ಬಸವನಾಡಲ್ಲಿ ವಿಜಯದಶಮಿ ಸಂಭ್ರಮ

  |   Bijapur-Karnatakanews

ವಿಜಯಪುರ: ಹಿಂದೂಗಳ ಪ್ರಮುಖ ಪವಿತ್ರ ಹಬ್ಬಗಳಲ್ಲಿ ಒಂದಾದ ವಿಜಯ ದಶಮಿ ಹಬ್ಬವನ್ನು ಜಿಲ್ಲೆಯಾದ್ಯಂತ ಅತ್ಯಂತ ಸಡಗರ, ಶ್ರದ್ಧೆ, ಭಕ್ತಿಯಿಂದ ಅದ್ಧೂರಿಯಾಗಿ ಆಚರಿಸಲಾಯಿತು.

ಶರನ್ನವರಾತ್ರಿ ನಿಮಿತ್ತ ಕಳೆದ 9 ದಿನದಿಂದ ಶ್ರೀದೇವಿಗೆ ವಿವಿಧ ಪೂಜೆ ನಡೆಸಿದ ಭಕ್ತರು, ಸೋಮವಾರ ಆಯುಧ ಪೂಜೆ ನಡೆಸಿ ಮಂಗಳವಾರ ವಿಜಯದಶಮಿ ಆಚರಿಸಿದರು. ದಸರೆ ಹಬ್ಬದ ನಿಮಿತ್ತ ಮಾರುಕಟ್ಟೆಯಲ್ಲಿ ಬೆಲೆ ಏರಿಕೆ ಇದ್ದರೂ ಶ್ರೀದೇವಿಯ ಪೂಜೆ ಹಾಗೂ ಅಲಂಕರಾಕ್ಕಾಗಿ ಕಬ್ಬು, ಬಾಳೆದಿಂಡು, ಮಾವಿನ ಎಲೆ, ತೋಪು, ವಿವಿಧ ಬಗೆಯ ಹೂ, ಹಣ್ಣು ಖರೀದಿಯೂ ಜೋರಾಗಿತ್ತು.

ಸೋಮವಾರ ಮನೆಗಳಲ್ಲಿ, ವ್ಯಾಪಾರಿಗಳು ತಮ್ಮ ವ್ಯಾಪಾರಿ ಕೇಂದ್ರಗಳನ್ನು ಸಿಂಗರಿಸಿ, ಆಯುಧ ಪೂಜೆ ಮೂಲಕ ಶ್ರೀದೇವಿಗೆ ವಿಶೇಷ ಪೂಜೆ ಸಲ್ಲಿಸಿದರು. ಆಯುಧ ಪೂಜೆ ದಿನ ಅತ್ಯಂತ ಶುಭವಾಗಿದ್ದರಿಂದ ಬಂಗಾರ ಖರೀದಿ, ಹೊಸ ಬೈಕ್‌-ಕಾರ್‌, ಎಲೆಕ್ಟ್ರಾನಿಕ್ಸ್‌ ಉತ್ಪನ್ನಗಳ ಖರೀದಿ ಜೋರಾಗಿತ್ತು. ದಸರೆ ನಿಮಿತ್ತ ವಿವಿಧ ವಸ್ತುಗಳು, ವಾಹನಗಳ ಖರೀದಿ ಮೇಲೆ ಉದ್ಯಮಗಳು, ವ್ಯಾಪಾರಿ ಸಂಸ್ಥೆಗಳು ವಿಶೇಷ ರಿಯಾಯ್ತಿ ಹಾಗೂ ಕೊಡುಗೆ ನೀಡಿದ ಜಾಹೀರಾತುಗಳಿಂದಾಗಿ ವ್ಯಾಪಾರಿ ಮಳಿಗೆಗಳಲ್ಲಿ ಜನಜಂಗುಳಿ ಏರ್ಪಟ್ಟಿತ್ತು....

ಫೋಟೋ - http://v.duta.us/RM4dhAAA

ಹೆಚ್ಚು ಓದಲು ಇಲ್ಲಿ ಕ್ಲಿಕ್ ಮಾಡಿ - http://v.duta.us/1T0WaAAA

📲 Get Bijapur Karnataka News on Whatsapp 💬