"ದುರಾಸೆಯಿಂದಾಗಿಯೇ ಮೀನುಗಳಿಲ್ಲದ ದಿನಗಳು ಎದುರಾಗಿವೆ'

  |   Udupinews

ಉದಯವಾಣಿಯ ನೂತನ ಕಾರ್ಯಕ್ರಮ ಮಾಲಿಕೆ "ಜೀವನ ಕಥನ' ಮಕ್ಕಳಲ್ಲಿ

ಸ್ವತಂತ್ರ ಆಲೋಚನಾ ಸಾಮರ್ಥ್ಯ ಬೆಳೆಸುವ ಸಲುವಾಗಿಯೇ ರೂಪುಗೊಂಡಿರುವಂಥದ್ದು. ಮಕ್ಕಳ ದಿನಾಚರಣೆ ಒಂದು ಅರ್ಥಪೂರ್ಣ ಆಚರಣೆಯಾಗಲಿ ಎಂಬ ಉದ್ದೇಶದಿಂದ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳ ಒಟ್ಟು ಒಂಬತ್ತು ತಾಲೂಕುಗಳಲ್ಲಿ ವಿಭಿನ್ನ ವೃತ್ತಿ ಸಾಧಕರೊಂದಿಗೆ ಸಂವಾದ ಬುಧವಾರ ಏರ್ಪಡಿಸಲಾಗಿತ್ತು. ಎಲ್ಲೆಡೆಯೂ ಹತ್ತಕ್ಕೂ ಹೆಚ್ಚು ಶಾಲೆಗಳ ಮಕ್ಕಳು ಸಂವಾದದಲ್ಲಿ ಭಾಗವಹಿಸಿದರು. ಈ ಹೊಸ ಚಿಂತನೆ ಬದುಕಿನ ಹಲವು ಸಾಧ್ಯತೆಗಳನ್ನು ತೆರೆದಿಟ್ಟಿದೆ ಎಂಬ ಅಭಿಪ್ರಾಯ ಶಿಕ್ಷಣ ಅಧಿಕಾರಿಗಳಿಂದ, ಶಾಲಾ ಮುಖ್ಯಸ್ಥರಿಂದ ಕೇಳಿ ಬಂತು. ಹೊಸ ಮಾಲಿಕೆಗೆ ಸಹಕರಿಸಿದ ಎಲ್ಲ ಶಾಲೆಗಳಿಗೂ ಅಭಿನಂದನೆಗಳು.

ಕುಂದಾಪುರ: ಮನೆಯ ಆರ್ಥಿಕ ಪರಿಸ್ಥಿತಿ ಉತ್ತಮವಾಗಿರಲಿಲ್ಲ. ತಂದೆಗೆ ಆರೋಗ್ಯ ಇರಲಿಲ್ಲ. ವಿದ್ಯೆ ಮುಂದುವರಿಸಲು ಸಾಧ್ಯವಾಗಲಿಲ್ಲ. ಶಾಲೆ ಮೊಟಕುಗೊಳಿಸಿ 39 ವರ್ಷಗಳ ಹಿಂದೆ ಮೀನು ಗಾರಿಕೆಯಲ್ಲಿ ತೊಡಗಿಕೊಂಡೆ. ಆಗ ಯಾಂತ್ರೀಕೃತ ದೋಣಿಗಳಿರಲಿಲ್ಲ, ಮೊಬೈಲ್‌ ಇರಲಿಲ್ಲ, ಆಧುನಿಕ ಸೌಕರ್ಯಗಳು ಇಲ್ಲದ ಆ ದಿನಗಳಲ್ಲಿ ಸಮುದ್ರಕ್ಕೆ ತೆರಳಿದವರು ಮರಳಿ ಬಂದರೆ ಬಂದರು, ಇಲ್ಲದಿದ್ದರೆ ಮನೆಗೊಬ್ಬ ಸದಸ್ಯ ಕಡಿಮೆಯಾದಂತೆಯೇ. ಆದರೆ ಈಗ ಆಧುನಿಕತೆಯ ಭರಾಟೆಯಲ್ಲಿ ಎಲ್ಲವೂ ಇದ್ದೂ ಏನೂ ಇಲ್ಲದಂತಿರುವ ಸ್ಥಿತಿಗೆ ಬಂದು ದುರಾಸೆ ಯಿಂದಾಗಿ ಮೀನಿಲ್ಲದ ದಿನಗಳನ್ನು ಕಳೆಯುತ್ತಿದ್ದೇವೆ ಎಂದು ಹೇಳಿ ಕ್ಷಣಕಾಲ ಭಾವುಕರಾದರು ಗಂಗೊಳ್ಳಿಯ ಮೀನುಗಾರ ಜಿ. ರಾಮಪ್ಪ ಖಾರ್ವಿ....

ಫೋಟೋ - http://v.duta.us/PuZMQwAA

ಹೆಚ್ಚು ಓದಲು ಇಲ್ಲಿ ಕ್ಲಿಕ್ ಮಾಡಿ - http://v.duta.us/LxlgngAA

📲 Get Udupi News on Whatsapp 💬