ಹೈಕಮಾಂಡ್‌ ಸಮಯ ಕೇಳಿದ ಯತ್ನಾಳ್‌

  |   Karnatakanews

ವಿಜಯಪುರ: ಪ್ರವಾಹ ಪರಿಹಾರ ವಿತರಣೆಯಲ್ಲಿ ವಿಳಂಬ ನೀತಿ ಖಂಡಿಸಿ ಮಾಧ್ಯಮಗಳ ಮೂಲಕ ಹೇಳಿಕೆ ನೀಡಿದ್ದಕ್ಕೆ ಪಕ್ಷ ತಮಗೆ ನೀಡಿದ್ದ ನೋಟಿಸ್‌ಗೆ ಉತ್ತರಿಸಲು ವಿಜಯಪುರ ಶಾಸಕ ಬಸನಗೌಡ ಪಾಟೀಲ ಯತ್ನಾಳ್‌ ಅವರು ಪ್ರಧಾನಿ ಹಾಗೂ ಪಕ್ಷದ ಅಧ್ಯಕ್ಷರಿಗೆ ಪತ್ರ ಬರೆದು ಸಮಯ ಕೋರಿದ್ದಾರೆ.

ಪ್ರವಾಹ ಸಂತ್ರಸ್ತರಿಗೆ ಪರಿಹಾರ ನೀಡಬೇಕೆಂದು ಆಗ್ರಹಿಸಿ ಶಾಸಕ ಯತ್ನಾಳ ಕೇಂದ್ರ ಸರ್ಕಾರವನ್ನು ಹಾಗೂ ಕೇಂದ್ರದ ಮೇಲೆ ಈ ಕುರಿತು ಒತ್ತಡ ಹೇರಬೇಕೆಂದು ರಾಜ್ಯದ ಸಂಸದರನ್ನು ಒತ್ತಾಯಿಸಿದ್ದರು. ಆಡಳಿತ ಪಕ್ಷದ ಶಾಸಕರಾಗಿ ಮಾಧ್ಯಮಗಳಲ್ಲಿ ಬಹಿರಂಗ ಹೇಳಿಕೆ ನೀಡಿದ್ದರಿಂದ ಬಿಜೆಪಿ ಕೇಂದ್ರ ಶಿಸ್ತು ಸಮಿತಿ ಶಾಸಕ ಯತ್ನಾಳ ಅವರಿಗೆ ಶೋಕಾಸ್‌ ನೋಟಿಸ್‌ ನೀಡಿತ್ತು. ಆ ನೋಟಿಸ್‌ಗೆ ಈ ರೀತಿ ಉತ್ತರಿಸಿ, ಈ ಗೊಂದಲ ನಿವಾರಣೆಗಾಗಿ ಖದ್ದು ಭೇಟಿ ನೀಡಲು ಬಯಸಿದ್ದು ಸಮಯ ನೀಡುವಂತೆ ಕೋರಿದ್ದಾರೆ.

ಪ್ರಧಾನಿ ಮೋದಿ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರಾಗಿರುವ ಗೃಹ ಸಚಿವ ಅಮಿತ್‌ ಶಾ, ಕಾರ್ಯಾಧ್ಯಕ್ಷ ಜೆ.ಪಿ. ನಡ್ಡಾ ಅವರಿಗೆ ಅ.5ರಂದು ಪ್ರತ್ಯೇಕ ಪತ್ರ ಬರೆದಿರುವ ಯತ್ನಾಳ, ರಾಜ್ಯದಲ್ಲಿ ಅದರಲ್ಲೂ ಉತ್ತರ ಕರ್ನಾಟಕದಲ್ಲಿ ನೆರೆಯಿಂದಾಗಿ ಎಲ್ಲವನ್ನೂ ಕಳೆದುಕೊಂಡು ಸಂತ್ರಸ್ತರಾಗಿರುವ ಜನರಿಗೆ ತ್ವರಿತ ಪರಿಹಾರ ವಿತರಿಸುವ ಕುರಿತು ಓರ್ವ ಜನಪ್ರತಿನಿಧಿಯಾಗಿ ಸಹಜ ರೀತಿಯಲ್ಲಿ ಆಗ್ರಹಿಸಿದ್ದೇನೆ ಹೊರತು ರಾಜಕೀಯ ಉದ್ದೇಶವೇ ಇಲ್ಲ. ಅಲ್ಲದೇ ರಾಜಕೀಯದ ಕುರಿತು ಯಾವ ಹೇಳಿಕೆಯನ್ನೂ ನೀಡಿಲ್ಲ. ಆದರೆ ಕೆಲವರು ಇದೀಗ ನನ್ನ ಬಗ್ಗೆ ಕೆಟ್ಟ ಭಾವನೆ ಮೂಡುವಂತೆ ಹೀಗೆ ಮಾಡಿದ್ದಾರೆ ಎಂದು ಸಮಜಾಯಿಸಿ ನೀಡಿದ್ದಾರೆ....

ಫೋಟೋ - http://v.duta.us/GKn0awAA

ಹೆಚ್ಚು ಓದಲು ಇಲ್ಲಿ ಕ್ಲಿಕ್ ಮಾಡಿ - http://v.duta.us/j_JTpAAA

📲 Get Karnatakanews on Whatsapp 💬