12ರಿಂದ ವೀಣೆ ಶೇಷಣ್ಣ ಸ್ಮಾರಕ ಸಂಗೀತೋತ್ಸವ, ಪ್ರಶಸ್ತಿ ಪ್ರದಾನ
ಬೆಳ್ತಂಗಡಿ: ಶ್ರೀಕ್ಷೇತ್ರ ಧರ್ಮಸ್ಥಳದ ವಸಂತ ಮಹಲ್ನಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಬೆಂಗಳೂರಿನ ಸ್ವರಮೂರ್ತಿ ವಿ.ಎನ್. ರಾವ್ ಸ್ಮಾರಕ ಟ್ರಸ್ಟ್ ಮತ್ತು ಶ್ರೀ ಮಂಜುನಾಥ ಸ್ವಾಮಿ ದೇವಸ್ಥಾನಗಳ ಸಂಯುಕ್ತ ಆಶ್ರಯದಲ್ಲಿ ಅ.12 ಮತ್ತು 13ರಂದು "ವೀಣೆಯ ಬೆಡಗು' ವೀಣೆ ಶೇಷಣ್ಣ ಸ್ಮಾರಕ ಸಂಗೀತೋತ್ಸವ ಮತ್ತು ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ.
ಅ.12ರಂದು ಸಂಜೆ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದ್ದು, ವೀಣೆ ಶೇಷಣ್ಣ ಸ್ಮಾರಕ ರಾಷ್ಟ್ರೀಯ ಪ್ರಶಸ್ತಿಯನ್ನು ಪದ್ಮಶ್ರೀ ಎ. ಕನ್ಯಾಕುಮಾರಿ ಅವರಿಗೆ ಒಂದು ಲಕ್ಷ ರೂ. ನಗದು ಪುರಸ್ಕಾರ ಸಹಿತ ನೀಡಲಾಗುವುದು. ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆಯವರು ಈ ಪ್ರಶಸ್ತಿಯನ್ನು ಪ್ರಾಯೋಜಿಸಿದ್ದಾರೆ. ಒಂದು ಲಕ್ಷ ರೂ. ನಗದು ಸಹಿತವಾದ ಸ್ವರಮೂರ್ತಿ ವಿ.ಎನ್. ರಾವ್ ಸ್ಮಾರಕ ರಾಷ್ಟ್ರೀಯ ಪ್ರಶಸ್ತಿಯನ್ನು ಸಂಗೀತ ಕಲಾ ರತ್ನ ನೀಲಾ ರಾಮ್ಗೊಪಾಲ್ ಅವರಿಗೆ ನೀಡಲಾಗುತ್ತದೆ. ಈ ಪ್ರಶಸ್ತಿಯನ್ನು ಎ.ಎಚ್. ರಾಮರಾವ್ ಮತ್ತು ಸುಧಾ ರಾಮರಾವ್ ಪ್ರಾಯೋಜಿಸಿದ್ದಾರೆ.
ಪ್ರಶಸ್ತಿ ಪ್ರದಾನ ಸಮಾರಂಭದ ಬಳಿಕ ಸಂಜೆ 7ರಿಂದ ವಿ| ಎ. ಕನ್ಯಾಕುಮಾರಿ ವಯಲಿನ್ ವಾದನ ಪ್ರಸ್ತುತ ಪಡಿಸಲಿದ್ದಾರೆ. ಅ.13ರಂದು ಸಂಜೆ 5.30ರಿಂದ ವಿ| ನೀಲಾ ರಾಂಗೋಪಾಲ್ ಅವರ ಗಾಯನವಿದೆ. ಅ.12ರಂದು ಶನಿವಾರ ಸಂಜೆ 4ರಿಂದ ಪ್ರೊ| ಅರವಿಂದ ಹೆಬ್ಟಾರ್ ಮತ್ತು ಬಳಗ, ಡಾ| ಸಹನಾ ಎಸ್.ವಿ. ಸಂಗೀತ ಪ್ರಸ್ತುತಪಡಿಸಲಿದ್ದಾರೆ. ವೀಣಾ ವಾದನ ನಡೆಯಲಿದೆ. ಮರುದಿನ ಅ.13ರಂದು ಸಂಜೆ 3.30ರಿಂದ ವಿ| ಬಾಲಸುಬ್ರಹ್ಮಣ್ಯ ಮತ್ತು ಬಳಗ, ಡಾ| ಗೀತಾ ಭಟ್, ವಿ| ರಾಮಕೃಷ್ಣನ್ ಮೂರ್ತಿ ಮತ್ತು ಬಳಗದವರಿಂದ ಶಾಸ್ತ್ರೀಯ ಸಂಗೀತ ಪ್ರಸ್ತುತಿಯಿದೆ....
ಹೆಚ್ಚು ಓದಲು ಇಲ್ಲಿ ಕ್ಲಿಕ್ ಮಾಡಿ - http://v.duta.us/NjsKbQAA