ಬಂಟ್ವಾಳ ತಾಲೂಕಿನ 3 ಗ್ರಾ.ಪಂ. ಕೈಬಿಡಲು ತೀರ್ಮಾನ

  |   Dakshina-Kannadanews

ಬಂಟ್ವಾಳ: ಮಂಗಳೂರು ವಿಧಾನಸಭಾ ಕ್ಷೇತ್ರವನ್ನು ಒಳಗೊಂಡು ಉಳ್ಳಾಲ ತಾಲೂಕನ್ನು ಈ ಹಿಂದಿನ ಸರಕಾರ ಘೋಷಣೆ ಮಾಡಿದ್ದರೂ ಬಂಟ್ವಾಳ ತಾಲೂಕಿನ 3 ಗ್ರಾ.ಪಂ. ವ್ಯಾಪ್ತಿಯಿಂದ ವಿರೋಧ ಕೇಳಿಬಂದ ಹಿನ್ನೆಲೆಯಲ್ಲಿ ಅವನ್ನು ಕೈಬಿಟ್ಟು, 2 ನಗರ ಸ್ಥಳೀಯಾಡಳಿತ ಮತ್ತು 18 ಗ್ರಾ.ಪಂ.ಗಳನ್ನು ಒಳಗೊಂಡ ಉಳ್ಳಾಲ ತಾಲೂಕು ರಚನೆಗೆ ಸಿದ್ಧತೆ ನಡೆದಿದೆ.

ಕಳೆದ ಫೆಬ್ರವರಿಯಲ್ಲಿ ಯು.ಟಿ. ಖಾದರ್‌ ಸಚಿವರಾಗಿದ್ದ ವೇಳೆ ರಾಜ್ಯ ಸರಕಾರ ಉಳ್ಳಾಲ ತಾಲೂಕು ಘೋಷಣೆ ಮಾಡಿತ್ತು. ಬಂಟ್ವಾಳ ತಾಲೂಕಿನಲ್ಲಿದ್ದು, ಮಂಗಳೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಗೆ ಬರುವ ಪುದು, ತುಂಬೆ ಮತ್ತು ಮೇರಮಜಲು ಗ್ರಾ.ಪಂ.ಗಳನ್ನು ಉಳ್ಳಾಲ ತಾಲೂಕಿನಿಂದ ಕೈಬಿಡಲಾಗಿತ್ತು.ಆದರೆ ಬಳಿಕ ತುಂಬೆಯಿಂದ ಸಜೀಪಕ್ಕೆ ಕೆಆರ್‌ಡಿಸಿಎಲ್‌ ಮೂಲಕ 22 ಕೋ.ರೂ.ಗಳಲ್ಲಿ ಸೇತುವೆಯೊಂದರ ಪ್ರಸ್ತಾವ ಬಂದಾಗ ಈ 3 ಗ್ರಾ.ಪಂ. ಗಳನ್ನು ಉಳ್ಳಾಲಕ್ಕೆ ಸೇರಿಸುವ ಕುರಿತು ಮಾತುಗಳು ಕೇಳಿಬಂದಿದ್ದವು. ಆದರೆ ಈ ಗ್ರಾ.ಪಂ.ಗಳ ವ್ಯಾಪ್ತಿಯಲ್ಲಿ ವಿರೋಧದ ಮಾತುಗಳು ಕೇಳಿಬಂದಿದ್ದು, ಪ್ರಸ್ತುತ ಕೈಬಿಡಲು ನಿರ್ಧರಿಸಲಾಗಿದೆ.

2 ನಗರ, 18 ಗ್ರಾಮೀಣ ಸ್ಥಳೀಯಾಡಳಿತ

ಉಳ್ಳಾಲ ತಾಲೂಕು ಪೂರ್ಣ ಪ್ರಮಾಣದಲ್ಲಿ ಅಸ್ತಿತ್ವಕ್ಕೆ ಬಂದಲ್ಲಿ ಸದ್ಯದ ಪರಿಸ್ಥಿತಿಯಲ್ಲಿ 2 ನಗರ ಸ್ಥಳೀಯ ಸಂಸ್ಥೆಗಳು ಮತ್ತು 18 ಗ್ರಾಮೀಣ ಸ್ಥಳೀಯ ಸಂಸ್ಥೆಗಳು ಸೇರ್ಪಡೆಯಾಗಲಿವೆ....

ಫೋಟೋ - http://v.duta.us/mbu0RQAA

ಹೆಚ್ಚು ಓದಲು ಇಲ್ಲಿ ಕ್ಲಿಕ್ ಮಾಡಿ - http://v.duta.us/wtkcsAAA

📲 Get Dakshina Kannada News on Whatsapp 💬