ನಾವು ಸಂತೋಷದಿಂದ ಬಿಜೆಪಿ ಸೇರಿದ್ದೇವೆ: ಎಚ್. ವಿಶ್ವನಾಥ್

  |   Karnatakanews

ಬೆಂಗಳೂರು: ನಾವು 17 ಜನರು ಅತ್ಯಂತ ಸಂತೋಷದಿಂದ ಬಿಜೆಪಿಯನ್ನು ಸೇರಿದ್ದೇವೆ. ನಾವು ಬಹಳ ವರ್ಷದಿಂದ ರಾಜಕಾರಣ ಮಾಡಿಕೊಂಡು ಬಂದವರು. ಯಾವ ಸಂದರ್ಭದಲ್ಲಿ ಏನಾಗುತ್ತದೆ ಎಂದು ಯಾರಿಗೂ ಗೊತ್ತಿಲ್ಲ ಎಂದು ಎಚ್ ವಿಶ್ವನಾಥ್ ಹೇಳಿದರು.

ಅನರ್ಹರಾಗಿದ್ದ ಶಾಸಕರು ಇಂದು ಬೆಂಗಳೂರಿನಲ್ಲಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ, ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಸಮ್ಮುಖದಲ್ಲಿ ಬಿಜೆಪಿಗೆ ಸೇರ್ಪಡೆಯಾದರು.

ನಂತರ ಮಾತನಾಡಿದ ಎಚ್ ವಿಶ್ವನಾಥ್, ಎಲೈ ಮನುಷ್ಯನೆ ಯಾವ ಕಾಲಕ್ಕೆ ನಿನಗೆ ಯೋಗ ಫಲಾಪಲ. ಬರುತ್ತದೆಯೋ ದೃಷ್ಟಿ ಕರ್ತನಾದ ನನಗೆ ಅರ್ಥವಾಗುವುದಿಲ್ಲ. ಬಂದ ಫಲಾನುಫಲಗಳನ್ನು ಅನಭವಿಸು ಎಂದು ಸೃಷ್ಟಿಕರ್ತ ಹೇಳುತ್ತಾನೆ. ನಾವ್ಯಾರು ಅಧಿಕಾರಕ್ಕಾಗಿ ಅಧಿಕಾರ ತ್ಯಾಗ ಮಾಡಿದವರಲ್ಲ. ರಾಜ್ಯದಲ್ಲಿದ್ದ ರಾಕ್ಷಸ ರಾಜಕಾರಣ ಅಂತ್ಯಗೊಳಿಸಲು ನಾವು ಪಕ್ಷಾಂತರ ಮಾಡಬೇಕಾಯಿತು. ಇದು ಪಕ್ಷಾಂತರ ಅಲ್ಲ. ಈಗ ಪಕ್ಷ ರಾಜಕಾರಣ ವಿಫಲವಾಗಿದೆ. ಇಡೀ ದೇಶದಲ್ಲಿಯೇ ರಾಜಕಾರಣ ಧೃವೀಕರಣ ಆಗಿದೆ ಎಂದರು.

17 ಜನರಿಗೆ ಶಿಕ್ಷೆ ಮಾಡಲೇಬೇಕೆಂದು ಸ್ಪೀಕರ್ ಆಗಿದ್ದ ರಮೇಶ್ ಕುಮಾರ್ ಅವರು ಕರ್ನಾಟಕದ ರಾಜಕಾರಣದಿಂದ ದೂರ ಇಡಲು ಹುನ್ನಾರ ಮಾಡಿದ್ದರು. ಅವರ ಹುನ್ನಾರವನ್ನು ಸುಪ್ರೀಂ ಕೋರ್ಟ್ ತಡೆ ಹಿಡಿದಿದೆ. ನಮಗೆ ಸ್ಪರ್ಧೆಗೆ ಅವಕಾಶ ಕೊಟ್ಟಿದೆ ಎಂದು ಹೇಳಿದರು....

ಫೋಟೋ - http://v.duta.us/JlqANQAA

ಹೆಚ್ಚು ಓದಲು ಇಲ್ಲಿ ಕ್ಲಿಕ್ ಮಾಡಿ - http://v.duta.us/lUwGkgAA

📲 Get Karnatakanews on Whatsapp 💬