ಉಪಚುನಾವಣೆ ಕದನ; ರೋಷನ್ ಬೇಗ್ ಬಗ್ಗೆ ಬಿಜೆಪಿ ಮೌನ, 13ಕ್ಷೇತ್ರಕ್ಕೆ ಬಿಜೆಪಿ ಅಭ್ಯರ್ಥಿ ಪ್ರಕಟ

  |   Karnatakanews

ಬೆಂಗಳೂರು: ಡಿಸೆಂಬರ್ 5ರಂದು ರಾಜ್ಯದ 15 ವಿಧಾನಸಭಾ ಕ್ಷೇತ್ರಗಳಿಗೆ ನಡೆಯಲಿರುವ ಉಪಚುನಾವಣೆಯ ಹಿನ್ನೆಲೆಯಲ್ಲಿ ಭಾರತೀಯ ಜನತಾ ಪಕ್ಷ ಗುರುವಾರ 13 ಕ್ಷೇತ್ರಗಳಿಗೆ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಿದ್ದು, ಏತನ್ಮಧ್ಯೆ ಶಿವಾಜಿನಗರದ ರೋಷನ್ ಬೇಗ್ ಕುರಿತು ಬಿಜೆಪಿ ಮೌನತಳೆದಿರುವುದು ಕುತೂಹಲಕ್ಕೆ ಎಡೆಮಾಡಿಕೊಟ್ಟಿದೆ.

1)ಅಥಣಿ ಮಹೇಶ್ ಕುಮಟಳ್ಳಿ, 2)ಯಲ್ಲಾಪುರ ಶಿವರಾಮ ಹೆಬ್ಬಾರ್, 3)ಕಾಗವಾಡ ಶ್ರೀಮಂತ ಗೌಡ ಪಾಟೀಲ್, 4)ಗೋಕಾಕ್ ರಮೇಶ್ ಜಾರಕಿಹೊಳಿ, 5)ಹಿರೇಕೆರೂರು ಬಿಸಿ ಪಾಟೀಲ್, 6)ವಿಜಯನಗರ ಆನಂದ್ ಸಿಂಗ್, 7)ಚಿಕ್ಕಬಳ್ಳಾಪುರ ಡಾ. ಸುಧಾಕರ್, 8) ಕೆಆರ್ ಪುರಂ ಭೈರತಿ ಬವಸರಾಜ್, 9)ಯಶವಂತಪುರ ಎಸ್ ಟಿ ಸೋಮಶೇಖರ್, 10) ಮಹಾಲಕ್ಷ್ಮೀ ಲೇಔಟ್ ಕೆ.ಗೋಪಾಲಯ್ಯ, 11)ಕೆಆರ್ ಪೇಟೆ ಕೆಸಿ ನಾರಾಯಣ ಗೌಡ, 12)ಹೊಸಕೋಟೆ ಎಂಟಿಬಿ ನಾಗರಾಜ್. 13)ಹುಣಸೂರು ಎಚ್.ವಿಶ್ವನಾಥ್

ಶಿವಾಜಿನಗರ ಕ್ಷೇತ್ರದಲ್ಲಿ ರೋಷನ್ ಬೇಗ್ ಕುರಿತು ಬಿಜೆಪಿ ಮೌನತಳೆದಿದೆ. ಇಂದು ಹದಿನಾರು ಅನರ್ಹ ಶಾಸಕರು ಬಿಜೆಪಿ ಸೇರ್ಪಡೆಯಾದ ಸಂದರ್ಭದಲ್ಲಿಯೂ ಬಿಜೆಪಿಯ ಯಾವ ಮುಖಂಡರು ಬೇಗ್ ಹೆಸರನ್ನು ಪ್ರಸ್ತಾಪಿಸಿಲ್ಲ. ಅಲ್ಲದೇ ರೋಷನ್ ಬೇಗ್ ಕುರಿತ ಪ್ರಶ್ನೆಗೆ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಕೂಡಾ, ಇನ್ನಷ್ಟೇ ನಿರ್ಧಾರ ಕೈಗೊಳ್ಳಬೇಕಾಗಿದೆ ಎಂದಷ್ಟೇ ತಿಳಿಸಿದ್ದಾರೆ.

ಫೋಟೋ - http://v.duta.us/hYUSHgEA

ಹೆಚ್ಚು ಓದಲು ಇಲ್ಲಿ ಕ್ಲಿಕ್ ಮಾಡಿ - http://v.duta.us/FS4I4wAA

📲 Get Karnatakanews on Whatsapp 💬