ಜಮಖಂಡಿಯಲ್ಲಿ ಮಾವಾ ಮಾರಾಟ ಜೋರು?

  |   Bagalkotnews

ಜಮಖಂಡಿ: ನಗರದಲ್ಲಿ ಮಾವಾ ಮಾರಾಟ ದಂಧೆ ಜೋರಾಗಿದೆ. ತಂಬಾಕು, ಅಡಿಕೆ ಉಪಯೋಗಿಸಿ ಮನೆಯಲ್ಲಿ ಮಾವಾ ಸಿದ್ಧಗೊಳಿಸಿ ಮಾರಾಟ ಮಾಡುವ ದಂಧೆ ರಾಜಾರೋಷವಾಗಿ ನಡೆಯುತ್ತಿದ್ದು, ಪೊಲೀಸ್‌ ಇಲಾಖೆ ನಿಯಂತ್ರಿಸುವಲ್ಲಿ ವಿಫಲವಾಗಿದೆ ಎಂದು ಸಾರ್ವಜನಿಕರಿಂದ ಆರೋಪಗಳು ಕೇಳಿ ಬರುತ್ತಿವೆ.

ಮಾವಾ ದಂಧೆಕೋರರು ತಮ್ಮ ಮನೆಗಳಲ್ಲಿ ಮಷೀನ್‌ಗಳ ಮೂಲಕ ಸಿದ್ಧಪಡಿಸಿದ ಮಾವಾ ಪಾಕೆಟ್‌ಗಳನ್ನು ಕಳೆದ 15 ದಿನಗಳಿಂದ ಗುಪ್ತವಾಗಿ ಮಾರಾಟ ನಡೆಸುತ್ತಿದ್ದಾರೆ. ಮೊಬೈಲ್‌ ಮೂಲಕ ಮಾವಾ ದಂಧೆ ಜೋರಾಗಿದ್ದು, ದಿನದಿಂದ ದಿನಕ್ಕೆ ಸಂಚಾರಿ ಮಾವಾ ಮಾರಾಟಗಾರರ ಸಂಖ್ಯೆ ಹೆಚ್ಚುತ್ತಿದೆ ಎಂಬ ಆತಂಕ ಸಾರ್ವಜನಿಕರಲ್ಲಿ ಮೂಡಿದೆ. ಪೊಲೀಸ್‌ ಠಾಣೆಗೆ ನೂತನವಾಗಿ ಪಿಎಸ್‌ಐ ಮತ್ತು ಸಿಪಿಐ ನಿಯೋಜನೆಗೊಂಡ ದಿನದಿಂದ ಒಂದು ವಾರದವರೆಗೆ ಮಾತ್ರ ಮಾವಾ ಮಾರಾಟ ದಂಧೆಗಳಿಗೆ ಕಡಿವಾಣ ಬೀಳುತ್ತದೆ.

ಮಾವಾ ಮಾರಾಟ ಅಂಗಡಿಗಳು ಒಂದು ವಾರ ಸಾಮಾನ್ಯವಾಗಿ ಬಂದ್‌ ಆಗಿರುತ್ತದೆ. ಪೊಲೀಸ್‌ ಇಲಾಖೆ ಕಣ್ಣುತಪ್ಪಿಸಿ ಮಾವಾ ಮಾರಾಟ ದಂಧೆ ನಡೆಯುತ್ತಿದೆ. ಮಾರಾಟಗಾರರು ಬೇಕಾದವರಿಗೆ ಮಾತ್ರ ಮಾವಾ ನೀಡುತ್ತಿದ್ದಾರೆ. ಬೇರೆಯವರು ಕೇಳಿದರೆ ನೀಡುವುದಿಲ್ಲ, ಮಾರಾಟ ಮಾಡುವುದಿಲ್ಲ ಎಂದು ಹೇಳುತ್ತಾರೆ.

ನಗರಕ್ಕೆ ಹೊಸದಾಗಿ ಪೊಲೀಸ್‌ ಅಧಿಕಾರಿಗಳು ಅಧಿಕಾರ ವಹಿಸಿಕೊಂಡ ಸಂದರ್ಭದಲ್ಲಿ ಅಕ್ರಮ ಮಾವಾ ಮಾರಾಟ ದಂಧೆ ಬಂದ್‌ ಮಾಡಿಸುವುದು ಸಾಮಾನ್ಯವಾಗಿದೆ.ನಂತರ ಮೊದಲಿನಂತೆ ವ್ಯಾಪಾರ ವಹಿವಾಟ ನಡೆಸುವುದು ಮಾಮೂಲಿಯಾಗಿದೆ ಎಂದು ಸಾರ್ವಜನಿಕ ವಲಯದಲ್ಲಿ ಮಾತುಗಳು ಕೇಳಿಬರುತ್ತಿವೆ.

ಫೋಟೋ - http://v.duta.us/_lTUPgAA

ಹೆಚ್ಚು ಓದಲು ಇಲ್ಲಿ ಕ್ಲಿಕ್ ಮಾಡಿ - http://v.duta.us/5A68fgEA

📲 Get Bagalkot News on Whatsapp 💬