ಡೂಡಲ್‌ ಫಾರ್‌ ಗೂಗಲ್‌ ಡಿಸೈನ್‌ ಸ್ಪರ್ಧೆ: ಮಂಗಳೂರಿನ ಭೂಷಣ್‌ ಫೈನಲಿಸ್ಟ್‌

  |   Dakshina-Kannadanews

ಮಂಗಳೂರು: ಮಕ್ಕಳ ದಿನಾಚರಣೆಯ ಅಂಗವಾಗಿ "ಗೂಗಲ್‌' ಅಂತರ್ಜಾಲ ತಾಣವು ನಡೆಸಿದ ರಾಷ್ಟ್ರ ಮಟ್ಟದ "ಡೂಡಲ್‌' ವಿನ್ಯಾಸ ಸ್ಪರ್ಧೆಯಲ್ಲಿ ಮಂಗಳೂರಿನ ಕೊಡಿಯಾಲ್‌ಬೈಲ್‌ ಸಂತ ಅಲೋಶಿಯಸ್‌ ಪ್ರೌಢ ಶಾಲೆಯ ವಿದ್ಯಾರ್ಥಿ ಭೂಷಣ್‌ ಫೈನಲಿಸ್ಟ್‌ ಆಗಿ ಆಯ್ಕೆಯಾಗಿದ್ದಾರೆ.

1ರಿಂದ 10ನೇ ತರಗತಿ ವರೆಗಿನ ವಿದ್ಯಾರ್ಥಿಗಳಿಗಾಗಿ 5 ವಿಭಾಗಗಳಲ್ಲಿ ನಡೆದ ಈ ಸ್ಪರ್ಧೆಯಲ್ಲಿ ದೇಶಾದ್ಯಂತದ 6 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸಿದ್ದರು. ಈ ವಿನ್ಯಾಸ ಸ್ಪರ್ಧೆಗೆ "ನಾನು ಬೆಳೆದು ದೊಡ್ಡವನಾದಾಗ' ಎಂಬ ವಿಷಯವನ್ನು ನೀಡಲಾಗಿತ್ತು. ಪ್ರೌಢಶಾಲಾ ವಿಭಾಗದಿಂದ ರಾಷ್ಟ್ರ ಮಟ್ಟದಲ್ಲಿ ಅಂತಿಮಗೊಂಡ ನಾಲ್ಕು ಚಿತ್ರಗಳಲ್ಲಿ ಭೂಷಣ್‌ ರಚಿಸಿದ ಚಿತ್ರವೂ ಒಂದು.

ಫೈನಲಿಸ್ಟ್‌ನ ಇಬ್ಬರಲ್ಲಿ ಭೂಷಣ್‌ ಒಬ್ಬರು

ಭೂಷಣ್‌ ಅವರು ಕಾಸರಗೋಡಿನ ಮಂಜೇಶ್ವರದ ನವೀನ್‌- ವಿಶಾಲಾಕ್ಷಿ ದಂಪತಿಯ ಪುತ್ರನಾಗಿದ್ದು, ಮಂಗಳೂರಿನ ಸಂತ ಅಲೋಶಿಯಸ್‌ ಇಂಗ್ಲಿಷ್‌ ಮಾಧ್ಯಮ ಹೈಸ್ಕೂಲಿನ 9ನೇ ತರಗತಿಯ ವಿದ್ಯಾರ್ಥಿ. ಕರ್ನಾಟಕದಿಂದ ಫೈನಲಿಸ್ಟ್‌ ಆದ ಇಬ್ಬರು ವಿದ್ಯಾರ್ಥಿಗಳಲ್ಲಿ ಭೂಷಣ್‌ ಒಬ್ಬರಾಗಿದ್ದಾರೆ. ಇನ್ನೋರ್ವ ವಿದ್ಯಾರ್ಥಿ ಬೆಂಗಳೂರಿನ ಕೇಂದ್ರೀಯ ವಿದ್ಯಾಲಯದ 8ನೇ ತರಗತಿ ವಿದ್ಯಾರ್ಥಿ.

ದಿಲ್ಲಿಯಲ್ಲಿ ಪ್ರದಾನ

ಈ ಸಾಧನೆಗಾಗಿ ವಿದ್ಯಾರ್ಥಿ ಗಳು ಮತ್ತು ಅವರ ಹೆತ್ತವರನ್ನು ಹೊಸದಿಲ್ಲಿಯಲ್ಲಿ ಬುಧವಾರ ನಡೆದ ಸಮಾರಂಭದಲ್ಲಿ ಸಮ್ಮಾನಿಸಿ ಪ್ರಶಸ್ತಿ ವಿತರಿಸಲಾಯಿತು. ಗೂಗಲ್‌ ಕ್ರೋಮ್‌ ಲ್ಯಾಪ್‌ಟಾಪ್‌ನ್ನು ಪ್ರಶಸ್ತಿ ರೂಪದಲ್ಲಿ ನೀಡಲಾಗಿದೆ....

ಫೋಟೋ - http://v.duta.us/1BWkMQAA

ಹೆಚ್ಚು ಓದಲು ಇಲ್ಲಿ ಕ್ಲಿಕ್ ಮಾಡಿ - http://v.duta.us/4BVtsQAA

📲 Get Dakshina Kannada News on Whatsapp 💬