ಶಕ್ತಿ ದೇವತೆಗೆ ವಿಶೇಷ ಆರಾಧನೆ

  |   Bellarynews

ಬಳ್ಳಾರಿ: ಹಿಂದೂ ಧರ್ಮದ ಪವಿತ್ರ ಹಬ್ಬಗಳಲ್ಲಿ ಒಂದಾದ ದಸರಾ ಹಬ್ಬವನ್ನು ಗಣಿನಾಡು ಬಳ್ಳಾರಿ ಜಿಲ್ಲೆಯಲ್ಲಿ ಸಡಗರ, ಸಂಭ್ರಮಗಳಿಂದ ಮಂಗಳವಾರ ಆಚರಿಸಲಾಯಿತು.

ದಸರಾ ಎಂದಾಕ್ಷಣ ಮಹಾರಾಜರ ಅರಮನೆ, ವೈಭವದಿಂದ ಝಗಮಗಿಸುವ ದೀಪಾಲಂಕಾರ, ಜಗದ್ವಿಖ್ಯಾತ ಜಂಬೂಸವಾರಿ ಮೆರವಣಿಗೆ ಹೀಗೆ ಮೈಸೂರಿನ ದಸರಾ ಹಬ್ಬದ ಆಚರಣೆ ಕಣ್ಮುಂದೆ ಬರುತ್ತದೆ. ಇತ್ತ ಗಣಿನಾಡು ಬಳ್ಳಾರಿಯಲ್ಲೂ ಮಂಗಳವಾರ ಸಡಗರ ಸಂಭ್ರಮದಿಂದ ವಿಜಯದಶಮಿಯನ್ನು ಬರಮಾಡಿಕೊಂಡ ಜನತೆ, ತಮ್ಮ ಕುಟುಂಬ ಪರಿವಾರದೊಂದಿಗೆ ದೇಗುಲಗಳಿಗೆ ತೆರಳಿ ದುರ್ಗಾಮಾತೆ ದರ್ಶನ ಪಡೆದು ನಂತರ ಪರಸ್ಪರ ಬನ್ನಿ ವಿನಿಮಯ ಮಾಡಿಕೊಳ್ಳುವ ಮೂಲಕ ಹಬ್ಬವನ್ನು ಸಂತಸದಿಂದ ಆಚರಿಸಿದರು.

ದುಃಖ ದಾರಿದ್ರ್ಯಗಳ ನಿವಾರಣೆ, ಸಿರಿ ಸಂಪತ್ತುಗಳ ಸಮೃದ್ಧಿಗಾಗಿ, ಬುದ್ಧಿ ವಿವೇಕಗಳ ವರ್ಧನೆಗಾಗಿ ಸತತ ಹತ್ತು ದಿನಗಳ ಕಾಲ ನಡೆಯುವ ಹಬ್ಬದ ಸರಣಿಯೇ ದಸರಾ ಹಬ್ಬವಾಗಿದ್ದು, ಶರನ್ನವರಾತ್ರಿಯ ನಿಮಿತ್ತ ಬನ್ನಿ ಮಹಾಂಕಾಳಿ ದೇವಿಗೆ ದಿನ ನಿತ್ಯ ವಿಶೇಷ ಪೂಜೆ, ಪುನಸ್ಕಾರದಲ್ಲೇ ನಿರತರಾದ ಮಹಿಳೆಯರು ವಿಜಯದಶಮಿಯ ದಿನವಾದ ಮಂಗಳವಾರ ದೇವಿಗೆ ಸೀರೆ, ಬಳೆ, ಉಡಿಗೆ ಅಕ್ಕಿ, ನೈವೇದ್ಯದೊಂದಿಗೆ ತೆರಳಿ ಬಗೆಬಗೆಯ ಪುಷ್ಪಗಳಿಂದ ಪೂಜೆ ಸಲ್ಲಿಸಿ ಭಕ್ತಿ ಸಮರ್ಪಿಸಿದರು....

ಫೋಟೋ - http://v.duta.us/r0CU_QAA

ಹೆಚ್ಚು ಓದಲು ಇಲ್ಲಿ ಕ್ಲಿಕ್ ಮಾಡಿ - http://v.duta.us/9APsQAAA

📲 Get Bellary News on Whatsapp 💬