ಹೋಲ್‌ಸೇಲ್ ಅಂಗಡಿಗೆ ನುಗ್ಗಿದ ಕಳ್ಳರು: 12 ಲಕ್ಷ ನಗದು ಲೂಟಿ

  |   Udupinews

ಉಡುಪಿ: ನಗರದ ಹೃದಯ ಭಾಗದ ಹೋಲ್‌ಸೇಲ್ ಅಂಗಡಿಯೊಂದಕ್ಕೆ ನುಗ್ಗಿದ ಕಳ್ಳರು ಲಕ್ಷಾಂತರ ರೂ. ನಗದು ದೊಚಿದ ಘಟನೆ ಇಂದು ಬೆಳಕಿಗೆ ಬಂದಿದೆ.

ಉಡುಪಿ ಮೈತ್ರಿ ಕಾಂಪ್ಲೆಕ್ಸ್‌ನ ತಳಮಹಡಿಯಲ್ಲಿ ಗುಟ್ಕಾ, ಸಿಗರೇಟ್ ಮಾರಾಟ ಮಾಡುವ ರಮಾ ಎಂಟರ್‌ಪ್ರೈಸ್ (ಮಹಾದೇವಿ) ಹೋಲ್ ಸೇಲ್ ಅಂಗಡಿಯ ಶಟರ್ ಮುರಿದು ಕಳ್ಳರು ಡ್ರಾವರ್ ಅಲ್ಲಿದ್ದ 12 ಲಕ್ಷ ನಗದು ದೋಚಿ ಪರಾರಿಯಾಗಿದ್ದಾರೆ.

ಕಳೆದ ಮೂರು ದಿನದಿಂದ ಬ್ಯಾಂಕ್ ರಜೆ ಇದ್ದ ಕಾರಣ ನಗದನ್ನು ಅಂಗಡಿ ಮಾಲಿಕ ರವೀಂದ್ರ ನಾಯಕ್ ಅವರು ಅಂಗಡಿಯಲ್ಲೇ ಇಟ್ಟಿದ್ದರು. ಈ ವಿಷಯ ತಿಳಿದವರೇ ಈ ಕೃತ್ಯ ನಡೆಸಿರುವ ಸಾಧ್ಯತೆ ಇದೆಯೆಂದು ಪೊಲೀಸರು ಸಂಶಯ ವ್ಯಕ್ತ ಪಡಿಸಿದ್ದಾರೆ.

ನಗದು ಇಟ್ಟಿರುವ ಡ್ರಾವರನ್ನೇ ತೆಗೆದು ದೋಚಿರುವುದು ನೋಡಿದರೆ ಇದು ತಿಳಿದವರೇ ನಡೆಸಿರುವ ಕೃತ್ಯವೆಂದು ಸ್ಥಳೀಯರು ಮಾತನಾಡಿಕೊಳ್ಳುತ್ತಿದ್ದಾರೆ.

ಕಳವಿಗಾಗಿ ಕಬ್ಬಿಣದ ಸರಳುಗಳನ್ನು ಹೊಸದಾಗಿ ಖರೀದಿ ಮಾಡಿದ್ದ ಕಳ್ಳರು ಅದನ್ನು ಗೋಣಿ ಚೀಲದಲ್ಲಿ ಸುತ್ತಿ ತಂದಿದ್ದು ಅಂಗಡಿಯ ಶಟರನ್ನು ಮುರಿದು ಒಳಹೋಗಿದ್ದರು. ಮತ್ತು ಹಣವಿದ್ದ ಡ್ರಾವರನ್ನೇ ಮಾತ್ರ ಮೀಟಿ ತೆಗೆದು ಹಣದೊಂದಿಗೆ ಪರಾರಿಯಾಗಿದ್ದಾರೆ.

ಅಂಗಡಿಯಲ್ಲಿ 2 ಸಿಸಿ ಕ್ಯಾಮರವಿದ್ದರೂ ಅದು ಕೆಟ್ಟು ಹೋಗಿದ್ದು ಹತ್ತಿರದ ಕೃಷ್ಣ ಕೃಪಾ ,ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದ ಬಳಿ ಇರುವ ಅಂಗಡಿಗಳ ಸಿಸಿ ಟಿವಿಗಳ ಪೊಲೀಸರು ಪರಿಶೀಲಿಸಿದ್ದಾರೆ....

ಫೋಟೋ - http://v.duta.us/bj9QlgAA

ಹೆಚ್ಚು ಓದಲು ಇಲ್ಲಿ ಕ್ಲಿಕ್ ಮಾಡಿ - http://v.duta.us/aKhq1wEA

📲 Get Udupi News on Whatsapp 💬