ಗದುಗಿನಲ್ಲಿ ಸೊರಗುತ್ತಿದೆ 'ಸಹಕಾರಿ'

  |   Gadagnews

„ವೀರೇಂದ್ರ ನಾಗಲದಿನ್ನಿ

ಗದಗ: ಸಹಕಾರಿ ರಂಗದ ತೊಟ್ಟಿಲು ತೂಗಿದ ಗದಗ ಜಿಲ್ಲೆಯಲ್ಲೇ ನಾನಾ ಕಾರಣಗಳಿಂದ ಸಹಕಾರ ಕ್ಷೇತ್ರ ಸೊರಗುತ್ತಿದೆ. ಜಿಲ್ಲೆಯಲ್ಲಿ 968 ವಿವಿಧ ಸಹಕಾರ ಸಂಘಗಳು ನೋಂದಣಿಯಾಗಿವೆ. ಈ ಪೈಕಿ ಸದ್ಯ 853 ಕಾರ್ಯ ನಿರ್ವಹಿಸುತ್ತಿದ್ದು, 41 ಸ್ಥಗಿತಗೊಂಡಿವೆ. 74 ಸಹಕಾರಿ ಸಂಘಗಳು ಆರ್ಥಿಕವಾಗಿ ಚೇತರಿಸಿಕೊಳ್ಳಲಾಗದೇ ಸಮಾಪನೆಗೊಂಡಿವೆ.ಆ ಪೈಕಿ ಹಲವು ಸಂಘಗಳು ಆರ್ಥಿಕ ಏಳು-ಬೀಳುಗಳನ್ನು ಎದುರಿಸಿ ಸಬಲಗೊಂಡಿದ್ದರೆ ಹಲವು ಸಂಸ್ಥೆಗಳು ನೇಪತ್ಯಕ್ಕೆ ಸರಿದಿವೆ.

ಸಹಕಾರಿ ರಂಗದಲ್ಲಿ ಗದಗ ಜಿಲ್ಲೆಗೆ ವಿಶೇಷ ಸ್ಥಾನವಿದೆ. ಭಾರತ ಸ್ವಾತಂತ್ರ್ಯಗೊಳ್ಳುವ ಮುನ್ನವೇ ಜಿಲ್ಲೆಯಲ್ಲಿ ಸಹಕಾರಿ ರಂಗದ ತೊಟ್ಟಿಲು ತೂಗಿದ್ದಲ್ಲದೇ ಈ ಭಾಗದಲ್ಲಿ ಉಚ್ಛಾಯ ಸ್ಥಿತಿ ಕಂಡಿತ್ತೆಂಬುದೀಗ ಇತಿಹಾಸ.

ನಷ್ಟದಲ್ಲೇ ದಿನ ದೂಡುತ್ತಿವೆ: ಸದ್ಯ ಕಾರ್ಯ ನಿರ್ವಹಿಸುತ್ತಿರುವ 853 ಸಹಕಾರಿ ಸಂಘಗಳಲ್ಲಿ ಅರ್ಧಕ್ಕಿಂತ ಹೆಚ್ಚು ಸಂಘಗಳು ನಷ್ಟದಲ್ಲಿವೆ. 396 ಲಾಭದಲ್ಲಿದ್ದರೆ, 66 ಸಹಕಾರಿ ಸಂಘಗಳು ಲಾಭ-ನಷ್ಟವಿಲ್ಲದೇ ಯಥಾಸ್ಥಿತಿಯಲ್ಲಿ ಸಾಗುತ್ತಿವೆ. ಇನ್ನುಳಿದಂತೆ 506 ಸಹಕಾರಿ ಸಂಘಗಳು ಆರ್ಥಿಕ ಮುಗ್ಗಟ್ಟಿಗೆ ಸಿಲುಕಿದ್ದು, ನಷ್ಟದಲ್ಲೇ ದಿನ ದೂಡುತ್ತಿರುವುದು ಆತಂಕಕಾರಿ ಸಂಗತಿ. ಜಿಲ್ಲೆಯಲ್ಲಿ 50 ಸೌಹಾರ್ದ ಸಹಕಾರಿ ಬ್ಯಾಂಕ್‌ಗಳು ಕಾರ್ಯ ನಿರ್ವಹಿಸುತ್ತಿದ್ದು, ಆ ಪೈಕಿ "ಎ', "ಬಿ' ವರ್ಗದಲ್ಲಿ ಗುರುತಿಸಿರುವ 8 ಬ್ಯಾಂಕ್‌ಗಳು ಲಾಭದಾಯಕವಾಗಿವೆ. 13 "ಸಿ' ವರ್ಗದಲ್ಲಿ ಗುರುತಿಸಿಕೊಂಡಿದ್ದರೂ ಲಾಭದ ಹಾದಿಯಲ್ಲಿ ಮುನ್ನಡೆಯುತ್ತಿವೆ. ಇನ್ನುಳಿದಂತೆ ಎರಡು ಬ್ಯಾಂಕ್‌ಗಳು "ಡಿ' ಕ್ಯಾಟಗರಿಯಲ್ಲಿ ಗುರುತಿಸಿಕೊಂಡಿವೆ....

ಫೋಟೋ - http://v.duta.us/DxCXgQAA

ಹೆಚ್ಚು ಓದಲು ಇಲ್ಲಿ ಕ್ಲಿಕ್ ಮಾಡಿ - http://v.duta.us/OR9ESQAA

📲 Get Gadag News on Whatsapp 💬