"ಜನರ ತೆರಿಗೆಯಿಂದ ನನ್ನ ವೇತನ, ಬಟ್ಟೆ, ಎಸಿ ಚೇಂಬರ್‌...'

  |   Udupinews

ಉದಯವಾಣಿಯ ನೂತನ ಕಾರ್ಯಕ್ರಮ ಮಾಲಿಕೆ "ಜೀವನ ಕಥನ' ಮಕ್ಕಳಲ್ಲಿ ಸ್ವತಂತ್ರ ಆಲೋಚನಾ ಸಾಮರ್ಥ್ಯ ಬೆಳೆಸುವ ಸಲುವಾಗಿಯೇ ರೂಪುಗೊಂಡಿರುವಂಥದ್ದು. ಮಕ್ಕಳ ದಿನಾಚರಣೆ ಒಂದು ಅರ್ಥಪೂರ್ಣ ಆಚರಣೆಯಾಗಲಿ ಎಂಬ ಉದ್ದೇಶದಿಂದ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳ ಒಟ್ಟು ಒಂಬತ್ತು ತಾಲೂಕುಗಳಲ್ಲಿ ವಿಭಿನ್ನ ವೃತ್ತಿ ಸಾಧಕರೊಂದಿಗೆ ಸಂವಾದ ಬುಧವಾರ ಏರ್ಪಡಿಸಲಾಗಿತ್ತು. ಎಲ್ಲೆಡೆಯೂ ಹತ್ತಕ್ಕೂ ಹೆಚ್ಚು ಶಾಲೆಗಳ ಮಕ್ಕಳು ಸಂವಾದದಲ್ಲಿ ಭಾಗವಹಿಸಿದರು. ಈ ಹೊಸ ಚಿಂತನೆ ಬದುಕಿನ ಹಲವು ಸಾಧ್ಯತೆಗಳನ್ನು ತೆರೆದಿಟ್ಟಿದೆ ಎಂಬ ಅಭಿಪ್ರಾಯ ಶಿಕ್ಷಣ ಅಧಿಕಾರಿಗಳಿಂದ, ಶಾಲಾ ಮುಖ್ಯಸ್ಥರಿಂದ ಕೇಳಿ ಬಂತು. ಹೊಸ ಮಾಲಿಕೆಗೆ ಸಹಕರಿಸಿದ ಎಲ್ಲ ಶಾಲೆಗಳಿಗೂ ಅಭಿನಂದನೆಗಳು.

ಉಡುಪಿ: ನಿಮ್ಮಲ್ಲಿ ಎಷ್ಟು ಮಕ್ಕಳು ನನ್ನ ಕಚೇರಿ ನೋಡಿದ್ದೀರಿ?

ಎಷ್ಟು ಮಕ್ಕಳು ನನ್ನ ಕಚೇರಿ ನೋಡಿದ್ದೀರಿ?

ಇದು ಸುವರ್ಣ ಸಂಭ್ರಮದಲ್ಲಿರುವ ಉದಯವಾಣಿಯು ಮಕ್ಕಳ ದಿನಾಚರಣೆಯ ಸಂದರ್ಭದಲ್ಲಿ ನ.13ರಂದು ಏರ್ಪಡಿಸಿ "ಜೀವನಕಥನ' ಸಂವಾದ ಕಾರ್ಯಕ್ರಮದಲ್ಲಿ ಉಡುಪಿ ಜಿಲ್ಲಾಧಿಕಾರಿ ಜಿ. ಜಗದೀಶ್‌ ಅವರು ಮಕ್ಕಳೆದುರು ಮಂಡಿಸಿದ ಪ್ರಶ್ನೆ.

ಅವರು ಮುಂದುವರಿಸಿ, "ನೀವು 5 ರೂ. ಚಾಕಲೇಟ್‌ ತಿಂದರೆ ಅದರಲ್ಲಿ ಎರಡು ರೂ. ತೆರಿಗೆಯೂ ಸೇರಿಕೊಂಡಿರುತ್ತದೆ. ನಿಮ್ಮಂತಹವರು ಚಾಕಲೇಟ್‌ ತಿಂದಾಗ ಆ ತೆರಿಗೆ ಹಣ ನಮಗೆ ವೇತನವಾಗಿ ಬರುತ್ತದೆ. ನನ್ನ ಕಚೇರಿಯಲ್ಲಿ ರಿವಾಲ್ವಿಂಗ್‌ ಆಸನವಿದೆ. ದೊಡ್ಡ ಕಚೇರಿ ಸಭಾಂಗಣವಿದೆ. ನಾನು ತೊಡುವ ಬಟ್ಟೆಯೂ ತೆರಿಗೆದಾರರ ಹಣದಿಂದಲೇ ಬಂದಿರುವುದು. ಹೆಚ್ಚೇಕೆ ನಾನು ಊಟ ಮಾಡೂದು ನಿಮ್ಮ ತೆರಿಗೆ ಹಣದಿಂದ...' ಎಂದು ಸರಕಾರಿ ಅಧಿಕಾರಿಗಳ ಉತ್ತರದಾಯಿತ್ವವನ್ನು ಸ್ಮರಣೆಗೆ ತಂದುಕೊಂಡರು....

ಫೋಟೋ - http://v.duta.us/VvkrXwAA

ಹೆಚ್ಚು ಓದಲು ಇಲ್ಲಿ ಕ್ಲಿಕ್ ಮಾಡಿ - http://v.duta.us/C1TwRQAA

📲 Get Udupi News on Whatsapp 💬