"ತಂದೆ - ಸೇನೆಯ ವೀರಗಾಥೆಯೇ ಸೈನಿಕನಾಗಲು ಪ್ರೇರಣೆ'

  |   Udupinews

ಉದಯವಾಣಿಯ ನೂತನ ಕಾರ್ಯಕ್ರಮ ಮಾಲಿಕೆ "ಜೀವನ ಕಥನ' ಮಕ್ಕಳಲ್ಲಿ ಸ್ವತಂತ್ರ ಆಲೋಚನಾ ಸಾಮರ್ಥ್ಯ ಬೆಳೆಸುವ ಸಲುವಾಗಿಯೇ ರೂಪುಗೊಂಡಿರುವಂಥದ್ದು. ಮಕ್ಕಳ ದಿನಾಚರಣೆ ಒಂದು ಅರ್ಥಪೂರ್ಣ ಆಚರಣೆಯಾಗಲಿ ಎಂಬ ಉದ್ದೇಶದಿಂದ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳ ಒಟ್ಟು ಒಂಬತ್ತು ತಾಲೂಕುಗಳಲ್ಲಿ ವಿಭಿನ್ನ ವೃತ್ತಿ ಸಾಧಕರೊಂದಿಗೆ ಸಂವಾದ ಬುಧವಾರ ಏರ್ಪಡಿಸಲಾಗಿತ್ತು. ಎಲ್ಲೆಡೆಯೂ ಹತ್ತಕ್ಕೂ ಹೆಚ್ಚು ಶಾಲೆಗಳ ಮಕ್ಕಳು ಸಂವಾದದಲ್ಲಿ ಭಾಗವಹಿಸಿದರು. ಈ ಹೊಸ ಚಿಂತನೆ ಬದುಕಿನ ಹಲವು ಸಾಧ್ಯತೆಗಳನ್ನು ತೆರೆದಿಟ್ಟಿದೆ ಎಂಬ ಅಭಿಪ್ರಾಯ ಶಿಕ್ಷಣ ಅಧಿಕಾರಿಗಳಿಂದ, ಶಾಲಾ ಮುಖ್ಯಸ್ಥರಿಂದ ಕೇಳಿ ಬಂತು. ಹೊಸ ಮಾಲಿಕೆಗೆ ಸಹಕರಿಸಿದ ಎಲ್ಲ ಶಾಲೆಗಳಿಗೂ ಅಭಿನಂದನೆಗಳು.

ಬೈಂದೂರು: ಸುವರ್ಣ ಸಂಭ್ರಮದಲ್ಲಿರುವ "ಉದಯವಾಣಿ'ಯು ಮಕ್ಕಳ ದಿನಾಚರಣೆಯ ಪ್ರಯುಕ್ತ ನ.13ರಂದು ಆಯೋಜಿಸಿದ ವಿವಿಧ ವೃತ್ತಿಗಳ ಸಾಧಕರ "ಜೀವನ ಕಥನ' ಸಂವಾದ ಕಾರ್ಯಕ್ರಮದಲ್ಲಿ ಮಾಜಿ ಸೈನಿಕ ಜಾನ್‌ ಸಿ. ಥಾಮಸ್‌ ಮಕ್ಕಳ ಪ್ರಶ್ನೆಗಳಿಗೆ ಉತ್ತರಿಸಿದರು. ಸುವರ್ಣ ಮಹೋತ್ಸವ ಹೊಸ್ತಿಲ್ಲಲ್ಲಿರುವ ಬೈಂದೂರಿನ ರತ್ತುಬಾೖ ಜನತಾ ಪ್ರೌಢಶಾಲೆಯಲ್ಲಿ ಈ ಕಾರ್ಯಕ್ರಮ ನಡೆಯಿತು.

ಸಂವಾದದಲ್ಲಿ ಮಕ್ಕಳ ಪ್ರಶ್ನೆಗಳಿಗೆ ಉತ್ತರಿಸಿದ ಜಾನ್‌ ಸಿ. ಥಾಮಸ್‌ ಅವರು, ನಾನು ಸೇನೆಗೆ ಸೇರಲು ಹಿಂದೆ ಬ್ರಿಟಿಷ್‌ ಸೇನೆಯಲ್ಲಿದ್ದ ತಂದೆ ಮತ್ತು ಸೈನ್ಯದ ಬಗೆಗೆ ಕೇಳಿದ್ದ ವೀರಗಾಥೆಯೇ ಕಾರಣ. ಸೇನೆ ಸುಖದ ಸುಪ್ಪತ್ತಿ ಗೆಯಲ್ಲ. ಸೈನಿಕರ ಜೀವನ ಮುಳ್ಳಿನ ಹಾದಿಯ ನಡಿಗೆ. ಆದರೆ ದೇಶ ಕಾಯುವುದು ಹೆಮ್ಮೆಯ ಕಾರ್ಯ. ಹೆಚ್ಚೆಚ್ಚು ಮಕ್ಕಳು ಸೇನೆಗೆ ಸೇರುವ ಕುರಿತು ಆಸಕ್ತಿ ಬೆಳೆಸಿ ಕೊಳ್ಳಲು ಇದೊಂದು ಮಾದರಿ ಕಾರ್ಯಕ್ರಮವಾಗಲಿ ಎಂದರು....

ಫೋಟೋ - http://v.duta.us/CbGvGAEA

ಹೆಚ್ಚು ಓದಲು ಇಲ್ಲಿ ಕ್ಲಿಕ್ ಮಾಡಿ - http://v.duta.us/ry4CYQAA

📲 Get Udupi News on Whatsapp 💬