ಸೈಕಲ್ ಬೆಲೆಗಿಂತ ಖರ್ಚೇ ಜಾಸ್ತಿ
ಕೆಜಿಎಫ್: ಮಕ್ಕಳ ವಿದ್ಯಾಭ್ಯಾಸವನ್ನು ಉತ್ತೇಜಿಸಲು ರಾಜ್ಯ ಸರ್ಕಾರ ನೀಡುತ್ತಿರುವ ಸೈಕಲ್ ಅತ್ಯಂತ ಕಳಪೆಯಾಗಿದ್ದು, ಸೈಕಲ್ ಬೆಲೆಗಿಂತ ರಿಪೇರಿ ಖರ್ಚೇ ಹೆಚ್ಚು ಮಾಡುವಂತಾಗಿದೆ.
ಮಕ್ಕಳು ಶಾಲೆಗೆ ಸೈಕಲ್ನಲ್ಲಿ ಬರಲು ಗುಣಮಟ್ಟದ ಸೈಕಲ್ ನೀಡುತ್ತಿರುವುದಾಗಿ ಶಿಕ್ಷಣ ಇಲಾಖೆಯ ಅಧಿಕಾರಿಗಳು ಹೇಳುತ್ತಾರೆ. ಆದರೆ, ನೀಡಿದ ಸೈಕಲ್ಗಳನ್ನು ರಿಪೇರಿ ಮಾಡುವುದೇ ಮಕ್ಕಳಿಗೆ ದೊಡ್ಡ ಕೆಲಸ ಆಗಿದೆ. ಸೈಕಲ್ಚೈನ್ನಿಂದ ಮೊದಲ್ಗೊಂಡು ಎಲ್ಲಾ ಭಾಗಗಳು ಕೂಡ ಕಳಪೆಯಾಗಿದೆ ಎಂಬುದನ್ನು ಶಿಕ್ಷಕರು ಸಹ ಒಪ್ಪುತ್ತಾರೆ. ಆದರೆ, ಅವರಿಗೆ ಧೈರ್ಯವಾಗಿ ಹೇಳಲು ಸಾಧ್ಯವಾಗುತ್ತಿಲ್ಲ. ಮಾರುಕಟ್ಟೆ ದರದಲ್ಲಿ ಸೈಕಲ್ ಅನ್ನು ಸರ್ಕಾರ ಖರೀದಿ ಮಾಡುತ್ತದೆ. ಆದರೆ, ಇಂತಹ ಕಳಪೆ ಸೈಕಲ್ಗಳನ್ನು ನೀಡುತ್ತಿರುವುದನ್ನು ಕಂಡರೆ ಭಾರೀ ಅವ್ಯವಹಾರ ನಡೆದಿದೆ ಎಂದು ಪೋಷಕರು ಸಂದೇಹ ವ್ಯಕ್ತಪಡಿಸುತ್ತಿದ್ದಾರೆ.
ಹಿಂದೆ ಒಂದು ಸೈಕಲ್ ಕೊಂಡರೆ 20 ವರ್ಷವಾದರೂ ಗಟ್ಟಿಮುಟ್ಟಾಗಿ ಇರುತ್ತಿತ್ತು. ಸಾಮಾನುಗಳನ್ನು ಏರಿಕೊಂಡು ಸೈಕಲ್ ಮೇಲೆ ಹೋಗಲಾಗುತ್ತಿತ್ತು. ಈಗಿನ ಸೈಕಲ್ ಮಕ್ಕಳು ಒಮ್ಮೆ ತುಳಿದುಕೊಂಡು ಶಾಲೆಗೆ ಹೋದರೆ ಬರುವಾಗ ರಿಪೇರಿ ಆಗಿರುತ್ತದೆ. ಭಾರ ಬಿದ್ದರೆ ನೆಲಕ್ಕೆ ಕುಸಿಯುವುದೇನೋ ಎಂಬ ಭೀತಿ ಕಾಡುತ್ತದೆ. ಈ ಸಂಬಂಧವಾಗಿ ಬಂಗಾರಪೇಟೆ ವಲಯದ ಕ್ಷೇತ್ರ ಶಿಕ್ಷಣಾಧಿಕಾರಿ ಕೆಂಪಯ್ಯ ಅವರನ್ನು ಸಂಪರ್ಕಿಸಿದಾಗ, ಪರಿಶೀಲಿಸುವುದಾಗಿ ಹೇಳಿ ಸುಮ್ಮನಾದರು. ಇದುವರೆಗೂ ಶಿಕ್ಷಕರಿಂದ ವರದಿ ತರಿಸಿಕೊಂಡಿಲ್ಲ.
ಫೋಟೋ - http://v.duta.us/7SyfcgAA
ಹೆಚ್ಚು ಓದಲು ಇಲ್ಲಿ ಕ್ಲಿಕ್ ಮಾಡಿ - http://v.duta.us/cCAyBAAA