ಸಾರ್ವಜನಿಕರ ತೊಂದರೆಗಳಿಗೆ ತಕ್ಷಣ ಸ್ಪಂದಿಸಿ: ಕಿಶೋರಬಾಬು
ಕಲಘಟಗಿ: ಸಾರ್ವಜನಿಕರ ತೊಂದರೆಗಳಿಗೆ ತಕ್ಷಣ ಸ್ಪಂದಿಸಿ ಶಾಂತಿಯುತ ಹಾಗೂ ಸೌಹಾರ್ದಯುತ ಸಮಾಜ ನಿರ್ಮಿಸುವಲ್ಲಿ ಪೊಲೀಸ್ ಅಧಿಕಾರಿಗಳಲ್ಲದೇ ಸಿಬ್ಬಂದಿ ಪಾತ್ರವೂ ಬಹು ಮುಖ್ಯವಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಿ. ಕಿಶೋರಬಾಬು ಹೇಳಿದರು.
ಪಟ್ಟಣದ ಪೊಲೀಸ್ ಠಾಣೆಗೆ ಭೇಟಿ ನೀಡಿ ಗೌರವ ವಂದನೆ ಸ್ವೀಕರಿಸಿದ ನಂತರ ಮಾಧ್ಯಮ ಪ್ರತಿನಿ ಧಿಯೊಂದಿಗೆ ಅವರು ಮಾತನಾಡಿದರು. ಜನರು ಶಾಂತಿಯುತವಾಗಿ ಸ್ನೇಹಜೀವಿಗಳಾಗಿ ಬಾಳಲು ಅವಕಾಶವನ್ನೀಯಬೇಕು. ಪೊಲೀಸ್ ಇಲಾಖೆ ಸಾರ್ವಜನಿಕರಿಗೆ ಸದಾ ಸ್ನೇಹಹಸ್ತ ನೀಡುತ್ತಲಿದೆ. ಜನರೂ ಕೂಡಾ ಕಾನೂನು ಚೌಕಟ್ಟಿನಲ್ಲಿಯೇ ಬಾಳಬೇಕು ಎಂದರು.
ಸಿಬ್ಬಂದಿಯೂ ಕೂಡ ಕಾನೂನಿನ ಎಲ್ಲ ನೂತನ ತಿದ್ದುಪಡಿಗಳನ್ನು ಮನನ ಮಾಡಿಕೊಂಡು ಕಾರ್ಯ ನಿರತರಾದಲ್ಲಿ ಉತ್ತಮ ಸೇವೆ ನೀಡಲು ಸಾಧ್ಯವಾಗಲಿದೆ. ಈ ನಿಟ್ಟಿನಲ್ಲಿಯೂ ಸಿಬ್ಬಂದಿಗೆ ತರಬೇತಿಯನ್ನು ನೀಡಲು ಕಾರ್ಯೋನ್ಮುಖರಾಗುವುದಾಗಿ ತಿಳಿಸಿದರು. ಇಲಾಖೆಯ ಕೆಲ ಕಡತಗಳನ್ನು ಪರಿಶೀಲನೆ ನಡೆಸಿದ ನಂತರ ಸಿಬ್ಬಂದಿ ಜತೆ ಚರ್ಚಿಸಿ ಕುಂದು ಕೊರತೆ ಆಲಿಸಿದರು. ಡಿವೈಎಸ್ಪಿ ರಾಮನಗೌಡ ಹಟ್ಟಿ, ಸಿಪಿಐ ವಿಜಯ ಬಿರಾದಾರ ಉಪಸ್ಥಿತರಿದ್ದರು. ನಂತರ ತಾಲೂಕಿನ ಮಿಶ್ರಿಕೋಟಿ ಹೊರವಲಯ ಪೊಲೀಸ್ ಠಾಣೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಫೋಟೋ - http://v.duta.us/I5DlJQAA
ಹೆಚ್ಚು ಓದಲು ಇಲ್ಲಿ ಕ್ಲಿಕ್ ಮಾಡಿ - http://v.duta.us/-guyIQAA