ಆಯುಷ್‌-ಮಂಗನ ಕಾಯಿಲೆಗೆ ಕಟ್ಟಡ ಕಲ್ಪಿಸಿ

  |   Uttara-Kannadanews

„ಜಿ.ಯು. ಹೊನ್ನಾವರ

ಹೊನ್ನಾವರ: ಒಂದು ಕಾಲದಲ್ಲಿ ಬಸ್ರೂರು ರಾಘವೇಂದ್ರ ರಾಯರಿಂದ ದಾನ ಪಡೆದು ಕಟ್ಟಿಸಿದ ಮುನ್ಸಿಪಾಲ್ಟಿ ಆಸ್ಪತ್ರೆ ಸರ್ಕಾರಿ ಆಸ್ಪತ್ರೆಯಾಗಿ, ತಾಲೂಕು ಆಸ್ಪತ್ರೆಯಾಗಿ ನೂರು ಹಾಸಿಗೆ, ಹತ್ತಕ್ಕೂ ಹೆಚ್ಚು ವೈದ್ಯರನ್ನು ಹೊಂದಿರುವುದರಿಂದ ಬರುವ ರೋಗಿಗಳ ಪ್ರಮಾಣ ಹೆಚ್ಚಿದೆ. ಕಾರಣ ಸೌಲಭ್ಯಗಳು ಸಾಲುತ್ತಿಲ್ಲ.

ವೈದ್ಯರ ಸಂಘಟಿತ ಸೇವೆಯಿಂದಾಗಿ ಆಸ್ಪತ್ರೆ ರಾಜ್ಯದಲ್ಲಿ ಗುರುತಿಸಲ್ಪಟ್ಟಿದೆ. ಇಲಾಖೆಯಿಂದ ಮೂರನೇ ಸ್ಥಾನದಲ್ಲಿದೆ. ಇಲ್ಲಿ ಹೆಚ್ಚಿನ ಸೌಲಭ್ಯ ಕಲ್ಪಿಸಬೇಕಾದ ಅಗತ್ಯವಿದೆ. ನಿತ್ಯ 300 ಹೊರರೋಗಿಗಳು ಹೊಸದಾಗಿ ಸೇರ್ಪಡೆಯಾಗಿ, ಪುನಃ ಬರುವ ರೋಗಿಗಳೊಂದಿಗೆ ಸಾವಿರ ಸಂಖ್ಯೆ ತಲುಪುತ್ತಾರೆ. ಹೊರರೋಗಿ ವಿಭಾಗದಲ್ಲಿ ನಿಲ್ಲಲು ಸ್ಥಳವಿಲ್ಲ. ಡಾ| ಪ್ರಕಾಶ ನಾಯ್ಕ 200 ರೋಗಿಗಳನ್ನು ನೋಡುವಲ್ಲಿ ಸುಸ್ತು ಹೊಡೆಯುತ್ತಾರೆ. ಸರಾಸರಿ ಒಬ್ಬ ವೈದ್ಯ ನೂರು ರೋಗಿಗಳನ್ನು ನೋಡಬೇಕಾಗುತ್ತದೆ. ಇಬ್ಬರು ಆಯುರ್ವೇದ ವೈದ್ಯರಿದ್ದು ಕನಿಷ್ಠ 50 ರೋಗಿಗಳಿರುತ್ತಾರೆ. 100 ಹಾಸಿಗೆಗಳು ಸದಾ ಭರ್ತಿಯಾಗಿರುತ್ತದೆ. ಆದ್ದರಿಂದ ಹೊರರೋಗಿ ವಿಭಾಗಕ್ಕೆ ಹೊಸ ಕಟ್ಟಡ ಕಟ್ಟಿಸಿಕೊಡಬೇಕು ಎಂಬುದು ಜನರ ಹಾಗೂ ವೈದ್ಯರ ಬೇಡಿಕೆಯಾಗಿದ್ದು ಶಾಸಕರ ಮುಖಾಂತರ ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿದೆ.

ಕ್ಯಾಸನೂರು ಕಾಯಿಲೆಯ ಜಿಲ್ಲಾ ಕೇಂದ್ರ ಇಲ್ಲಿದ್ದು ಕಟ್ಟಡದ ಮೇಲೆ ಮರ ಬಿದ್ದಿದೆ. ಅದಕ್ಕೂ ನೂತನ ಕಟ್ಟಡ ಬೇಕು. ಆಯುಷ್‌ ವೈದ್ಯರ ಪೂರ್ಣಸೇವೆ ಜನರಿಗೆ ಸಿಗಬೇಕಾದರೆ 5ಹಾಸಿಗೆಗಳ ಕಟ್ಟಡ, ಪಂಚಕರ್ಮ ಚಿಕಿತ್ಸೆ ಮೊದಲಾದ ಒಳರೋಗಿಗಳಿಗೆ ಸೌಲಭ್ಯ ಒದಗಿಸಲು ಕಟ್ಟಡಬೇಕಾಗಿದೆ. ಕಣ್ಣಿನ ವೈದ್ಯರು ಬರಬೇಕಾಗಿದ್ದು ತುರ್ತು ವಾರಕ್ಕೊಮ್ಮೆ ಕುಮಟಾದಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಸಾರ್ವಜನಿಕ ಶೌಚಾಲಯ, ವಿಶ್ರಾಂತಿ ಕೊಠಡಿ ಮೊದಲಾದ ಕಟ್ಟಡ, ಉತ್ತಮ ಕ್ಯಾಂಟೀನ್‌ ಅಗತ್ಯವಿದೆ....

ಫೋಟೋ - http://v.duta.us/vTBLkQAA

ಹೆಚ್ಚು ಓದಲು ಇಲ್ಲಿ ಕ್ಲಿಕ್ ಮಾಡಿ - http://v.duta.us/juxniAAA

📲 Get Uttara Kannada News on Whatsapp 💬