ ಪಶು ಚಿಕಿತ್ಸಾಲಯ ಕೇಂದ್ರ ಸಮಸ್ಯೆಗಳ ಕೊಂಪೆಯಾಗಿದ್ದು, ಅಧಿಕಾರಿಗಳೂ ಸೇರಿದಂತೆ ಸ್ಥಳೀಯ ಚುನಾಯಿತ ಪ್ರತಿನಿಧಿಗಳು ದುರಸ್ತಿಗೊಳಿದೇ ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.
ವಳಗೆರೆಹಳ್ಳಿ ಕೃಷಿ ಪ್ರಧಾನ ಗ್ರಾಮ. ಅಧಿಕ ಜನಸಂಖ್ಯೆ ಹಾಗೂ ಜಾನುವಾರುಗಳನ್ನು ಹೊಂದಿದೆ. ಕುರಿ, ಕೋಳಿ, ಎಮ್ಮೆ, ಹಸು, ದನಗಳನ್ನು ಹೆಚ್ಚು ಸಾಕಾಣೆ ಮಾಡುವ ಜತೆಗೆ ಸ್ವ ಉದ್ಯೋಗ ಕಂಡು ಕೊಂಡಿದ್ದಾರೆ. ಕಳೆದ ವಾರದಿಂದ ಸುರಿಯುತ್ತಿರುವ ಧಾರಾಕಾರ ಮಳೆಯಿಂದಾಗಿ ಪಶು ಚಿಕಿತ್ಸಾ ಕೇಂದ್ರ ನೀರಿನಿಂದ ಆವೃತ್ತವಾಗಿ, ಕಚೇರಿಯಲ್ಲಿದ್ದ ಔಷಧ, ದಾಖಲೆ ಹಾಗೂ ಇನ್ನಿತರ ಅಗತ್ಯ ವಸ್ತುಗಳು ಸಂಪೂರ್ಣ ಹಾಳಾಗಿವೆ. ಜತೆಗೆ ಮೂಲ ಸೌಲಭ್ಯವಿಲ್ಲದಂತಾಗಿದೆ ಎಂದು ಗ್ರಾಮಸ್ಥರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಮೂಲ ಸೌಲಭ್ಯಗಳಿಂದ ವಂಚಿತ: ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಹಾಗೂ ಪಶುಸಂಗೋಪನೆ ಮಾಜಿ ಸಚಿವ ಕೆ.ಎಂ. ನಾಗೇಗೌಡ ಅಧ್ಯಕ್ಷತೆಯಲ್ಲಿ ಅನಾವರಣಗೊಂಡಿದ್ದ ಪಶುಸಂಗೋಪನೆ ಚಿಕಿತ್ಸಾ ಕೇಂದ್ರ ಸದ್ಯ ಶಿಥಿಲಗೊಂಡಿದೆ. ವಿದ್ಯುತ್, ಕುಡಿ ಯುವ ನೀರು, ಶೌಚಾಲಯ, ವಿಶ್ರಾಂತಿ ಕೊಠಡಿ ಸೇರಿದಂತೆ ಇನ್ನಿತರ ಮೂಲ ಸೌಲಭ್ಯಗಳಿಂದ ವಂಚಿತ ವಾಗಿದೆ. ಗ್ರಾಮದಲ್ಲಿ ಸಾವಿರಕ್ಕೂ ಹೆಚ್ಚು ಮಿಶ್ರ ತಳಿ ಹಸು, 100ಕ್ಕೂ ಹೆಚ್ಚು ಎಮ್ಮೆಗಳು, 2 ಸಾವಿರಕ್ಕೂ ಹೆಚ್ಚು ಕುರಿ, 100 ಎತ್ತುಗಳು, ಕೋಳಿ ಸೇರಿದಂತೆ ಇನ್ನಿತರ ಜಾತಿಯ ಪ್ರಾಣಿ-ಪಕ್ಷಿ ಸಂಕುಲವಿದೆ. ಆದರೆ ಪಶು ಚಿಕಿತ್ಸಾ ಕೇಂದ್ರದಲ್ಲಿ ಸೂಕ್ತ ವ್ಯವಸ್ಥೆಯಿಲ್ಲದೆ ಜಾನುವಾರು ಮಾಲಿಕರು ಪರದಾಡಬೇಕಿದೆ. ಅಲ್ಲದೆ ಚಿಕಿತ್ಸೆ, ಔಷಧಕ್ಕಾಗಿ ಪಟ್ಟಣಕ್ಕೆ ತೆರಳಬೇಕಾದ ಅನಿವಾರ್ಯ ಉಂಟಾಗಿದೆ ಎಂದು ಗ್ರಾಮಸ್ಥರು ತಮ್ಮ ಅಸಹಾಯಕತೆ ತೋಡಿಕೊಂಡಿದ್ದಾರೆ....
ಫೋಟೋ - http://v.duta.us/K4e-hAAA
ಹೆಚ್ಚು ಓದಲು ಇಲ್ಲಿ ಕ್ಲಿಕ್ ಮಾಡಿ - http://v.duta.us/PmMIAgAA