ಕನ್ನಡ ಸಾಹಿತ್ಯಕ್ಕೆ ಕಲ್ಯಾಣ ಮೇಲ್ಪಂಕ್ತಿ

  |   Raichurnews

ಕಲಬುರಗಿ: ಕಲ್ಯಾಣ ಕರ್ನಾಟಕ ಭಾಗವು ಜನಪದ ಕಲೆ, ಸಾಹಿತ್ಯದಿಂದ ಸಂಪದ್ಭರಿತವಾಗಿದೆ. ಕನ್ನಡ ಸಾಹಿತ್ಯಕ್ಕೆ ಇದೇ ಭಾಗ ಮೇಲ್ಪಂಕ್ತಿ ಹಾಕಿದೆ ಎಂದು ಮೈಸೂರು ಭಾಷಾ ಸಂಸ್ಥೆಯ ಶಾಸ್ತ್ರೀಯ ಕನ್ನಡ ಅತ್ಯುನ್ನತ ಅಧ್ಯಯನ ಕೇಂದ್ರದ ಯೋಜನಾ ನಿರ್ದೇಶಕ ಪ್ರೊ| ಕೆ.ಆರ್‌. ದುರ್ಗಾದಾಸ್‌ ಹೇಳಿದರು.

ಗುಲಬರ್ಗಾ ವಿಶ್ವವಿದ್ಯಾಲಯದ ಮಹಾತ್ಮಾಗಾಂಧಿ ಸಭಾಂಗಣದಲ್ಲಿ ಬುಧವಾರ ವಿಶ್ವವಿದ್ಯಾಲಯದ ಪ್ರಸಾರಾಂಗ ವತಿಯಿಂದ ಹಮ್ಮಿಕೊಂಡಿದ್ದ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪ್ರದಾನ ಮಾಡಿ ಅವರು ಮಾತನಾಡಿದರು.

ಚರಿತ್ರೆಯನ್ನು ಅವಲೋಕನ ಮಾಡಿದಾಗ ಈ ಭಾಗ ಸಾಂಸ್ಕೃತಿಕ ಸಂಪತ್ತಿನಿಂದ ಕೂಡಿದೆ. ಕವಿರಾಜಮಾರ್ಗ, ವಚನ, ದಾಸ ಸಾಹಿತ್ಯ ಇದೇ ಭಾಗದಿಂದ ಮೂಡಿ ಬಂದಿರುವುದು ಹೆಮ್ಮೆಯ ಸಂಗತಿ. ಈ ಎಲ್ಲ ಚರಿತ್ರೆ, ಇತಿಹಾಸ ಇಟ್ಟುಕೊಂಡು ಹಲಬುವ ಕಾರಣವಿಲ್ಲ. ಪುನಃ ನಮ್ಮ ಸಂಸ್ಕೃತಿ, ಚರಿತ್ರೆ ಕಟ್ಟಬೇಕಾಗಿದೆ ಎಂದು ಕರೆ ನೀಡಿದರು.

ಸಾರ್ವಜನಿಕ ಗ್ರಂಥಾಲಯ ಇಲಾಖೆ ನಿರ್ದೇಶಕ ಡಾ| ಸತೀಶಕುಮಾರ ಹೊಸಮನಿ ಮಾತನಾಡಿ, ಪ್ರಶಸ್ತಿಗಳು ಮನುಷ್ಯರ ಜವಾಬ್ದಾರಿ ಹೆಚ್ಚಿಸುತ್ತವೆ. ನಮ್ಮಲ್ಲಿರುವ ಅಧ್ಯಯನಶೀಲತೆ ಹಾಗೂ ಪರಿಶ್ರಮ ಸಾಧನೆ ಉತ್ತುಂಗಕ್ಕೆ ಎಳೆದೊಯ್ಯಲಿದೆ ಎಂದರು. ಪ್ರಸಾರಾಂಗ ನಿರ್ದೇಶಕ ಪ್ರೊ| ಎಚ್‌.ಟಿ. ಪೋತೆ ಮಾತನಾಡಿ, ಗುಲಬರ್ಗಾ ವಿಶ್ವವಿದ್ಯಾಲಯ ಕಳೆದ 35 ವರ್ಷಗಳಿಂದ ಕರ್ನಾಟಕ ರಾಜ್ಯೋತ್ಸವ ಅಂಗವಾಗಿ ಪ್ರಶಸ್ತಿ ಪ್ರದಾನ ಮಾಡುತ್ತಾ ಬರುತ್ತಿದೆ. ಈ ಬಾರಿ 28 ಜನರಿಗೆ ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಲಾಗುತ್ತಿದೆ ಎಂದರು....

ಫೋಟೋ - http://v.duta.us/BsQQjwAA

ಹೆಚ್ಚು ಓದಲು ಇಲ್ಲಿ ಕ್ಲಿಕ್ ಮಾಡಿ - http://v.duta.us/MCOSDAAA

📲 Get Raichur News on Whatsapp 💬