ಮಳೆಗೆ ಮಂಜುನಾಥ ಬಡಾವಣೆ ತತ್ತರ

  |   Mysorenews

ಹುಣಸೂರು: ಕಳೆದ ಎರಡು ದಿನ ಕಾಲ ಸುರಿದ ಗುಡುಗು-ಸಿಡಿಲು ಸಹಿತ ಧಾರಾಕಾರ ಮಳೆಗೆ ನಗರದ ಮಂಜುನಾಥ ಬಡಾವಣೆಯ ಮನೆಗಳಿಗೆ ನೀರು ನುಗ್ಗಿದ್ದು, ಹಲವಾರು ಮನೆಗಳು ಜಲಾವೃತವಾಗಿವೆ.

ಭಾನುವಾರ ಹಾಗೂ ಸೋಮವಾರ ಮಧ್ಯರಾತ್ರಿ ಭಾರೀ ಪ್ರಮಾಣದಲ್ಲಿ ಮಳೆ ಸುರಿದಿದ್ದರಿಂದ ನೀರು ಸರಾಗವಾಗಿ ಹರಿದು ಹೋಗಲು ಚರಂಡಿ ವ್ಯವಸ್ಥೆ ಇಲ್ಲದೇ ಮಂಜುನಾಥ ಬಡಾವಣೆಯ ಆನಂದ್‌, ರವಿಶಂಕರ್‌, ಸತ್ಯನಾರಾಯಣ್‌, ಸುರೇಶ್‌, ಶ್ರೀನಿವಾಸ್‌ ಸೇರಿದಂತೆ ಹತ್ತಕ್ಕೂ ಹೆಚ್ಚು ಮನೆಗಳಿಗೆ ಮಳೆ ನೀರಿನೊಂದಿಗೆ ಕಲುಷಿತ ನೀರು ನುಗ್ಗಿತ್ತು. ಅಲ್ಲದೇ ಬಡಾವಣೆಯ ಹಳ್ಳ ಹಾಗೂ ಖಾಲಿ ನಿವೇಶನಗಳಲ್ಲಿ ನೀರು ತುಂಬಿಕೊಂಡಿದ್ದು, ಕೆಲ ರಸ್ತೆಗಳಲ್ಲಿ ಓಡಾಡಲಾಗದ ಸ್ಥಿತಿ ಉಂಟಾಗಿತ್ತು.

ಸೋಮವಾರ ಆಯುಧಪೂಜೆಯಂದು ತಮ್ಮ ವಾಹನಗಳಿಗೆ ಪೂಜೆ ಸಲ್ಲಿಸಿ, ಹಬ್ಬ ಆಚರಿಸಿ ಮಲಗಿದ್ದರು. ಆದರೆ, ರಾತ್ರಿ ವೇಳೆ ನೀರು ನುಗ್ಗಿದ್ದರಿಂದ ಹಬ್ಬದ ಗುಂಗಿನಲ್ಲಿದ್ದವರು ಆತಂಕಗೊಂಡು ಮನೆಯೊಳಗೆ ನುಗ್ಗಿದ್ದ ನೀರನ್ನು ಹೊರ ಚೆಲ್ಲುವುದೇ ಕಾಯಕವಾಗಿತ್ತು. ನಿದ್ದಿಯಿಲ್ಲದೇ ನೀರು ಹೊರ ಹಾಕುವುದೇ ಅವರ ಕೆಲಸವಾಗಿತ್ತು.

ಅವೈಜ್ಞಾನಿಕ ಬಡಾವಣೆ: ಈ ಬಡಾವಣೆಯನ್ನು ವೈಜ್ಞಾನಿಕವಾಗಿ ನಿರ್ಮಿಸಿಲ್ಲ, ಇಲ್ಲಿನ ರಸ್ತೆಗಳನ್ನೇ ನಿವೇಶನವನ್ನಾಗಿಸಿ ಮಾರಾಟ ಮಾಡಿದ್ದಾರೆ. ಕೆಲವರು ರಸ್ತೆಯನ್ನು ಒತ್ತುವರಿ ಮಾಡಿಕೊಂಡು ಕಟ್ಟಡ ನಿರ್ಮಿಸಿದ್ದಾರೆ. ಬಹುತೇಕ ಕಡೆ ಚರಂಡಿಯನ್ನೇ ನಿರ್ಮಿಸಿಲ್ಲ. ಹೀಗಾಗಿ ಮಳೆ ನೀರು ಎಲ್ಲೆಂದರಲ್ಲಿ ನುಗ್ಗುತ್ತಿದ್ದು, ವ್ಯವಸ್ಥಿತವಾಗಿ ಮನೆ ನಿರ್ಮಿಸಿಕೊಂಡವರ ಗೋಳು ಹೇಳತೀರದಾಗಿದೆ....

ಫೋಟೋ - http://v.duta.us/2hcaCAAA

ಹೆಚ್ಚು ಓದಲು ಇಲ್ಲಿ ಕ್ಲಿಕ್ ಮಾಡಿ - http://v.duta.us/FBk8lwAA

📲 Get Mysore News on Whatsapp 💬