ಸ್ಥಳೀಯರ ಸಹಕಾರದಿಂದ ಕೆರೆಗಳ ರಕ್ಷಣೆ

  |   Bangalore-Ruralnews

ದೇವನಹಳ್ಳಿ: ಸ್ಥಳೀಯರ ಸಹಕಾರದಿಂದ ಅಳಿವಿನಂಚಿನಲ್ಲಿರುವ ಕೆರೆಗಳ ರಕ್ಷಣೆ ಮಾಡಲು ಕೆರೆ ಹೂಳೆತ್ತುವ ಕಾರ್ಯ ಮಾಡಲಾಗಿದೆ ಎಂದು ಕೃಷಿ ಮಾರಾಟ ನಿರ್ದೇಶಕ ಸಿಎಸ್‌ ಕರೀಗೌಡ ತಿಳಿಸಿದರು.

ತಾಲೂಕಿನ ಕೊಯಿರಾ ಗ್ರಾಮದ ಕೆರೆಗೆ ಮಳೆ ನೀರು ಹರಿದ ಪರಿಣಾಮ ಗ್ರಾಮಸ್ಥರ ವತಿಯಿಂದ ಕೆರೆಗೆ ಬಾಗಿನ ಅರ್ಪಿಸಿ ಮಾತನಾಡಿದ ಅವರು, ನಾನು ಜಿಲ್ಲಾಧಿಕಾರಿಯಾಗಿದ್ದ ಸಂದರ್ಭದಲ್ಲಿ ಕೆರೆಗಳ ಹೂಳೆತ್ತಿದರೆ ಜಲ ಸಂರಕ್ಷಣೆಯಾಗುತ್ತದೆ ಎಂಬ ದೃಷ್ಟಿಯಿಂದ ಸಾರ್ವಜನಿಕರ ಸಹಕಾರ ಪಡೆದು ಜಿಲ್ಲೆಯಲ್ಲಿ 31 ಕೆರೆ ಗಳನ್ನು ಸಾರ್ವಜನಿಕರಿಂದ ಅಭಿವೃದ್ಧಿ ಪಡಿಸಲಾಯಿತು ಎಂದರು.

ದೇವನಹಳ್ಳಿ ತಾಲೂಕಿನಲ್ಲಿ 12 ಕೆರೆಗಳನ್ನು ಹೂಳೆತ್ತಲಾಗಿದ್ದು, ಮುಂದಿನ ಬೇಸಿಗೆ ವೇಳೆಗೆ ಕೊಯಿರಾ ಗ್ರಾಮದ 19 ಎಕರೆಯ ವಿಸ್ತಿರ್ಣದ ಕೆರೆಯನ್ನು ಹೂಳೆತ್ತುವ ಕಾರ್ಯ ಮಾಡಲಾಗುವುದು. ಈಗಾಗಲೇ ರೋಟರಿ ಸಂಸ್ಥೆ 50 ಲಕ್ಷ ರೂ. ನೀಡಿದ್ದು, ಶೇ.40 ರಷ್ಟು ಕೆಲಸ ಪೂರ್ಣಗೊಂಡಿದೆ. ಮಳೆ ನೀರು ಕೊಯ್ಲು ಅಳವಡಿಸಿಕೊಳ್ಳುವಂತೆ ನೋಟೀಸ್‌ ನೀಡಲಾಗಿತ್ತು. ದೊಡ್ಡಬಳ್ಳಾಪುರದ ಕಲ್ಯಾಣ ಮಂಟಪಗಳು, ಸೇರಿದಂತೆ ಹಲವು ಕಡೆಗಳಲ್ಲಿ ಮಳೆ ಕೊಯ್ಲು ಪದ್ಧತಿಯನ್ನು ಅಳವಡಿಸಲಾಗಿದೆ ಎಂದರು.

ಮನುಷ್ಯ ಸೇರಿದಂತೆ ಪ್ರತಿ ಜೀವಿಗಳಿಗೂ ನೀರು ಬೇಕು. ಬತ್ತಿ ಹೋಗಿರುವ ಕೆರೆಗಳನ್ನು ಪುನಶ್ಚೇತನ ಮಾಡಬೇಕಾದ ಅನಿವಾರ್ಯತೆ ಇದ್ದು, ಕೆರೆಯ ಅಭಿವೃದ್ಧಿಗಾಗಿ ಎಲ್ಲರ ಸಹಕಾರ ಅತ್ಯವಶ್ಯವಿದೆ. ಕೆರೆ ಹೂಳೆತ್ತು ಜನರು ಸ್ವಯಂ ಪ್ರೇರಿತವಾಗಿ ಮುಂದೆ ಬರುತ್ತಿದ್ದಾರೆ. ಹಿರಿಯರು ತಮ್ಮ ದೂರದೃಷ್ಠಿಯಿಂದ ನಿರ್ಮಿಸಿರುವ ಜಲ ಮೂಲವಾದ ಕೆರೆಗಳ ಪುನಃ ಶ್ಚೇತನಕ್ಕೆ ಒತ್ತು ನೀಡಿದರೆ ಕೆರೆಗಳಲ್ಲಿ ನೀರಿನ ಅಂತರ್ಜಲ ಮಟ್ಟ ಹೆಚ್ಚುತ್ತದೆ ಎಂದರು....

ಫೋಟೋ - http://v.duta.us/L0W2LgAA

ಹೆಚ್ಚು ಓದಲು ಇಲ್ಲಿ ಕ್ಲಿಕ್ ಮಾಡಿ - http://v.duta.us/_YykcAAA

📲 Get Bangalore Rural News on Whatsapp 💬