ಹೊಲದಲ್ಲಿಯೇ ಕೊಳೆತ ಈರುಳ್ಳಿ
„ದೇವಪ್ಪ ರಾಠೊಡ
ಮುದಗಲ್ಲ: ಮಾರುಕಟ್ಟೆಯಲ್ಲಿ ಈರುಳ್ಳಿ ದರ ಕುಸಿತ ಒಂದೆಡೆಯಾದರೆ, ಇತ್ತೀಚೆಗೆ ಸುರಿದ ಮಳೆಗೆ ಕೆಲವೆಡೆ ಹೊಲದಲ್ಲಿಯೇ ಈರುಳ್ಳಿ ಕೊಳೆಯುತ್ತಿದೆ. ಪರಿಣಾಮ ಈರುಳ್ಳಿ ಬೆಳೆದ ರೈತರು ಕಣ್ಣೀರು ಸುರಿಸುವಂತಾಗಿದೆ.
ಬೇರೆ ಬೆಳೆಯತ್ತ ಚಿತ್ತ ಹರಿಸದ ಕೆಲ ರೈತರು ಇದ್ದ ಸ್ವಲ್ಪ ಬೋರ್ವೆಲ್ ನೀರು ಹಾಯಿಸಿ ಈರುಳ್ಳಿ ಬೆಳೆದಿದ್ದಾರೆ. ನಾಲ್ಕೈದು ತಿಂಗಳು ಕಷ್ಟಪಟ್ಟು ಬೆಳೆದ ಈರುಳ್ಳಿ ಕೈಗೆ ಬಂದಿದೆ. ಈರುಳ್ಳಿಯನ್ನು ಕಟಾವು ಮಾಡಿ ಹೊಲದಲ್ಲಿಯೇ ಆರಿಸಲು ಹಾಕಿದ್ದಾರೆ. ಆದರೆ ಸತತ 15 ದಿನಗಳಿಂದ ಆಗಾಗ ಸುರಿಯುತ್ತಿರುವ ಬೆಳೆಗೆ ಒಣಹಾಕಿದ ಈರುಳ್ಳಿ ನೆನೆದು ಕೊಳೆತಿದ್ದು, ರೈತರು ಕಂಗಾಲಾಗುವಂತಾಗಿದೆ.
ಸಮೀಪದ ನಾಗಲಾಪುರ, ದೇಸಾಯಿ ಭೋಗಾಪುರ, ಹಡಗಲಿ ತಾಂಡಾ, ಕನ್ನಾಳ, ಆಮದಿಹಾಳ, ಖೈರವಾಡಗಿ, ಆಶಿಹಾಳ, ಆಮದಿಹಾಳ ಸೇರಿದಂತೆ ಸುತ್ತಮುತ್ತಲಿನ ಗ್ರಾಮ, ತಾಂಡಾಗಳಲ್ಲಿ ಸುಮಾರು 5 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಈರುಳ್ಳಿ ಬೆಳೆಯಲಾಗಿದೆ. ಈರುಳ್ಳಿ ಸಸಿ ನಾಟಿ ಮಾಡಿದಾಗಿನಿಂದ ಹಿಡಿದು ಕೀಳುವವರೆಗೆ ರೈತರು 50ರಿಂದ 60 ಸಾವಿರ ರೂ. ಖರ್ಚು ಮಾಡಿದ್ದಾರೆ. ಆದರೆ ಈಗಿನ ಮಾರುಕಟ್ಟೆ ದರಕ್ಕೆ ಈರುಳ್ಳಿ ಮಾರಿದರೆ ಸಾಗಾಟದ ಖರ್ಚು ಕೂಡ ಮರಳದಂತಹ ಸ್ಥಿತಿ ಇದೆ....
ಫೋಟೋ - http://v.duta.us/ea40NAAA
ಹೆಚ್ಚು ಓದಲು ಇಲ್ಲಿ ಕ್ಲಿಕ್ ಮಾಡಿ - http://v.duta.us/UTnP3gAA