ಬಳಕೆಯಾಗದೆ ಪಾಳು ಬಿದ್ದ ಶೌಚಾಲಯ

  |   Bidarnews

„ಶಶಿಕಾಂತ ಕೆ.ಭಗೋಜಿ

ಹುಮನಾಬಾದ: ಪಟ್ಟಣದಲ್ಲಿ ಕೊಳಚೆ ನಿರ್ಮೂಲನಾ ಮಂಡಳಿಯ ಲಕ್ಷಾಂತರ ರೂಪಾಯಿ ಅನುದಾನದಲ್ಲಿ 15 ವರ್ಷಗಳ ಹಿಂದೆ ನಿರ್ಮಿಸಿದ್ದ ಸಮುದಾಯ ಶೌಚಾಲಯಗಳು ನಿರ್ವಹಣೆ ಕೊರತೆ ಕಾರಣ ಬಳಕೆ ಇಲ್ಲದೇ ಪಾಳು ಬಿದ್ದಿವೆ. ಉಳ್ಳವರು ವೈಯಕ್ತಿಕ ಶೌಚಾಲಯ ನಿರ್ಮಿಸಿಕೊಳ್ಳಬಹುದು. ಆದರೆ ಕೊಳಚೆ ಪ್ರದೇಶದ ಬಡ ಹಾಗೂ ಮಧ್ಯಮ ವರ್ಗದ ಜನರು ಎದುರಿಸುತ್ತಿರುವ ಶೌಚಾಲಯ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿದ ಆ ಅವಧಿಯಲ್ಲಿ ಶಾಸಕರಾಗಿದ್ದ ರಾಜಶೇಖರ ಪಾಟೀಲ ಅವರು ಎಸ್‌. ಎಂ.ಕೃಷ್ಣ ನೇತೃತ್ವದಲ್ಲಿ ಸರ್ಕಾರದಲ್ಲಿ ಸಂಬಂಧಪಟ್ಟವರ ಮೇಲೆ ಒತ್ತಡ ಹೇರಿ ತಲಾ ರೂ. 4.5ಲಕ್ಷ ವೆಚ್ಚದಲ್ಲಿ ಪಟ್ಟಣದ ಏಳು ಓಣಿಗಳಲ್ಲಿ ಶೌಚಾಲಯ ನಿರ್ಮಿಸಿದ್ದರು.

ಜನತಾ ಕಾಲೋನಿ, ಶಿವಪೂರ ಓಣಿ, ಧನಗರಗಡ್ಡಾ, ಕೋಳಿವಾಡಾ, ಜೇರಪೇಟೆ, ಇಂದಿರಾನಗರ ಎಂ.ಪಿ. ತೋಟದ ರಸ್ತೆ ಮಾರ್ಗಮಧ್ಯ ಸೇರಿದಂತೆ ಒಟ್ಟು ಏಳು ಕೊಳಚೆ ಪ್ರದೇಶಗಳಲ್ಲಿ ಈ ಶೌಚಾಲಯಗಳನ್ನು ಕೊಳಚೆ ನಿರ್ಮೂಲನಾ ಮಂಡಳಿಯೇ ನಿರ್ಮಿಸಿದೆ. ಅತ್ಯಂತ ಅವಶ್ಯವಿರುವ ನೀರು, ವಿದ್ಯುತ್‌ ಸೌಲಭ್ಯ ಮೊದಲಾದ ಯಾವುದೇ ಮೂಲಸೌಲಭ್ಯ ಕಲ್ಪಿಸದೇ ಕೇವಲ ಕಟ್ಟಡ ನಿರ್ಮಿಸಿ ಕೈ ತೊಳೆದುಕೊಂಡಿದೆ. ಆದರೆ ಈ ವರೆಗೆ ಪುರಸಭೆಗೆ ಅವುಗಳನ್ನು ಹಸ್ತಾಂತರಿಸಿಲ್ಲ. ಬಡ ಹಾಗೂ ಮಧ್ಯಮ ವರ್ಗದವರಿಗೆ ಅನುಕೂಲ ಕಲ್ಪಿಸುವ ಉದ್ದೇಶದಿಂದ ಶಾಸಕ ಪಾಟೀಲ ಅವರು ವಿಶೇಷ ಕಾಳಜಿ ವಹಿಸಿ, ಸರ್ಕಾರದ ಮೇಲೆ ಒತ್ತಡ ಹೇರಿ ಅನುದಾನವೇನೋ ತಂದರು. ಕೊಳಚೆ ನಿರ್ಮೂಲನಾ ಮಂಡಳಿ ಅಧಿಕಾರಿಗಳು ತರಾತುರಿಯಲ್ಲಿ ಕಟ್ಟಡ ನಿರ್ಮಿಸಿ, ಕೈ ತೊಳೆದುಕೊಂಡಿದ್ದಾಯಿತು. ಆದರೇ ಅಪೂರ್ಣ ಸ್ಥಿತಿಯಲ್ಲಿರುವ ಅವುಗಳನ್ನು ಪೂರ್ಣಗೊಳಿಸದೇ ಇರಲು ಕಾರಣವೇನು ಎಂಬುದರ ಬಗ್ಗೆ ಸಂಬಂಧಪಟ್ಟವರನ್ನು ಈ ವರೆಗೆ ಗದರಿಸಿ ಕೇಳುವ ಧೈರ್ಯವನ್ನು ಯಾರೊಬ್ಬ ಚುನಾಯಿತ ಪ್ರತಿನಿಧಿಗಳೂ ಮಾಡದಿರುವುದು ನೋವಿನ ಸಂಗತಿ....

ಫೋಟೋ - http://v.duta.us/A25nVAAA

ಹೆಚ್ಚು ಓದಲು ಇಲ್ಲಿ ಕ್ಲಿಕ್ ಮಾಡಿ - http://v.duta.us/T97wrwAA

📲 Get Bidar News on Whatsapp 💬