ಲಕ್ಕುಂಡಿ: ಸಂಭ್ರಮದ ವಿಜಯ ದಶಮಿ

  |   Gadagnews

ಗದಗ: ವಿಜಯದಶಮಿ ಅಂಗವಾಗಿ ತಾಲೂಕಿನ ಲಕ್ಕುಂಡಿ ಗ್ರಾಮದ ಪ್ರಮುಖ ಬೀದಿಗಳಲ್ಲಿ ದಂಡಿನ ದುರ್ಗಾದೇವಿ ಮೂರ್ತಿ ಮೆರವಣೆಗೆ ನಡೆಯಿತು.

ದೇವಿ ಭಾವಚಿತ್ರ ಹೊತ್ತ ಮೆರವಣೆಗೆ ವಾಹನ ವಿದ್ಯುತ್‌ ದೀಪಾಲಂಕರಗಳೊಂದಿಗೆ ಆಕರ್ಷಿಸಿತು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮತ್ತು ದುರ್ಗಾದೇವಿ ಸೇವಾ ಸಮಿತಿ ಆಶ್ರಯದಲ್ಲಿ ವಿವಿಧ ವಾಧ್ಯ ಮೇಳಗಳು ಮೆರವಣೆಗೆಯಲ್ಲಿ ಭಾಗವಹಿಸಿದ್ದವು. ಇದರಲ್ಲಿ ರಾಜ ರಾಜೇಶ್ವರಿ ಹಾಗೂ ಅಕ್ಕಮಹಾದೇವಿ ಮಹಿಳಾ ಡೊಳ್ಳು ಕುಣಿತ ನೋಡುಗರನ್ನು ಆಕರ್ಷಿಸಿತು. ವಿಶೇಷವಾಗಿ ನವ ದುರ್ಗೆಯರ ವೇಷ ಭೂಷಣ ಗಮನ ಸೆಳೆಯಿತು. ಮೈಲಾರ ದೇವರ ಭಕ್ತರು ಬಾರಕೋಲಿನಿಂದ ಹೊಡೆದುಕೊಳ್ಳುವ ದೃಶ್ಯ ರೋಮಾಂಚನಗೊಳಿಸಿತು.

ಮೆರವಣೆಗೆ ಬಜಾರ ರಸ್ತೆ ಮೂಲಕ ಕಲ್ಮಠದವರೆಗೂ ನಡೆಯಿತು. ಅದೇ ರೀತಿ ಗ್ರಾಮ ದೇವತೆ ದ್ವಾಮವ್ವ ದೇವಿ ದಸರಾ ದರ್ಬಾರ್‌ ಗ್ರಾಮದ ಆಯ್ದ ಮನೆಗಳಲ್ಲಿ ಸಂಪ್ರದಾಯಿಕವಾಗಿ ಉಡಿ ತುಂಬುವ ಕಾರ್ಯಕ್ರಮ ನಡೆಯಿತು. ಕೊರವರ ಓಣೆಯಲ್ಲಿ ಬನ್ನಿ ಮಹಾಂಕಾಳಿಗೆ ಪೂಜೆ ಸಲ್ಲಿಸಿದ ನಂತರ ಬನ್ನಿ ಮುಡಿಯುವ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ವೀರೇಶ ಪತ್ತಾರ ಪಠಣ ಮಾಡಿದರು. ಬಸವರಾಜ ಹಡಗಲಿ, ಮಂಜುನಾಥ ಗರ್ಜಪ್ಪನವರ ಸಂಗೀತ ಸೇವೆ ನೀಡಿದರು.

ಫೋಟೋ - http://v.duta.us/FL9skAEA

ಹೆಚ್ಚು ಓದಲು ಇಲ್ಲಿ ಕ್ಲಿಕ್ ಮಾಡಿ - http://v.duta.us/vyo8ygAA

📲 Get Gadag News on Whatsapp 💬