ಬುದ್ಧನ ಕಡೆ ನಮ್ಮ ನಡೆ ಸಾಗಲಿ
ಕಲಬುರಗಿ: ಜಗತ್ತಿನ ಶಾಂತಿ, ನೆಮ್ಮದಿಗೆ ಗೌತಮ ಬುದ್ಧ ಹುಟ್ಟುಹಾಕಿರುವ ಬೌದ್ಧ ಧರ್ಮದ ತತ್ವ, ಸಂದೇಶಗಳನ್ನು ಪಾಲಿಸಬೇಕಿದ್ದು, ನಮ್ಮ ನಡೆ ಬುದ್ಧನ ಕಡೆಗೆ ಸಾಗಬೇಕೆಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ, ಮಾಜಿ ಸಂಸದ ಡಾ| ಮಲ್ಲಿಕಾರ್ಜುನ ಖರ್ಗೆ ಕರೆ ನೀಡಿದರು.
ನಗರದ ಹೊರವಲಯದ ಬುದ್ಧ ವಿಹಾರದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ 63ನೇ ಧಮ್ಮಚಕ್ರ ಪ್ರವರ್ತನ ದಿನಾಚರಣೆ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಬುದ್ಧ ಮತ್ತು ಬೌದ್ಧ ಧರ್ಮದ ಬಗ್ಗೆ ಮಾತನಾಡುವುದಲ್ಲ. ಬುದ್ಧನ ವಿಚಾರ, ಆಚಾರ ಮತ್ತು ಪ್ರಚಾರ ಅಗತ್ಯ ಎಂದರು.
ಬುದ್ಧ, ಬಸವಣ್ಣ ಸಮಾನತೆಗಾಗಿ ಹೋರಾಟ ಮಾಡಿದರು. ಆಗ ಪ್ರಾಬಲ್ಯಯುತರ ಕೈಯಲ್ಲಿ ಅಧಿಕಾರ ಇತ್ತು. ಆದ್ದರಿಂದ ಸಮಾನತೆ ಸಾಧಿಸಲು ರಾಜ, ಮಹಾರಾಜರ ಮನವೊಲಿಸುವ ಪ್ರಯತ್ನ ಮಾಡಿದರು. ಬೌದ್ಧ ಧರ್ಮ ತಾತ್ವಿಕತೆಯಿಂದ ಕೂಡಿದ ಧರ್ಮವಲ್ಲ. ಪ್ರಾಯೋಗಿಕವಾದ ಧರ್ಮವಾಗಿದೆ. ನಾನು ಹೇಳಿದ ವಿಚಾರಗಳು ನಿಮಗೆ ಸರಿ ಎನ್ನಿಸದೇ ಇದ್ದರೆ, ಅವುಗಳನ್ನು ಪರೀಕ್ಷೆಗೆ ಒಳಪಡಿಸಿ ಎಂದು ಸ್ವತಃ ಗೌತಮ ಬುದ್ಧ ಹೇಳಿದ್ದರು.
ಬುದ್ಧನ ವೈಜ್ಞಾನಿಕ ತತ್ವಗಳನ್ನು ಅರಿತ ಅಶೋಕ, ಹರ್ಷ, ಕನಿಷ್ಕ ರಾಜರು ಬೌದ್ಧ ಧರ್ಮ ಸ್ವೀಕರಿಸಿದರು. ಗ್ರೀಕ್ನಲ್ಲಿ ಅಲೆಕ್ಸಾಂಡರ್ನ ಮೊಮ್ಮಗ ಕೂಡ ಬೌದ್ಧ ಧರ್ಮಕ್ಕೆ ಸೇರಿದರು ಎಂದು ಹೇಳಿದರು....
ಫೋಟೋ - http://v.duta.us/-_6j5QAA
ಹೆಚ್ಚು ಓದಲು ಇಲ್ಲಿ ಕ್ಲಿಕ್ ಮಾಡಿ - http://v.duta.us/lmBRcwAA